News Kannada
Monday, December 05 2022

ಕ್ಯಾಂಪಸ್

‘ನಾಡಿಗ ಕೃಷ್ಣಮೂರ್ತಿ ಕರ್ನಾಟಕ ಮಾಧ್ಯಮ ಶಿಕ್ಷಣದ ಪಿತಾಮಹ’

Photo Credit :

 

ತುಮಕೂರು: ಕರ್ನಾಟಕದ ಮೊತ್ತಮೊದಲ ಪತ್ರಿಕೋದ್ಯಮ ವಿಭಾಗವನ್ನು ಮೈಸೂರಿನಲ್ಲಿ ಆರಂಭಿಸಿ, ರಾಜ್ಯಕ್ಕೆ ಮಾಧ್ಯಮ ಶಿಕ್ಷಣವನ್ನು ಪರಿಚಯಿಸಿದ ಪ್ರೊ. ನಾಡಿಗ ಕೃಷ್ಣಮೂರ್ತಿಯವರು ಕರ್ನಾಟಕ ಮಾಧ್ಯಮ ಶಿಕ್ಷಣದ ಪಿತಾಮಹ. ಪತ್ರಿಕೋದ್ಯಮದ ಮೇಲೆ ಅವರಿಗಿದ್ದ ಪ್ರೀತಿ ಇಂದು ಅವರನ್ನು ನೆನಪಿಸುವಂತೆ ಮಾಡಿದೆ ಎಂದು ಅಸ್ಸಾಂ ಕೇಂದ್ರೀಯ ವಿಶ್ವವಿದ್ಯಾನಿಲಯದ ನಿವೃತ್ತ ಸಹಕುಲಪತಿ ಹಾಗೂ ಪತ್ರಿಕೋದ್ಯಮ ಪ್ರಾಧ್ಯಾಪಕ ಪೆÇ್ರ. ಕೆ. ವಿ. ನಾಗರಾಜ್ ತಿಳಿಸಿದರು.

ತುಮಕೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ ಹಾಗೂ ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಗುರುವಾರ ಆಯೋಜಿಸಿದ್ದ ‘ಕರ್ನಾಟಕದ ಮಾಧ್ಯಮ ಶಿಕ್ಷಣ ಹರಿಕಾರ ಡಾ. ನಾಡಿಗ ಕೃಷ್ಣಮೂರ್ತಿಯವರ ಜನ್ಮಶತಮಾನೋತ್ಸವ ಸಂಸ್ಮರಣೆ’ ಆನ್ಲೈನ್ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ವಿಶೇಷ ಉಪನ್ಯಾಸ ನೀಡಿದರು.

ತಮ್ಮ ಪದವಿ ಶಿಕ್ಷಣದಲ್ಲಿ ಗುರುಗಳಾಗಿದ್ದು, ವೃತ್ತಿಜೀವನದಲ್ಲಿ ಹಲವು ವರ್ಷಗಳ ಕಾಲ ಜೊತೆಯಾಗಿದ್ದ ಡಾ. ನಾಡಿಗರನ್ನು ನೆನೆದು ಮಾತನಾಡಿದ ಅವರು, ಸಾಮಾನ್ಯ ಕುಟುಂಬದಿಂದ ಬಂದು ಹಲವಾರು ಸಂಕಷ್ಟಗಳ ನಡುವೆಯೂ ಅಮೇರಿಕಕ್ಕೆ ಹೋಗಿ ಉನ್ನತ ಶಿಕ್ಷಣ ಪಡೆದು ಬಂದ ಹೆಗ್ಗಳಿಕೆ ನಾಡಿಗರದ್ದು. ಕರ್ನಾಟಕ ಪತ್ರಿಕಾ ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷರೂ ಆಗಿದ್ದರು ಎಂದರು.

ಪತ್ರಿಕೋದ್ಯಮ ಶಿಕ್ಷಣ ಎಂದರೆ ಮೊದಲು ನೆನಪಿಗೆ ಬರುವುದು ನಾಡಿಗರು. ಬಹಳಷ್ಟು ಜನಕ್ಕೆ ಮಾರ್ಗದರ್ಶಕರಾಗಿ, ಪತ್ರಿಕೋದ್ಯಮ ಶಿಕ್ಷಣವು ಭಾರತದಲ್ಲಲ್ಲದೆ ವಿಶ್ವವ್ಯಾಪಿಯಾಗಲು ಕಾರಣರಾದರು. ಗಾಂಧೀಜಿಯವರಿಂದ ಅಪಾರವಾಗಿ ಪ್ರಭಾವಿತರಾಗಿದ್ದ ಅವರು ಕಲಿಯುವುದೊಂದೆ ನಮ್ಮ ಗುರಿಯಾಗದೆ, ಮುಂದಿನ ಪೀಳಿಗೆಗೆ ಕಲಿಸಬೇಕು ಎಂಬ ಉತ್ತಮ ಧ್ಯೆಯ ಹೊಂದಿದ್ದವರಾಗಿದ್ದರು. ದೇಶವಿದೇಶಗಳಿಂದ ಪರಿಣಿತರನ್ನು ಕರೆಸಿ ಪ್ರಾಯೋಗಿಕ ತರಬೇತಿ ಕೊಡಿಸಿದರು ಎಂದರು.

‘ಮಾಧ್ಯಮ ಶಿಕ್ಷಣ-ಸಂಶೋಧನೆಯ ವರ್ತಮಾನ ಮತ್ತು ಭವಿಷ್ಯ’ ಕುರಿತಾಗಿ ಮಾತನಾಡಿದ ಬೆಂಗಳೂರು ವಿ.ವಿಯ ವಿದ್ಯುನ್ಮಾನ ಮಾಧ್ಯಮ ವಿಭಾಗದ ಐಸಿಎಸ್‍ಎಸ್‍ಆರ್ ಸೀನಿಯರ್ ಫೆಲೋ ಪೆÇ್ರ. ಎ. ಎಸ್. ಬಾಲಸುಬ್ರಹ್ಮಣ್ಯ, ದೂರದರ್ಶನ ಯುಗದಿಂದ ಡಿಜಿಟಲ್ ಯುಗಕ್ಕೆ ಕಾಲಿಟ್ಟಿದ್ದೇವೆ. ಎಲ್ಲವೂ ಅಂತರ್ಜಾಲದ ವ್ಯಾಪ್ತಿಯಲ್ಲಿದೆ. ಇದೇ ಸಂದರ್ಭದಲ್ಲಿ ಗುರುಗಳಾದ ನಾಡಿಗರು ಪತ್ರಿಕೋದ್ಯಮಕ್ಕೆ ನೀಡಿದ ಹಲವಾರು ಕೊಡುಗೆಗಳನ್ನು ನೆನೆಯುವುದು ಸ್ತುತ್ಯರ್ಹ ಎಂದರು.

ಮಾಧ್ಯಮ ಶಿಕ್ಷಣದ ವ್ಯಾಪ್ತಿ ವಿಸ್ತಾರವಾಗಿ ಹರಡಿದೆ. ಬಹುತೇಕ ಎಲ್ಲಾ ಸರ್ಕಾರಿ ಮತ್ತು ಖಾಸಗಿ ವಿಶ್ವವಿದ್ಯಾನಿಲಯಗಳಲ್ಲಿ ಪತ್ರಿಕೋದ್ಯಮ ವಿಭಾಗವಿದೆ. ಕೆಲ ಖಾಸಗಿ ಸಂಸ್ಥೆಗಳು ಪತ್ರಿಕೋದ್ಯಮ ಶಿಕ್ಷಣವನ್ನು, ಮಾಧ್ಯಮದ ಹಲವು ಭಾಗಗಳ ಶಿಕ್ಷಣವನ್ನು ಅಲ್ಪಾವಧಿಯಲ್ಲೇ ನೀಡುತ್ತಿದ್ದಾರೆ. ಮಾಧ್ಯಮರಂಗಕ್ಕೆ ಇಂದು ಬೇಡಿಕೆ ಹೆಚ್ಚಾಗಿದೆ ಎಂದರು.

90ರ ದಶಕದ ನಂತರ ಸಂಶೋಧನಾ ಪ್ರವೃತ್ತಿ ಜನಪ್ರಿಯವಾಯಿತು. ಪರಿಪೂರ್ಣ ಶಿಕ್ಷಕನಾಗಬೇಕಾದರೆ ಸಂಶೋಧನಾ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಮಾಧ್ಯಮ ಕ್ಷೇತ್ರವೂ ತನ್ನದೇ ಆದ ಒಳಿತು-ಕೆಡುಕುಗಳನ್ನು ಒಳಗೊಂಡಿದೆ. ಪತ್ರಿಕೋದ್ಯಮ ಇಂದು ಜಾಗತಿಕ ಮಟ್ಟದಲ್ಲಿ ಹಲವಾರು ಅವಕಾಶಗಳನ್ನು ಕಲ್ಪಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಕರ್ನಲ್ (ಪೆÇ್ರ.) ವೈ. ಎಸ್. ಸಿದ್ದೇಗೌಡ ಮಾತನಾಡಿ, ಧೀಮಂತ ವ್ಯಕ್ತಿತ್ವ, ನ್ಯಾಯವಾದ ಬದುಕು, ಪರಿಪೂರ್ಣ ಜೀವನಕ್ಕೆ ಉದಾಹರಣೆ ಡಾ. ನಾಡಿಗರು. ಮಾಧ್ಯಮರಂಗಕ್ಕೆ ಅವರ ಕೊಡುಗೆ ಅಪಾರ. ಸಮಾಜದ ನಾಲ್ಕನೆಯ ಅಂಗವಾದ ಮಾಧ್ಯಮವನ್ನು ವಿಶ್ವವ್ಯಾಪಿ ಮಾಡಲು ನಾಡಿಗರು ಶ್ರಮಿಸಿದರು ಎಂದರು. ಇಂದಿನ ತಲೆಮಾರಿಗೆ ನಾಡಿಗರ ಬದುಕಿನ ಆದರ್ಶಗಳು, ಮೌಲ್ಯಗಳು ತಲುಪಬೇಕು. ಅವರ ಪ್ರೇರಣೆಯಿಂದ ಸಾಮಾನ್ಯರೂ ಕೂಡ ಉನ್ನತ ಸ್ಥಾನಕ್ಕೇರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

See also  ಮೂಲಭೂತ ಸೌಕರ್ಯಗಳಿಗೆ ಕೇಂದ್ರ ಬಜೆಟ್‌ನಲ್ಲಿ ಒತ್ತು : ವಿದ್ಯಾ ಸರಸ್ವತಿ

ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಸಿಬಂತಿ ಪದ್ಮನಾಭ ಕೆ. ವಿ. ವೆಬಿನಾರ್ ನಿರ್ವಹಿಸಿದರು. ಕಲಾ ಕಾಲೇಜಿನ ಪ್ರಾಂಶುಪಾಲ ಕೆ. ರಾಮಚಂದ್ರಪ್ಪ, ಪತ್ರಿಕೋದ್ಯಮ ಉಪನ್ಯಾಸಕರಾದ ಕೋಕಿಲ ಎಂ. ಎಸ್., ಡಾ. ಪೃಥ್ವೀರಾಜ ಟಿ ಹಾಗೂ ಅನನ್ಯ ಎಂ. ಭಾಗವಹಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು