ಸಪ್ತ ಶಾಸಕರ ಖಾತೆಗಳ ಪಟ್ಟಿಯ ಕುರಿತು ಅವಲೋಕನ

ಸಪ್ತ ಶಾಸಕರ ಖಾತೆಗಳ ಪಟ್ಟಿಯ ಕುರಿತು ಅವಲೋಕನ

MS   ¦    Jan 13, 2021 07:31:29 PM (IST)
ಸಪ್ತ ಶಾಸಕರ ಖಾತೆಗಳ ಪಟ್ಟಿಯ ಕುರಿತು ಅವಲೋಕನ

ಬೆಂಗಳೂರು: ಇಂದು ಮಧ್ಯಾಹ್ನ ಪ್ರಮಾಣವಚನ ಸ್ವೀಕರಿಸಿರುವ ನೂತನ ಸಚಿವರ ಖಾತೆಗಳು ನಿರ್ಧಾರವಾಗಿತ್ತು ಅದರ ಕುರಿತಾಗಿ ಸಚಿವ ಸಂಪುಟ ವಿವರಗಳನ್ನು ಹಂಚಿಕೊಂಡಿದ್ದೆ. ಅಂತೆಯೇ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ನೇತೃತ್ವದ ಸಂಪುಟದಲ್ಲಿ 'ಸಪ್ತ' ಶಾಸಕರು ಮಂತ್ರಿಗಿರಿ ಅಲಂಕರಿಸಿದ್ದಾರೆ.

ಎಸ್. ಅಂಗಾರ, ಸಿ.ಪಿ. ಯೋಗೇಶ್ವರ್, ಎಂ.ಟಿ.ಬಿ. ನಾಗರಾಜ್, ಆರ್.ಶಂಕರ್, ಅರವಿಂದ ಲಿಂಬಾವಳಿ, ಮುರುಗೇಶ ನಿರಾಣಿ, ಉಮೇಶ್ ಕತ್ತಿ ಸೇರಿ 7 ಮಂದಿ ನೂತನ ಸಚಿವರಾಗಿ ಸಿಗಬಹುದಾದ ಇಲಾಖೆಗಳ ಪಟ್ಟಿವನ್ನು ಊಹಿಸಲಾಗುತ್ತಿದೆ.

ಅದರಂತೆ ಪ್ರವಾಸೋದ್ಯಮ ಇಲಾಖೆ & ಸಾರ್ವಜನಿಕ ಹಾಗೂ ಸಂಪರ್ಕ ಇಲಾಖೆ, ಬೆಂಗಳೂರು ನಗರಾಭಿವೃದ್ಧಿ, ಇಂಧನ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆ, ಅಬಕಾರಿ ಖಾತೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎಂದು ಅಂದಾಜು ಮಾಡಲಾಗಿದೆ.