News Kannada
Saturday, August 13 2022

ಕ್ಯಾಂಪಸ್

ವಿವಿಯ ತುಂಬೆಲ್ಲಾ ಕಾಮನಬಿಲ್ಲು ಮೂಡಿಸಿದ ಬಣ್ಣದ ಕೊಡೆಗಳು - 1 min read

Rainbow-painted coloured umbrellas all over the university

ಮಲೆನಾಡ ಹೆಬ್ಬಾಗಿಲ ಜ್ಞಾನ ದೇಗುಲ ನಮ್ಮ ಕುವೆಂಪು ವಿಶ್ವವಿದ್ಯಾಲಯ. ಇಲ್ಲಿನ ಹಚ್ಚ ಹಸಿರಿನ ಸೌಂದರ್ಯ ಮತ್ತು ಹವಮಾನಕ್ಕೆ ಒಗ್ಗದೇ ಇರುವ ವಿದ್ಯಾರ್ಥಿಗಳೇ ಇಲ್ಲ. ಮಳೆಯ ಆಗಮನವಾಯಿತೆಂದರೆ ಸಾಕು ವಿದ್ಯಾರ್ಥಿಗಳಿಗೆ ಎಲ್ಲಿಲ್ಲದ ಸಂತಸ. ಮಳೆಯನ್ನೇ ಕಾದು ಕುಳಿತ ವಿದ್ಯಾರ್ಥಿಗಳು, ಮಳೆಯ ಸಿಂಚನ ಆರಂಭವಾಗುತ್ತಿದ್ದಂತೆ ಬಣ್ಣ ಬಣ್ಣದ ಕೊಡೆಗಳನ್ನು ಹಿಡಿದು ವಿಶ್ವವಿದ್ಯಾಲಯದ ತುಂಬೆಲ್ಲಾ ಕಾಮನ ಬಿಲ್ಲನ್ನು ಮೂಡಿಸುತ್ತಾರೆ.

ಮಳೆಯ ರಕ್ಷಣೆಗಾಗಿ ವೈವಿಧ್ಯಮಯ ಕೊಡೆಗಳನ್ನು ಹಿಡಿದು ನಿತ್ಯಹರಿದ್ವರ್ಣದಂತಿರುವ ಕುವೆಂಪು ವಿಶ್ವವಿದ್ಯಾಲಯದ ತುಂಬೆಲ್ಲ ಬಣ್ಣ-ಬಣ್ಣದ ಛತ್ರಿಗಳ ಕಲರವ ಹೆಚ್ಚಾಗಿದೆ. ಮುಂಗಾರಿನಲ್ಲಿ ಸ್ನೇಹಿತರೊಂದಿಗೆ ಹೆಜ್ಜೆ ಹಾಕುವ ವಿದ್ಯಾರ್ಥಿಗಳನನ್ನು ನೋಡುವುದೇ ಕಣ್ಣಿಗೊಂದು ಹಬ್ಬ.

ಮಳೆಗಾಲ ಬಂತೆಂದರೆ ಅಂಗಡಿಯವರಿಗೆ ಒಂದು ರೀತಿಯ ಸಂತಸ ಏಕೆಂದರೆ ಕೊಡೆಗಳ ಮಾರಾಟ ಈ ಸಂದರ್ಭದಲ್ಲಿ ಅಧಿಕವಾಗಿರುವುದರಿಂದ ಈ ವ್ಯಾಪಾರ ಆದಾಯದ ಮೂಲವೇ ಆಗಿರುತ್ತದೆ. ವಿಶ್ವವಿದ್ಯಾಲಯದ ತುಂಬೆಲ್ಲಾ ವಿದ್ಯಾರ್ಥಿಗಳು ಉಪನ್ಯಾಸಕರು ಎನ್ನುವ ಭೇದವಿಲ್ಲದೇ ಎಲ್ಲರೂ ಬಣ್ಣಮಯ ಕೊಡೆಗಳ ಆಸರೆ ಪಡೆಯುತ್ತಿದ್ದಾರೆ.

ಕೆಲವರಿಗೆ ಈ ಕೊಡೆಗಳು ಮಳೆಯಿಂದ ರಕ್ಷಣೆ ಪಡೆಯುವ ಮಾರ್ಗ್ರವಾದರೆ, ಇನ್ನು ಕೆಲವರು ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುತ್ತಾ ವಾಸ್ತವವನ್ನು ಮರೆತು ಕಲ್ಪನಾಲೋಕದ ವಿಹಾರಿಗಳಾಗುತ್ತಾರೆ. ಇನ್ನೂ ಹಲವರು ಮಳೆ ಇರಲಿ ನೆರಳಿರಲಿ ಕೊಡೆಯನ್ನು ಅರಳಿಸಿ ಕ್ಯಾಂಪಸ್‍ನಲ್ಲಿ ಹದವಾಗಿ ಬೀಳುವ ಸೋನೆಯನ್ನು ಸವಿಯುವುದೇ ಒಂದು ವರ್ಣಿಸಲಾಗದ ಆನಂದ.

ಈ ಮುಂಗಾರಿನಲ್ಲಿ ಎಲ್ಲರ ಜೊತೆಗಾತಿಯಾಗಿರುವ ಕೊಡೆಗಳ ಇತಿಹಾಸವನ್ನೊಮ್ಮೆ ನೋಡುವುದಾದರೆ ಸುಮಾರು ತಲೆಮಾರುಗಳ ಹಿಂದೆ ಸರಿಯಬೇಕು. ಪ್ರಾಚೀನ ಈಜಿಪ್ಟಿನ ವಾಸ್ತುಶಿಲ್ಪ ಕಲೆಗಳಲ್ಲಿ ಕ್ರಿ.ಪೂ 2450ರ ಐದನೇ ರಾಜವಂಶದಲ್ಲಿ ಇದರ ಇರುವಿಕೆಯನ್ನು ಗುರುತಿಸಬಹುದು. ಅಲ್ಲಿ ಕೊಡೆಗಳಿಗೆ ಪ್ಯಾರಸೋಲ್ ಎಂದು ಹೆಸರಿದ್ದು, ಹಲವು ಕಡೆಗಳಲ್ಲಿ ಬ್ರೋಲಿ, ಪ್ಯಾರಾಪ್ಲೂಯಿ, ರೇನ್‍ಶೇಡ್, ಬಂಪರ್‍ಶೂಟ್, ಪ್ಯಾರನೀಜ್ ಎಂದು ಸಹ ಕರೆಯಲಾಗುತ್ತದೆ. ಇನ್ನು ಭಾರತದಲ್ಲಿ ಕೊಡೆಗಳ ಬಗ್ಗೆ ಹಲವಾರು ದಂತ ಕತೆಗಳಿವೆ.

ಪ್ರಾಚೀನ ಈಜಿಪ್ಟ್, ಮೆಸೊಪಟ್ಯಾಮಿಯಾ, ಚೀನಾ ಮತ್ತು ಭಾರತದಲ್ಲಿ ಕೊಡೆಗಳು ಗೌರವ ಅಧಿಕಾರದ ಗುರುತುಗಳಾಗಿತ್ತು. ಪುರಾತನ ಗ್ರೀಕರು ಚತ್ರಿಗಳನ್ನು ಯುರೋಪ್‍ಗೆ ಸೂರ್ಯನ ಜಳಕ್ಕೆ ನೆರಳುಗಳಾಗಿ ಪರಿಚಯಿಸಲು ಸಹಾಯ ಮಾಡಿದರು. ರೋಮನ್ನರು ಮಳೆಯಿಂದ ರಕ್ಷಿಸಲು ಅವುಗಳನ್ನು ಬಳಸಿದರು. ಅಷ್ಟರಲ್ಲಾಗಲೇ 18 ಮತ್ತು 19 ನೇ ಶತಮಾನದ ವೇಳೆಗೆ ಮಹಿಳೆಯರ ಫ್ಯಾಶನ್ನಿನ ಒಂದು ಭಾಗವೇ ಆಗಿಬಿಟ್ಟಿತ್ತು. ಮೊದಲಿಗೆ ಕಪ್ಪು ಬಣ್ಣಗಳಲ್ಲಿದ್ದ ಛತ್ರಿಗಳು 20ನೇ ಶತಮಾನದ ಹೊತ್ತಿಗೆ ಪ್ರಕಾಶಮಾನವಾದ ವರ್ಣರಂಜಿತ ವಿನ್ಯಾಸವನ್ನು ಪಡೆದುಕೊಂಡವು.

ಎಷ್ಟೆಲ್ಲ ಇತಿಹಾಸವನ್ನು ಹೊಂದಿರುವ ಕೊಡೆಗಳ ಹಾವಳಿ ವಿಶ್ವವಿದ್ಯಾಲಯದಲ್ಲಿ ಅಧಿಕವಾಗಿದ್ದು, ಕಳೆದ ಮೂರ್ನಾಲ್ಕು ದಶಕಗಳಲ್ಲಿ ಕೊಡೆಗಳ ವಿನ್ಯಾಸ ಸಂಪೂರ್ಣ ಬದಲಾಗಿದೆ. ಸಮಯ ಕಳೆದಂತೆ ಜಲ್ಲು ಛತ್ರಿಗಳು ಬಟನ್ ಛತ್ರಿಗಳಾಗಿ ಬಂದವು. ನಂತರ ತ್ರಿ ಪೋಲ್ಡ್ ನಂತಹ ಚತ್ರಿಗಳು ಕಿಸೆಯಲ್ಲಿ ಇಡುವಷ್ಟು ಚಿಕ್ಕದಾದವು. ಕಾಮನ ಬಿಲ್ಲಿನ ಬಣ್ಣಗಳೆಲ್ಲ ಚತ್ರಿಗಳಲ್ಲಿ ಮೂಡಿದಷ್ಟು ಕೊಡೆಗಳೆಲ್ಲ ವರ್ಣಮಯವಾದವು. ಮತ್ತದೇ ಹಳೆಯ ಫ್ಯಾಶನ್‍ಗೆ ಹಿಂದಿರುಗಿ ಊರುವ ಜಲ್ಲಾದವು. ಹಲವು ಬಣ್ಣದ ಕೊಡೆಗಳು, ಪಾರದರ್ಶಕ ಕೊಡೆಗಳು ಮಾರುಕಟ್ಟೆ ಲಗ್ಗೆಯಿಟ್ಟು ಎಲ್ಲರ ಕೈ ಸೇರಿದವು.

See also  ಕುವೆಂಪು ವಿವಿ ಪ್ರಥಮ ದರ್ಜೆ ಸಹಾಯಕ ವಿಜಯ್‌ಕುಮಾರ್‌ರ ಬೀಳ್ಕೊಡುಗೆ ಸಮಾರಂಭ

ಕೊಡೆಗಳು ಒಂದೊಳ್ಳೆ ಸ್ನೇಹಿತೆಯಿದ್ದಂತೆ. ಮಳೆಯದಾಗ ಆಸರೆಯಾಗುತ್ತದೆ. ಬಿಸಿಲಿದ್ದರೆ ನೆರಳಾಗಿ ಕಾಯುತ್ತದೆ. ಬೇಡವಾದಾಗ ನಮ್ಮೊಂದಿಗೆ ಸುಮ್ಮನೇ ಹೆಜ್ಜೆಹಾಕುತ್ತದೆ. ಇಂತಹಾ ಒಂದು ಉತ್ತಮ ಸ್ನೇಹಿತೆ ವಿವಿಯ ಎಲ್ಲರೊಂದಿಗಿದ್ದಾಳೆ ಎಂದರೆ ತಪ್ಪಾಗಲಾರದು.

Author: ಅರ್ಪಿತರಾಣಿ ಎ ಎಸ್

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು