News Kannada
Wednesday, August 10 2022

ಕ್ಯಾಂಪಸ್

*ಬದುಕಿನ ಸರಳತೆ ದೊಡ್ಡ ಆದರ್ಶ* - 1 min read

ಚೀನಾದ ಒಬ್ಬ ಯುವಕ ದುಬಾರಿ ಮೊಬೈಲು ಖರೀದಿಸಲು ತನ್ನ ಕಿಡ್ನಿಯನ್ನು ಮಾರಿದ  ಘಟನೆ ಆಘಾತಕಾರಿ ಆದರೂ ಪ್ರಪಂಚದ  ಆಢಂಬರದ  ಪ್ರತೀಕ.
 ಪ್ರಸ್ತುತ ತಮಗಾಗಿ ಬದುಕದೆ ಜಗತ್ತಿನ ಮುಂದೆ ಪ್ರದರ್ಶನಕ್ಕಾಗಿ ಬದುಕುವ ಜನರ ಸಂಖ್ಯೆ ಹೆಚ್ಚುತ್ತಿದೆ.
ಆಧುನಿಕತೆಯೆಡೆಗಿನ ಸೆಳೆತಗಳನ್ನು ಮಿತಿಮೀರಿ ಬಯಸುವ ಮನುಷ್ಯನ ಒಟ್ಟು ಬದುಕು ಹದತಪ್ಪಿದಂತಿದೆ.
 ಈ ಆಧುನಿಕ ಜಗತ್ತಿನಲ್ಲಿ ಸರಳವಾಗಿ ಬದುಕುವುದು  ಅತಿ ಕಠಿಣವಾದ ಕೆಲಸ. ಸರಳತೆಯಿಂದ ಹೆಚ್ಚುದೂರ ಕಾಯ್ದುಕೊಳ್ಳಲು  ಎಷ್ಟೇ ಕಷ್ಟಪಡಲು ದುಡಿಯಲು ಕೂಡ ನಾವು ತಯಾರಿದ್ದೇವೆ . ಆದರೆ ಸರಳವಾಗಿ ಬದುಕುವುದು ಯಾರಿಗೂ ಬೇಡ .
ಸರಳತೆಯೆನ್ನುವುದು ಒಂದು ರೀತಿಯ ಆತಂಕವಾಗಿ ನಮ್ಮನ್ನು ಕಾಡುತ್ತಿದೆ .
ನಿಜವಾಗಿಯೂ ಸರಳತೆ ಎಂಬುದು ಯಾವ  ಅವಗುಣವೂ  , ದುಃಸ್ವಪ್ನವೂ ಅಲ್ಲ ಅದು ಬದುಕಿನ ನೆಮ್ಮದಿಯ ಚಿಲುಮೆಯನ್ನು ಹೆಚ್ಚಿಸುವ ವಿಧಾನ .  ಅನೇಕರು ಸರಳತೆಯಿಂದರೇ ಲೌಕಿಕ ಸುಖದೊಂದಿಗೆ ಮಾಡಿಕೊಳ್ಳುವ ರಾಜಿ ಎಂದುಕೊಂಡಿದ್ದಾರೆ .
ಆದರೆ ಹಾಗಲ್ಲ ಲೌಕಿಕ ಜೀವನವನ್ನು ನಡೆಸುತ್ತಾ, ಬದುಕಿ ಬದುಕಲು ಬಿಡಿ ಎನ್ನುವಂತೆ ಜೀವಿಸುವುದು.
ಆದರೆ ಮಾನವನಿಗೆ ಆಢಂಬರತೆಯಲ್ಲಿ ಹೆಚ್ಚು ಆಸಕ್ತಿ. ಸಂಪನ್ಮೂಲವನ್ನು ಹೆಚ್ಚಾಗಿ ಬಳಸುವುದು, ಹಣವನ್ನು ನೀರಿನಂತೆ ಪೋಲು ಮಾಡುವುದು, ವಿದೇಶಿ ಸಂಸ್ಕೃತಿಯ ದುಂಬಾಲು ಬೀಳುವುದು ಇವೆಲ್ಲವೂ ಉತ್ಕೃಷ್ಟ ಜೀವನದ ಪ್ರತೀಕ ಎಂದು ನಂಬುತ್ತಾರೆ.
 ಆದ್ದರಿಂದಲೇ ಏನೋ ಪ್ರಸ್ತುತ ಜೀವನವಿಧಾನ ಟೊಳ್ಳು ಎನಿಸತೋಡಗಿದೆ . ಒಂದು ಕಡೆ ತೀರಾ ಬಡತನ, ಅಸಹಾಯಕತೆ ಮತ್ತೊಂದು ಕಡೆ ಅತಿ ಶ್ರೀಮಂತ ತನ, ಬೇಕಾಬಿಟ್ಟಿ ಖರ್ಚು .   ಸಮಾನತೆಯ ತತ್ವ ಭಾಷಣಕ್ಕೆ ಮಾತ್ರ ಸೀಮಿತ ಎಂಬಂತೆ.
ಜಗತ್ತಿನ ಮುಂದೆ ನಾನು ಶ್ರೀಮಂತ ಎಂದು ತೋರಿಸಿಕೊಳ್ಳುವ ಹಪಹಪಿ .
ಸರಳತೆಯ  ಅಭಿವ್ಯಕ್ತಿಗೆ  ಪ್ರಕೃತಿಗಿಂತಲೂ ಉತ್ತಮವಾದ ಉದಾಹರಣೆ ಮತ್ತೊಂದಿಲ್ಲ ಹರಿವ ನೀರು ,ಮರ-ಗಿಡ, ಹೊಂಬಿಸಿಲು, ಸೂರ್ಯ-ಚಂದ್ರ, ಬೆಳದಿಂಗಳು ಯಾವುದರಲ್ಲಿಯೂ ಆಢಂಬರವಿಲ್ಲ ಆದರೂ ಅವು ವಿಶೇಷವಲ್ಲವೇ .
ಪ್ರಕೃತಿ  ಆದೇಶವಿರಲಿ ನಮ್ಮ ಹಿರಿಯರ ಆದರ್ಶವನ್ನಾದರೂ ಪಾಲಿಸುವವರ ಸಂಖ್ಯೆ ಎಷ್ಟಿದೆ?  ಗಾಂಧೀಜಿಯಂತಹ ಮಹಾನ್ ವ್ಯಕ್ತಿಗಳ ತತ್ವವನ್ನು ನಾವು ಯಾವ ರೀತಿಯ ಅರ್ಥೈಸಿಕೊಳ್ಳುತ್ತಿದ್ದೇವೆ ,ಯಾವ ರೀತಿಯಲ್ಲಿ ಅವರ ಹೆಸರನ್ನು ಬಳಸಿಕೊಳ್ಳುತ್ತಿದ್ದೇವೆ, ನಮಗೆ ನಾವೇ ಕೇಳಿಕೊಳ್ಳಬೇಕಾದ ಪ್ರಶ್ನೆ ಇದು.
ಸರಳತೆಯಿಂದಲೇ ಶ್ರೇಷ್ಠತೆಯನ್ನು ಸಂಪಾದಿಸಿದವರೆ ಗಾಂಧಿ ಅವರ ತತ್ವಗಳನ್ನು ಪಾಲಿಸಲು ಎಷ್ಟು ಜನ ತಾನೆ  ಇಷ್ಟಪಡುತ್ತಾರೆ.
ಪರರಿಗೆ ಸಲ್ಲಬೇಕಾದ ಸಂಪತ್ತನ್ನು ಕಸಿದು ಕೊಳ್ಳಬೇಡ ಇಷ್ಟಕ್ಕೂ ಇದು ಯಾರ ಸ್ವತ್ತು? ಎಂಬ ಗಾಂಧಿಯ ಸರಳ ತತ್ವವನ್ನು ಅನುಸರಿಸಿ ಬದುಕಬೇಕಿದೆ .
 ಸಾವಯವ ಸಹಜಕೃಷಿ, ಸರಳ ಬದುಕು, ಪರಿಸರ ಸಂರಕ್ಷಣೆ, ಮಾನವೀಯ ಮೌಲ್ಯಗಳು ಕಂಪ್ಯೂಟರ್, ಮೊಬೈಲ್ ,ಜಾಲತಾಣ, ಡಿಜಿಟಲೀಕರಣ,  ಹೈ-ಟೆಕ್, ಬದುಕಿನ ಮುಂದೆ ಸಪ್ಪೆಯಾಗಿದೆ. ಆಧುನಿಕ ಬದುಕು, ಫ್ಯಾಷನ್, ಪ್ರಗತಿ  ಎನ್ನುವವರಿಗೆ ಸರಳ ಬದುಕು ಎಂಬ ಪದವೇ ಹಾಸ್ಯಸ್ಪದವಾಗಿ ಕಾಣಬಹುದು .  ಬುಧ್ಧ ,ಮದರ್ ತೆರೇಸಾ , ಸ್ವಾಮಿ ವಿವೇಕಾನಂದ , ಗಾಂಧಿ ಇವರ ತತ್ವವನ್ನು ಅನುಸರಿಸಿ ಬದುಕುವುದು ಈಗೀನ ದಿನಗಳಲ್ಲಿ ತೀರಾ ಅಗತ್ಯವಾದ ಸಂಗತಿ . ಯಾರನ್ನೋ ಮೆಚ್ಚಿಸಲು ಪ್ರತಿದಿನದ ಹೆಣಗಾಟ, ಮಲಿನ ನೀರು ಗಾಳಿ ಸೇರಿಸುತ್ತಾ ಬದುಕನ್ನು ಮಲಿನಗೊಳಿಸಿ ಕೊಳ್ಳುವುದು ಬೇಡ.  ಸಂಪತ್ತಿಗೆ ತಕ್ಕಂತೆ ನಮ್ಮ ಬಯಕೆಗಳನ್ನು ಮಿತಗೊಳಿಸಿದರೆ ಅಷ್ಟೇ ಸಾಕು ಸರಳತೆಯನ್ನು ಮೈಗೂಡಿಸಿಕೊಳ್ಳ ಬಹುದು.  ವೇಗದ ಓಟ ದಂತಹ ಬದುಕಿನಲ್ಲಿ ತಾಮುಂದು, ನಾಮುಂದು ಎಂದು ಓಡುವ ಭರದಲ್ಲಿ ಜೀವನದ ಸತ್ವವನ್ನು ನೆಮ್ಮದಿಯನ್ನು ಕಳೆದುಕೊಳ್ಳುವುದು ಬೇಡ .
ವೇದಶ್ರಿ
SDM ujire
See also  ಶ್ರೀ.ಧ.ಮಂ ಪದವಿ ಕಾಲೇಜಿನಲ್ಲಿ ನೂತನ ವಿದ್ಯಾರ್ಥಿಗಳಿಗೆ ಪ್ರಶಿಕ್ಷಣ ಕಾರ್ಯಕ್ರಮ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

1616
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು