News Kannada
Wednesday, August 10 2022

ಕ್ಯಾಂಪಸ್

ಹೊಸ ಶಿಕ್ಷಣ ನೀತಿ 2020 ವಾಣಿಜ್ಯ ಶಿಕ್ಷಕರಿಗಾಗಿ ಸಬಲೀಕರಣ ತರಬೇತಿ - 1 min read

ಮಂಗಳೂರು:  ಕರ್ನಾಟಕ ಸರ್ಕಾರವು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಹೊಸ ಶಿಕ್ಷಣ ನೀತಿಯ ಪಠ್ಯಕ್ರಮದ ಅನುಷ್ಠಾನವನ್ನು ಘೋಷಿಸಿರುವುದರಿಂದ ಎನ್ಇಪಿ 2020 ಎಂಬುದು ಇತ್ತೀಚಿನ ದಿನಗಳಲ್ಲಿ ನಾವು ಹೆಚ್ಚಾಗಿ ಕೇಳುವ ಘೋಷವಾಕ್ಯವಾಗಿದೆ. ಇದು ವಿದ್ಯಾರ್ಥಿಗಳಿಗೆ ಕೌಶಲ್ಯ ಆಧಾರಿತ ಕಲಿಕೆಯ ಹೊಸ ಆಯಾಮಗಳೊಂದಿಗೆ ಅವುಗಳನ್ನು ಅನುಷ್ಠಾನಕ್ಕೆ ತರಲು ಹಲವಾರು ಸವಾಲುಗಳನ್ನು ವಿಧಿಸಿದೆ. ಅನೇಕ ಶಿಕ್ಷಣ ತಜ್ಞರ ಮನಸ್ಸನ್ನು ಪ್ರಚೋದಿಸಿದ ಪ್ರಶ್ನೆಯೆಂದರೆ “ನಾವು ಎನ್ಇಪಿ. ಸಿದ್ದರಿದ್ದೇವೆ”
ಈ ನಿಟ್ಟಿನಲ್ಲಿ, ಮಂಗಳೂರು ವಿಶ್ವವಿದ್ಯಾನಿಲಯವು, ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ಶಿಕ್ಷಕರ ಸಂಘ ಎಮ್ ಯುಸಿಟಿಎ), ಸಂತ ಆಗ್ನೆಸ್ ಕಾಲೇಜು (ಸ್ವಾಯತ್ತ) ಮಂಗಳೂರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಾವೂರು, ಮತ್ತು ಮಂಗಳ ಹಳೆಯ ವಿದ್ಯಾರ್ಥಿಗಳ ಸಂಘ ಸಹಯೋಗದೊಂದಿಗೆ, ಜಂಟಿಯಾಗಿ ‘ಎನ್ಇಪಿ 2020 ಯ ವಾಣಿಜ್ಯ ಶಿಕ್ಷಕರ ಸಬಲೀಕರಣ ತರಬೇತಿ’ ಎಂಬ ವಿಷಯದಲ್ಲಿ ಸರಣಿ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿದೆ.
ಈ ತರಬೇತಿ ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಈ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ 800 ಕ್ಕೂ ಹೆಚ್ಚು ವಾಣಿಜ್ಯ ಶಿಕ್ಷಕರಿಗೆ ತರಬೇತಿ ನೀಡುವ ಗುರಿಯನ್ನು ಹೊಂದಿದೆ. ಈ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮ ಸರಣಿಯು ಅಕ್ಟೋಬರ್ 4, 2021 ರಿಂದ 8-10 ಬ್ಯಾಚ್‌ಗಳಲ್ಲಿ ನಡೆಸಲಾಗುತ್ತದೆ. ಪ್ರತಿ ಬ್ಯಾಚ್‌ನಲ್ಲಿ 80 ರಿಂದ 90 ವಾಣಿಜ್ಯ ಅಧ್ಯಾಪಕರು ಭಾಗವಹಿಸುವರು. ಪ್ರತಿ ಬ್ಯಾಚ್ ಏಳು ದಿನಗಳ ಅವಧಿಯ ತರಬೇತಿಯನ್ನು ಹೊಂದಿದೆ. ಪ್ರತಿದಿನ ಸಂಜೆ 5 ರಿಂದ 8 ರವರೆಗೆ ಆನ್‌ಲೈನ್ ಮೂಲಕ ತರಬೇತಿಯನ್ನು ನೀಡಲಾಗುತ್ತದೆ. ಈ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದವರಿಗೆ ಭಾಗವಹಿಸುವಿಕೆಯ ಪ್ರಮಾಣಪತ್ರವನ್ನು ನೀಡಲಾಗುತ್ತದೆ.
ಈ ಕಾರ್ಯಕ್ರಮವನ್ನು ೪ ನೇ ಅಕ್ಟೋಬರ್ 2021 ರಂದು ಸಂಜೆ 4.3೦ ಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದ ಗೌರವಾನ್ವಿತ ಉಪಕುಲಪತಿಯೂ, ವಾಣಿಜ್ಯ ಮತ್ತು ನಿರ್ವಹಣೆಗಾಗಿ ರಾಜ್ಯ ಮಟ್ಟದ ಪಠ್ಯಕ್ರಮದ ಕರಡು ಸಮಿತಿಯ ಅಧ್ಯಕ್ಷರಾದ ಪ್ರೊ. ಪಿ. ಎಸ್. ಯಡಪಡಿತ್ತಾಯರವರು ಉದ್ಘಾಟಿಸಲಿದ್ದಾರೆ. ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಗೌರವಾನ್ವಿತ ಉಪಕುಲಪತಿ ಪ್ರೊ.ಎಂ.ರಾಮಚಂದ್ರ ಗೌಡ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಮ್ಯಾಪ್ಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಹಾಗೂ ಮಂಗಳ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಶ್ರೀ ದಿನೇಶ್ ಕುಮಾರ್ ಆಳ್ವ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಂಗಳೂರಿನ ಸೇಂಟ್ ಆಗ್ನೆಸ್ ಕಾಲೇಜಿನ (ಸ್ವಾಯತ್ತ) ಪ್ರಾಂಶುಪಾಲರಾದ ಡಾ. ಎಂ. ವೆನಿಸ್ಸಾ ಎ. ಸಿ. ಮತ್ತು ಕಾವೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಶಿವರಾಮ ಪಿ. ಸಮಾರಂಭದಲ್ಲಿ ಉಪಸ್ಥಿತರಿರುವರು.
ಲೂಯಿಸ್ ಮನೋಜ್ ಆಂಬ್ರೋಸ್, ಸಹಾಯಕ ಪ್ರಾಧ್ಯಾಪಕರು ಮತ್ತು ಒUಅಖಿಂ ದ ಕಾರ್ಯದರ್ಶಿ, ಡಾ. ದೇವಿ ಪ್ರಭಾ ಆಳ್ವ, ಸಹ ಪ್ರಾಧ್ಯಾಪಕರು ಮತ್ತು ಉಪಾಧ್ಯಕ್ಷರು ಎಫ್‌ಡಿಪಿಯ ಸಂಯೋಜಕರಾಗಿದ್ದಾರೆ. ಶ್ರೀಮತಿ ಸಬಿನಾ ಡಿಸೋಜಾ, ಶ್ರೀಮತಿ ರೋಶಿನಿ ಯಶವಂತ್, ಶ್ರೀಮತಿ ಶೆರಿಲ್ ಪ್ರೀತಿಕಾ ಮತ್ತು ಶ್ರೀ ರೋಡ್ನಿ ವಾಜ್, ಸಹಾಯಕ ಪ್ರಾಧ್ಯಾಪಕರು ಇದರ ಸಹ-ಸಂಯೋಜಕರಾಗಿದ್ದಾರೆ.
ವಿದ್ಯಾರ್ಥಿಗಳ ಉದ್ಯೋಗದ ಪ್ರಮಾಣವನ್ನು ಹೆಚ್ಚಿಸುವುದು ಮತ್ತು ಅದಕ್ಕಾಗಿ ಅವರ ಕೌಶಲ್ಯಗಳನ್ನು ಅಭಿವೃದ್ಧಿಗೊಳಿಸುವುದು ಇಂದಿನ ಅಗತ್ಯವಾಗಿದೆ ಮತ್ತು ಎನ್ಇಪಿಯ ಆಶಯವಾಗಿದೆ. ಈ ಸಂದರ್ಭದಲ್ಲಿ, ಎನ್ಇಪಿ 2020 ಯನ್ನು ಸರಿಯಾಗಿ ಅನುಷ್ಠಾನಗೊಳಿಸಲು, ಶಿಕ್ಷಕರು ತಮ್ಮ ಬೋಧನ ಕ್ರಮದಲ್ಲಿ ಹೊಸ ಪ್ರಯೋಗಗಳನ್ನು ಅಳವಡಿಸಬೇಕಾಗಿದೆ. ಈ ತರಬೇತಿ ಶಿಬಿರದಲ್ಲಿ, ವಾಣಿಜ್ಯ ಶಿಕ್ಷಕರಿಗೆ ಹೊಸ ಪರಿಕರಗಳ ಬಳಕೆಯನ್ನು ಮಾಡಲು ಮತ್ತು ಆಧುನಿಕ ಬೋಧನೆ ಮತ್ತು ಕಲಿಕಾ ವಿಧಾನಗಳನ್ನು ಸಜ್ಜುಗೊಳಿಸಲು ಅಗತ್ಯ ಮಾರ್ಗದರ್ಶನ ಕೊಡಲಾಗುವುದು.

See also  ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್‌ ನಾರಾಯಣ್‌ ನಾಳೆ ಜಿಲ್ಲೆಗೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

1616
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು