ಕೊರೋನ ಅಪ್ಡೇಟ್: 24ಗಂಟೆಯಲ್ಲಿ 380 ಪಾಸಿಟಿವ್ ಪ್ರಕರಣಗಳು
ಬೆಂಗಳೂರು: ರಾಜ್ಯದ್ಯಂತ ಕೋವಿಡ್ 19 ಹರಡುವಿಕೆ ಕಮ್ಮಿಯಾಗುತ್ತಿದ್ದು, ಶುಕ್ರವಾರ 380 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 9,44,437ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಿಸಿದೆ.