ಗಣರಾಜ್ಯೋತ್ಸವ ದಿನದ ಫಲಪುಷ್ಪ ಪ್ರದರ್ಶನ ರದ್ದು

ಗಣರಾಜ್ಯೋತ್ಸವ ದಿನದ ಫಲಪುಷ್ಪ ಪ್ರದರ್ಶನ ರದ್ದು

HSA   ¦    Jan 18, 2021 08:53:18 AM (IST)
ಗಣರಾಜ್ಯೋತ್ಸವ ದಿನದ ಫಲಪುಷ್ಪ ಪ್ರದರ್ಶನ ರದ್ದು

ಬೆಂಗಳೂರು: ಗಣರಾಜ್ಯೋತ್ಸವ ದಿನದಂದು ಲಾಲ್ ಭಾಗ್ ನಲ್ಲಿ ನಡೆಯಬೇಕಾಗಿದ್ದ ಫಲಪುಷ್ಪ ಪ್ರದರ್ಶನವನ್ನು ರದ್ದು ಮಾಡಲಾಗಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಎರಡು ದಿನಗಳ ಮೊದಲು ಫಲಪುಷ್ಪ ಪ್ರದರ್ಶನಕ್ಕೆ ಅನುಮತಿ ನೀಡಿದ್ದರು. ಆದರೆ ಬಿಬಿಎಂಪಿ ಅನುಮತಿ ನಿರಾಕರಣೆ ಮಾಡಿದ ಹಿನ್ನೆಲೆಯಲ್ಲಿ ಇದನ್ನು ರದ್ದು ಮಾಡಲಾಗಿದೆ.

2021ರ ಸ್ವಾತಂತ್ರ್ಯೋತ್ಸವ ವೇಳೆ ಈ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲು ನಿರ್ಧರಿಸಲಾಗಿದೆ.

ತೋಟಗಾರಿಕೆ ಇಲಾಖೆಯು ಮಾಡಿದ ಪ್ರಸ್ತಾವಕ್ಕೆ ಮುಖ್ಯಮಂತ್ರಿ ಅನುಮತಿ ನೀಡಿದ್ದರು.