ಬೆಂಗಳೂರು: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೀಡಿರುವಂತಹ ಹೇಳಿಕೆಯು ಚೀನಾದ ವಿಸ್ತರಣಾವಾದವನ್ನು ಧ್ವನಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಟ್ವೀಟ್ ಮಾಡಿರುವರು.
ಕರ್ನಾಟಕ ಆಕ್ರಮಿತ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುತ್ತೇವೆ ಎಂದು ಉದ್ಧವ್ ಠಾಕ್ರೆ ಹೇಳಿದ್ದರು.
ಭಾಷಾ ಆಧಾರದ ಮೇಲೆ ರಾಜ್ಯಗಳ ವಿಂಗಡಣೆ ಆಗಿದೆ. ಇದನ್ನು ಎಲ್ಲರೂ ಒಪ್ಪಿರುವರು. ಆದರೆ ಉದ್ಧವ್ ಠಾಕ್ರೆ ನೀಡಿರುವಂತಹ ಹೇಳಿಕೆಯು ವಿಸ್ತರಣಾ ವಾದವನ್ನು ಬಿಂಬಿಸುವುದು ಎಂದರು.
ಬೆಳಗಾವಿಯಲ್ಲಿ ನಿರ್ಮಿಸಲಾಗಿರುವ ಸುವರ್ಣ ಸೌಧ ಮಹಾರಾಷ್ಟ್ರಕ್ಕೆ ನೀಡಿರುವಂತಹ ಪ್ರತ್ಯುತ್ತರ. ಆದರೆ ಇದನ್ನು ನಮ್ಮಲ್ಲಿನ ಕೆಲವರು ಅರಿಯಲು ವಿಫಲರಾಗಿರುವರು ಎಂದರು.