ಕೋವಿಡ್ ಸಂಕಷ್ಟವಿದ್ದರೂ ಬಿಬಿಎಂಪಿಗೆ ಶೇ.51ರಷ್ಟು ಆಸ್ತಿ ತೆರಿಗೆ ಸಂಗ್ರಹ

ಕೋವಿಡ್ ಸಂಕಷ್ಟವಿದ್ದರೂ ಬಿಬಿಎಂಪಿಗೆ ಶೇ.51ರಷ್ಟು ಆಸ್ತಿ ತೆರಿಗೆ ಸಂಗ್ರಹ

HSA   ¦    Aug 06, 2020 09:01:25 AM (IST)
ಕೋವಿಡ್ ಸಂಕಷ್ಟವಿದ್ದರೂ ಬಿಬಿಎಂಪಿಗೆ ಶೇ.51ರಷ್ಟು ಆಸ್ತಿ ತೆರಿಗೆ ಸಂಗ್ರಹ

ಬೆಂಗಳೂರು: ಕೋವಿಡ್-19 ಸೋಂಕಿನ ಪ್ರಭಾವಿದ್ದರೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಆಸ್ತಿ ತೆರಿಗೆ ಸಂಗ್ರಹದಲ್ಲಿ ತನ್ನ ಗುರಿಯನ್ನು ಮುಟ್ಟಿದೆ.

ಕಳೆದ ನಾಲ್ಕು ತಿಂಗಳಲ್ಲಿ ಬಿಬಿಎಂಪಿಯು ಶೇ. 51ರಷ್ಟು ಆಸ್ತಿ ತೆರಿಗೆ ವಸೂಲಾತಿ ಮಾಡಿದೆ ಎಂದು ತಿಳಿದುಬಂದಿದೆ.

ಆಸ್ತಿ ತೆರಿಗೆಯಾಗಿ 3.500 ಕೋಟಿ ರೂಪಾಯಿಯನ್ನು 2020-21ರ ವಿತ್ತ ವರ್ಷದಲ್ಲಿ ಸಂಗ್ರಹಿಸುವ ಗುರಿ ಇಟ್ಟುಕೊಳ್ಳಲಾಗಿತ್ತು. ಇಲ್ಲಿ ಜುಲೈ 31ರ ತನಕ 1,776 ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ಬಿಬಿಎಂಪಿ ಹೇಳಿದೆ.

ಸಂಗ್ರಹಿಸಿರುವಂತಹ 1776 ಕೋಟಿ ರೂಪಾಯಿಗಳಲ್ಲಿ 902 ಕೋಟಿ ರೂಪಾಯಿ ಆನ್ ಲೈನ್ ಸಂಗ್ರಹದಿಂದ ಬಂದಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.