News Kannada
Thursday, July 07 2022

ಕ್ಯಾಂಪಸ್

ಶ್ರೀ. ಧ. ಮಂ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಪರಿವರ್ತನಾ ಕಾರ್ಯಾಗಾರ - 1 min read

Photo Credit :

ಉಜಿರೆ: ಮೇ. 26ರಂದು ಶ್ರೀ. ಧ. ಮಂ ಪದವಿ ಪೂರ್ವ ಕಾಲೇಜಿನ ರತ್ನತ್ರಯ ಸಭಾಂಗಣದಲ್ಲಿ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ  ವಾಣಿಜ್ಯ ವಿಭಾಗ ವಿದ್ಯಾರ್ಥಿ ಪರಿವರ್ತನಾ ಕಾರ್ಯಾಗಾರ ಏರ್ಪಡಿಸಿದೆ.

ಕಾರ್ಯಕ್ರಮ ಐಸಿಟಿ ಅಕಾಡಮಿ ಮತ್ತು ಡಿ ಎಕ್ಸ್ ಸಿ ಸಹಯೋಗದಲ್ಲಿ 10 ದಿನಗಳ ಕಾಲ ನಡೆಯಲಿದ್ದು, ಕಾರ್ಯಕ್ರಮವನ್ನು ವಿಶ್ವ ಮಾನವ ಸಂಪನ್ಮೂಲ ಮಂಡಳಿಯ ಮಾನ್ಯತೆ ಪಡೆದ ಕೌಶಲ್ಯ ತರಬೇತುದಾರ ದಿಲೀಪ್ ಮಲ್ಲ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯ ಅತಿಥಿ ಮಂಗಳೂರಿನ ಐಸಿಟಿ ಅಕಾಡಮಿಯ ಸಂಪರ್ಕ ಅಧಿಕಾರಿ ರೋಹಿತ್ ಕಜವ ಐಸಿಟಿಯ 7 ಮುಖ್ಯ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿ ಸಬಲಿಕರಣವೂ ಒಂದು. ವಿದ್ಯಾರ್ಥಿಗಳಲ್ಲಿ ಸಂವಹನ, ಸಮಯ ನಿರ್ವಹಣೆ ಮತ್ತು ಗ್ರಹಿಕೆಯ ಕೌಶಲ್ಯ ಹೆಚ್ಚಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ವಾಣಿಜ್ಯ ವಿಭಾಗದ ಆಯ್ದ 100 ವಿದ್ಯಾರ್ಥಿಗಳಿಗೂ ಕೆಲಸ ಸಿಗುವಂತಾಗಲಿ ಎಂದರು.

ಡಾ. ಉದಯಚಂದ್ರ ಕಲಿಕೆ ಮತ್ತು ಗಳಿಕೆ ಒಂದಕ್ಕೊಂದು ಹೊಂದಿಕೊಂಡಿವೆ. ಅಂಕಕ್ಕಿಂತ ಕೌಶಲ್ಯ ಗಳಿಸಿ. ನಿಮ್ಮ ಅವಶ್ಯಕತೆ ಮತ್ತು ಭವಿಷ್ಯದ ಬಗ್ಗೆ ಸೂಕ್ತ ಆಲೋಚನೆ ಹೊಂದಿರಿ ಎಂದು ಕಿವಿ ಮಾತು ಆಡಿದರು.

ವಾಣಿಜ್ಯ ವಿಭಾಗದ ಡೀನ್ ಮತ್ತು ಬಿಬಿಎ ವಿಭಾಗದ ಮುಖ್ಯಸ್ಥೆ  ಶಕುಂತಲಾ ಮಾತನಾಡುತ್ತಾ, ಉದ್ಯೋಗ ನೀಡುವವವರ ವಿವಿಧ ಅಪೇಕ್ಷೆಗಳನ್ನು ಪೂರೈಸಬೇಕಾದರೆ ಕೌಶಲ್ಯ ವೃದ್ಧಿ ಅಗತ್ಯ. ನಿಮ್ಮ ಮತ್ತು ಉದ್ಯೋದ ಬೇಡಿಕೆಯನ್ನರಿಯಿರಿ ಎಂದರು.

ಕಾರ್ಯಕ್ರಮವನ್ನು ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ರತ್ನಾವತಿ ಕೆ ಸ್ವಾಗತಿಸಿ, ಕಾಲೇಜಿನ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದ ಸಂಯೋಜಕ ಹರೀಶ್ ಶೆಟ್ಟಿ ವಂದಿಸಿದರು. ವಿದ್ಯಾರ್ಥಿನಿ ಪ್ರಜ್ಞಾ ಭಟ್ ನಿರೂಪಿಸಿ ಶ್ರದ್ದಾ ಮತ್ತು ತಂಡ ಪ್ರಾರ್ಥಿಸಿದರು. ಅಧ್ಯಾಪಕರಾದ ಸಚಿನ್ ಹೆಬ್ಬಾರ್, ಪವಿತ್ರ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

See also  ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ & ಮ್ಯಾನೇಜ್‌ಮೆಂಟ್‌ನ 10ನೇ ಮತ್ತು 11ನೇ ಪದವಿ ದಿನಾಚರಣೆ ಸಮಾರಂಭ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

11671
Media Release

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು