NewsKarnataka
Saturday, November 27 2021

ಕ್ಯಾಂಪಸ್

ಶಿಕ್ಷಕರು ಕಣ್ಣಿಗೆ ಕಾಣುವ ದೇವರು

ಬಾಗಲಕೋಟೆ : ಸಪ್ಟಂಬರ್ 5 ಭಾರತದ ಎರಡನೇಯ ರಾಷ್ಟçಪತಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನ ,ಅವರು ಸಪ್ಟೆಂಬರ್ 5 1888 ರಲ್ಲಿ ತಮಿಳುನಾಡಿನಲ್ಲಿ ಜನಿಸಿದರು ಅವರು ನೆನಪಿಗಾಗಿ ನಾವು ಇಂದು ಶಿಕ್ಷಕರ ದಿನವನ್ನು ಆಚರಿಸುತ್ತೇವೆ. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರು ಭಾರತದ ಉತ್ತಮ ಶಿಕ್ಷಕರಾಗಿದ್ದರು. ಪ್ರತಿಯೊಬ್ಬರ ಜೀವನದಲ್ಲಿಯೂ ಉತ್ತಮ ಶಿಕ್ಷಕನ ಮಹತ್ವವನ್ನು ಅರಿಯುವ ದಿನ ಇದಾಗಿದೆ.
ನಾವು ಹುಟ್ಟಿದಾಗ ನಮಗೆ ತಾಯಿಯೇ ಮೊದಲ ಗುರುವಾಗಿರುತ್ತಾರೆ. ನಂತರ ನಾವು ಬೆಳೆದಂತೆಲ್ಲ ಶಾಲೆಗೆ ಹೋಗಲಾರಂಭಿಸಿದಾಗ ಲೋಕದ ಜ್ಞಾನವನ್ನು ಶಿಕ್ಷಕರು ನೀಡುತ್ತಾರೆ.
ನಾವು ಮುಂದೆ ಒಳ್ಳೆಯ ಹಾಗೂ ದೊಡ್ಡ ವ್ಯಕ್ತಿಯಾಗಲು ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಪುರಾಣಗಳ ಪ್ರಕಾರ ಬ್ರಹ್ಮ ನಮಗೆ ಜೀವವನ್ನು ನೀಡುತ್ತಾನೆ, ಆದರೆ ಆ ಜೀವಕಕೆ ಒಂದು ರೀತಿ ನೀತಿಯನ್ನು ಕಲಿಸಿ ಅರ್ಥಪೂರ್ಣವಾಗಿ ಮಾಡುವುದುಶಿಕ್ಷಕರು. ಆದ್ದರಿಂದ ಶಿಕ್ಷಕರು ಕಣ್ಣಿಗೆ ಕಾಣುವ ದೇವರಾಗಿರುತ್ತಾರೆ.ಇನ್ನೂ ಕೆಲವೊಮ್ಮೆ ದೇವರಿಗಿಂತ ಹೆಚ್ಚಾಗಿರುತ್ತಾರೆ  ಇದನ್ನು ನಮ್ಮ ಸಂಸ್ಕೃತಿಯಲ್ಲಿಯೂ ಸಹ ಕಾಣಬಹುದು. ನಮ್ಮಲ್ಲಿ ಹರ ಮುನಿದರು ಗುರು ಕಾಯುವನು ಎಂಬ ಮಾತಿದೆ ಇದರ ಅರ್ಥ ಆ ದೇವರು ನಮ್ಮ ಮೇಲೆ ಕೋಪಗೊಂಡರೂ ಶಿಕ್ಷಕರು ನಮ್ಮ ಮೇಲೆ ಎಂದಿಗೂ ಸಿಟ್ಟಾಗುವುದಿಲ್ಲ ನಾವು ಎಷ್ಟೇ ತಪ್ಪು ಮಾಡಿದರೂ ನಮ್ಮನ್ನು ತಿದ್ದಿ ಒಳ್ಳೆ ದಾರಿಗೆ ತರುವ ಶಿಕ್ಷಕರಿಗೆ ‘ ಹ್ಯಾಪಿ ಟೀಚರ್ಸ್ ಡೇ’.
Written by
ಅತೀಕ್ಷ. ಎಸ್. ಮಠ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a Reply

Your email address will not be published. Required fields are marked *

News Kannada

The most exciting, trusted and preferred news websites of Karnataka and Kannadigas around the world.

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!