ಕಾವೇರಿ ಕೊಳ್ಳವನ್ನು ಪರೀಕ್ಷಿಸಲಿರುವ ಕಾವೇರಿ ಉನ್ನತಾಧಿಕಾರಿಗಳ ತಂಡ

ಕಾವೇರಿ ಕೊಳ್ಳವನ್ನು ಪರೀಕ್ಷಿಸಲಿರುವ ಕಾವೇರಿ ಉನ್ನತಾಧಿಕಾರಿಗಳ ತಂಡ

Oct 06, 2016 05:39:56 PM (IST)

ಬೆಂಗಳೂರು: ಸುಪ್ರೀಂ ಕೋರ್ಟ್ ಅನುಮತಿಯಿಂದ ಕೇಂದ್ರ ಸರ್ಕಾರವು ನೇಮಿಸಿದ ಕಾವೇರಿ ಉನ್ನತ ಅಧಿಕಾರಿಗಳ ತಂಡ ಇಂದು ನಗರಕ್ಕೆ ಭೇಟಿ ನೀಡಲಿದೆ.

ರಾಜ್ಯ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ರಾಖೇಶ್ ಸಿಂಗ್ ಮುಖ್ಯ ಕಾರ್ಯದರ್ಶಿ ಪ್ರತಿನಿಧಿಯಾಗಿ ನಿಯೋಜನೆಯಾಗುವ ಸಾಧ್ಯತೆ ಇದ್ದು, ಪ್ರತಿನಿಧಿಗಳ ಹೆಸರು ಇನ್ನೂ ಸರಿಯಾಗಿ ಘೋಷಣೆಯಾಗಿಲ್ಲ. ಇದರ ಜೊತೆಗೆ ರಾಜ್ಯದಿಂದಲೂ ಈ ತಂಡಕ್ಕೆ ಸದಸ್ಯರು ನೇಮಕಗೊಳ್ಳಲಿದ್ದಾರೆ.

ಕಾವೇರಿ ಕೊಳ್ಳದ ವಾಸ್ತವ ಪರಿಸ್ಥಿತಿ ಅವಲೋಕಿಸಲಿರುವ ಈ ತಂಡ ನಗರಕ್ಕೆ ಇಂದು ಆಗಮಿಸಲಿದ್ದು, ನಗರದಲ್ಲಿ ನಾಳೆ ಬೆಳಗ್ಗೆ 9.30ಕ್ಕೆ ಸಭೆ ನಡೆಸಲಿದ್ದು, ಬಳಿಕ ಕಾವೇರಿ ಕೊಳ್ಳದ ಪ್ರದೇಶಗಳಿಗೆ ಭೇಟಿ ನೀಡಲಿದೆ.

ಎಸ್.ಮಸೂದ್ ಹುಸೇನ್ ರಾಷ್ಟ್ರೀಯ ಜಲ ಅಭಿವೃದ್ಧಿ ಏಜೆನ್ಸಿ (ಎನ್‌ಡಬ್ಲ್ಯುಡಿಎ) ಡೈರೆಕ್ಟರ್ ಜನರಲ್ ಸೇರಿದಂತೆ ಕೇಂದ್ರದ ಮುಖ್ಯ ಎಂಜಿನಿಯರಿಂಗ್ ವಿಭಾಗದ ಆರ್.ಕೆ. ಗುಪ್ತಾ, ಕೇಂದ್ರ ಜಲ ಆಯೋಗದ ಅಧ್ಯಕ್ಷ ಜಿ.ಎಸ್.ಝಾ ನೇತೃತ್ವದ ತಂಡದಲ್ಲಿ ಸದಸ್ಯರಾಗಿ ಬರಲಿದ್ದಾರೆ.

ಆಯಾ ರಾಜ್ಯದ ಮುಖ್ಯ ಕಾರ್ಯದರ್ಶಿ ಅಥವಾ ಅವರ ಪ್ರತಿನಿಧಿ ಹಾಗೂ ಮುಖ್ಯ ಎಂಜಿನಿಯರ್ ನಿಯೋಜಿಸುವಂತೆ ಕೇಂದ್ರ ಸಚಿವಾಲಯದಿಂದ ನಿರ್ದೇಶನ ನೀಡಲಾಗಿದ್ದು, ಗೋದಾವರಿ,ಕೃಷ್ಣಾ, ಕೊಳ್ಳದ ಸಂಸ್ಥೆಯ ಚೀಫ್ ಎಂಜಿನಿಯರ್, ಅಧಿಕಾರಿಗಳ ನಿಯೋಜನೆಗೆ ಕರ್ನಾಟಕ, ತಮಿಳುನಾಡು ಸೇರಿದಂತೆ ಕೇರಳ ರಾಜ್ಯ ಮತ್ತು ಪಾಂಡಿಚೇರಿಗೂ ಕೇಂದ್ರ ಸಚಿವಾಲಯ ನಿರ್ದೇಶನ ನೀಡಿದೆ.

ಈ ಸಂದರ್ಭ ಕಾವೇರಿ ನೀರಾವರಿ ನಿಗಮದ ಎಂಡಿ ಡಿ.ಎನ್. ಚಿಕ್ಕರಾಯಪ್ಪ ಸೇರಿದಂತೆ ಮೈಸೂರು ವಿಭಾಗದ ಕಾವೇರಿ ನೀರಾವರಿ ನಿಗಮ ಎಂಜಿನಿಯರ್‌ಗಳು ಕಾವೇರಿಕೊಳ್ಳ ಪ್ರದೇಶಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.