News Kannada
Friday, July 01 2022

ಕ್ಯಾಂಪಸ್

ಕೊಡಿಯಲ್ ಬೈಲ್: ಸಂತ ಅಲೋಶಿಯಸ್ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪಾಲಕರ ದಿನಾಚರಣೆ - 1 min read

Photo Credit :

ಕೊಡಿಯಲ್ ಬೈಲ್: ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆ ಕೊಡಿಯಲ್ ಬೈಲ್ ಇಲ್ಲಿ ಜೂ. 20ರಂದು ಬೆಳಿಗ್ಗೆ 9.30 ಕ್ಕೆ ಶಾಲಾ ಪಾಲಕರಾದ ಸಂತ ಅಲೋಶಿಯಸ್ ಗೊನ್ಜಾಗರವರ ಹಬ್ಬವನ್ನು ಶಾಲಾ ಸಭಾ ಭವನದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.

ಈ ಸುಂದರ ಕಾರ್ಯಕ್ರಮದ ಅಧ್ಯಕ ಸ್ಥಾನವನ್ನಿ ಶಾಲಾ ಸಂಚಾಲಕರಾದ ವಂ| ಫಾ| ಜೆರಾಲ್ಡ್ ಪುರ್ಟಾಡೊರವರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ  ಸೆವ್ರಿನ್ ಪಿಂಟೊ ಇಂಗ್ಲೀಷ್ ಪ್ರಾಧ್ಯಾಪಕಿ ಸಂತ ಅಲೋಶಿಯಸ್ ಕಾಲೇಜು ಮಂಗಳೂರು, ಶಾಲಾ ಮುಖ್ಯೋಪಾಧ್ಯಾಯಿನಿ ಜೊಸಿಟ್ಟಾ ನೊರೊನ್ಹಾ, ಸಹ ಮುಖ್ಯೋಪಾಧ್ಯಾ ಲಿಯೋ ಡಿಸೋಜ, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕರಾದ  ಮಂಗಳ ರೈ ಹಾಗೂ ಶಾಲಾ ನಾಯಕ ಅಭೀಶ್ ಬಂಗೇರಾ ಮತ್ತು ಉಪನಾಯಕನಾದ ಲಗನ್ ಜೆ. ಎಸ್ ಉಪಸ್ಥಿತರಿದ್ದರು.

ಮಧುರ ದೇವರ ಸ್ತುತಿಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಜೊಶ್ವಾಡ್ಯಾನಿಯಲ್ ಡಿ ಸೋಜ ಎಲ್ಲರನ್ನು ಸ್ವಾಗತಿಸಿದನು. ಪ್ರಿನ್ಸ್ ಸ್ಟಾನ್ ಜಾರ್ಜ್ ಡಿ ಸೋಜ ಹಾಗೂ ಅಶೆಲೆ ಮೆಗಾನ್ ಪಿಂಟೊರವರು ಹಬ್ಬದ ವಿಶೇಷತೆಯನ್ನು ವಿವರಿಸಿದರು. ಶಿಕ್ಷಕಿಯಾದ ವೀಣಾ ಮಿನೇಜಸ್ ರವರು ಮುಖ್ಯ ಅತಿಥಿಗಳು ತಮ್ಮ ಸಂದೇಶದಲ್ಲಿ ಸಂತರ ದಾರಿಯಲ್ಲಿ ನಡೆದೂ ಜೀವನದ ಗುರಿಯನ್ನು ಸಾಧಿಸಲು ಕರೆ ನೀಡಿದರು. ಮಹಾನ್ ವ್ಯಕ್ತಿಗಳ ಪುಸ್ತಕಗಳನ್ನು ಓದಿ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಲು ತಿಳಿಸಿದರು.

ಇದೇ ಸಮಯದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ  ಜೊಸಿಟ್ಟಾ ನೊರೊನ್ಹಾರವರು ಕನ್ನಡ ಮಾದ್ಯಮದ ವಿದ್ಯಾರ್ಥಿಗಳಿಗೆ ಉಚಿತ ಸಮ ವಸ್ತ್ರವನ್ನು ವಿತರಿಸಿದರು. ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಂಜನಾ ಮತ್ತು ಸ್ಪೂರ್ತಿ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು. 6ನೇ ತರಗತಿಯ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ನಿರ್ವಹಿಸಿದರು. ಶಾಲಾ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

See also  ಬಸವನಬಾಗೇವಾಡಿಯಲ್ಲಿ ಲಘು ಭೂಕಂಪನ, ಭಯಭೀತರಾದ ಸಾರ್ವಜನಿಕರು!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು