News Kannada
Saturday, August 13 2022

ಕ್ಯಾಂಪಸ್

ಮಂಗಳೂರು ಮಿಲಾಗ್ರಿಸ್‌ ಕಾಲೇಜಿನಲ್ಲಿ ವಾರ್ಷಿಕೋತ್ಸವ ಆಚರಣೆ - 1 min read

Annual Day Celebration at Milagres College, Mangalore

ಮಂಗಳೂರು: ಮಿಲಾಗ್ರಿಸ್‌ ಕಾಲೇಜಿನ  ವಾರ್ಷಿಕೋತ್ಸವವನ್ನು ಜುಲೈ 30ರಂದು ಕಾಲೇಜಿನ ಸಭಾಂಗಣದಲ್ಲಿ ಆಚರಿಸಲಾಯಿತು. ಚಲನಚಿತ್ರ ನಿರ್ದೇಶಕ, ನಟ, ಬರಹಗಾರ ಹಾಗೂ ಸಂಸ್ಥೆಯಹಳೆ ವಿದ್ಯಾರ್ಥಿಯಾಗಿರುವ  ಸಂದೀಪ್‌ಮಲಾನಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಿಲಾಗ್ರಿಸ್‌ ಕಾಲೇಜು ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ, ಚಲನ ಚಿತ್ರದಲ್ಲಿನ ಸಂಭಾಷಣೆ, ನಟನೆಯ ಕುರಿತು ತಿಳಿಸಿದರು.

ಮಿಲಾಗ್ರಿಸ್‌ ಕಾಲೇಜಿನ ಸಂಚಾಲಕರಾದ ವಂ. ಫಾ. ಬೊನವೆಂಚರ್ ನಜರೆತ್ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿಒಳ್ಳೆಯತನ, ಸೇವಾ ಮನೋಭಾವ ಮತ್ತು ಪ್ರತಿಭೆಯ ಮೂಲಕ ಕಾಲೇಜಿನಲ್ಲಿ ಮಾತ್ರವಲ್ಲದೆ ಸಮಾಜದಲ್ಲಿ ಕೂಡ ಯಶಸ್ಸಿನತ್ತ ಹೆಜ್ಜೆ ಹಾಕುತ್ತಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ 2021-22ನೇ ಸಾಲಿನ ವಾರ್ಷಿಕ ಸಂಚಿಕೆ ಮಿಲಾಗ್ರಿಸ್ ಮಿರಾಕಲ್ ಬಿಡುಗಡೆಗೊಳಿಸಲಾಯಿತು. ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷೆಯಲ್ಲ ರ‍್ಯಾಂಕ್ ವಿಜೇತ, ಪಠ್ಯೇತರ ಚಟುವಟಿಕೆಗಳಲ್ಲಿ ವಿಜೇತರಾದ ಹಾಗೂ ಅತ್ಯಧಿಕ ಶ್ರೇಯಾಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಅತ್ಯುತ್ತಮ ಶಿಕ್ಷಕ ಹಾಗೂ ಶಿಕ್ಷಕೇತರ ಪ್ರಶಸ್ತಿಯನ್ನು ನೀಡಲಾಯಿತು.

ಕಾಲೇಜಿನ ಪ್ರಾಂಶುಪಾಲರಾದ ವಂ. ಫಾ. ಮೈಕಲ್ ಸಾಂತುಮಾಯರ್ ಸ್ವಾಗತಿಸಿದರು. ಉಪಪ್ರಾಂಶುಪಾಲರಾದ  ಕ್ಯಾಸಿನ್ ರೊಡ್ರಿಗಸ್ ವಾರ್ಷಿಕ ವರದಿ ವಾಚಿಸಿದರು.

ಮಿಲಾಗ್ರಿಸ್ ಸೆಂಟ್ರಲ್ ಸ್ಕೂಲ್‌ನ ಪ್ರಾಂಶುಪಾಲರಾದ ವಂ. ಫಾ. ಜೋಸೆಫ್ ಫೆರ್ನಾಂಡಿಸ್, ಮಿಲಾಗ್ರಿಸ್‌ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ  ಬರ್ನಾರ್ಡ್ ಡಿ ಸೋಜ, ಸದಸ್ಯರಾದ  ಜೆರಾಲ್ಡ್ ಪಿಂಟೊ,   ಆಲ್ವಿನ್‌ ರೊಸಾರಿಯೊ, ವಿದ್ಯಾರ್ಥಿ ಪ್ರತಿನಿಧಿಗಳಾಗಿರುವ ಫ್ಲೋರಿಡಾ ಮತ್ತುಸೀಮಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಾಣಿಜ್ಯ ವಿಭಾಗದ ಉಪನ್ಯಾಸಕಿ  ಇವಾ ಮನೋರಮ ವಂದಿಸಿದರು. ವಿದ್ಯಾರ್ಥಿ ಜೋಸ್ಟನ್, ಶಬೀಬ್ ಹಾಗೂ ರೇಶಲ್‌ ಕಾರ್ಯಕ್ರಮ ನಿರೂಪಿಸಿದರು. ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಲಾಯಿತು.

See also  ಇಸ್ಲಾಮಾಬಾದ್: ಐಷಾರಾಮಿ ಉತ್ಪನ್ನಗಳ ಆಮದಿನ ಮೇಲಿನ ನಿಷೇಧವನ್ನು ತೆಗೆದುಹಾಕಿದ ಪಾಕ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು