ತುಮಕೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು 2022-23ರ ಜುಲೈ ಆವೃತ್ತಿಗೆ ಯುಜಿಸಿ ಅನುಮೋದಿತ ಶಿಕ್ಷಣಕ್ರಮ ಪ್ರವೇಶಾತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಸ್ನಾತಕ/ಸ್ನಾತಕೋತ್ತರ ಕೋರ್ಸ್ಗಳಾದ ಬಿ.ಎ/ಬಿ.ಕಾಂ/ಬಿ.ಬಿ.ಎ/ಬಿ.ಸಿ.ಎ/ಬಿ.ಎಲ್.ಐ.ಎಸ್ಸಿ ಹಾಗೂ ಬಿ.ಎಸ್ಸಿ, ಎಂ.ಎ/ಎಂ.ಸಿ.ಜೆ/ಎಂ.ಕಾಂ., ಎಂ.ಎಲ್.ಐ.ಎಸ್ಸಿ., ಎಂ.ಎಸ್ಸಿ. ಎಂ.ಬಿ.ಎ., ಪಿ.ಜಿ. ಡಿಪ್ಲೋಮಾ ಪ್ರೋಗ್ರಾಮ್ಸ್., ಡಿಪ್ಲೋಮಾ ಪ್ರೋಗ್ರಾಮ್ಸ್., ಸರ್ಟಿಫಿಕೇಟ್ ಪ್ರೋಗ್ರಾಮ್ಸ್ಗಳಿಗೆ ಕರಾಮುವಿ ತುಮಕೂರು ಪ್ರಾದೇಶಿಕ ಕೇಂದ್ರದಲ್ಲಿ ಪ್ರವೇಶಾತಿಯನ್ನು ಮಾಡಿಕೊಳ್ಳಲಾಗುತ್ತಿದೆ. ಪ್ರಥಮ ವರ್ಷದ ಈ ಮೇಲ್ಕಂಡ ಕೋರ್ಸ್ಗಳ ಪ್ರವೇಶಾತಿಗೆ 31/10/2022 ಕಡೆಯ ದಿನಾಂಕವಾಗಿರುತ್ತದೆ.
ಇತರ ಕಾಲೇಜಿನಲ್ಲಿ ಅಥವಾ ರೆಗ್ಯುಲರ್ ಆಗಿ ಓದುತ್ತಿರುವ ವಿದ್ಯಾರ್ಥಿಗಳು ಮೊದಲ ವರ್ಷ ವ್ಯಾಸಂಗ ಮಾಡಿ ಕಾರಣಾಂತರಗಳಿಂದ ಓದಲು ಆಗದಿದ್ದರೆ ಅಥವಾ ರೆಗ್ಯುಲರ್ ಆಗಿ ವಿದ್ಯಾಭ್ಯಾಸ ಮುಂದುವರೆಸಲು ಸಾಧ್ಯವಾಗದಿದ್ದರೆ, ಅಂತಹ ವಿದ್ಯಾರ್ಥಿಗಳು ಆರ್ಹತಾ ಮಾನದಂಡಗಳನ್ನು ಪೂರೈಸಿ 2ನೇ ಮತ್ತು 3ನೇ ವರ್ಷಕ್ಕೆ ಮುಕ್ತ ವಿವಿಯಲ್ಲಿ ಲ್ಯಾಟರಲ್ ಪ್ರವೇಶ ಅಥವಾ ನೇರ ಪ್ರವೇಶ ಆಯ್ಕೆ ಮಾಡಿಕೊಂಡು ವಿದ್ಯಾಭ್ಯಾಸ ಮುಂದುವರೆಸಬಹುದು.
ವಿದ್ಯಾರ್ಥಿಗಳು ಕರಾಮುವಿಯ ಅಧಿಕೃತ ವೆಬ್‌ಸೈಟ್ www.ksoumysuru.ac.in ನಲ್ಲಿ KSOU Portal ಮೂಲಕ ಈ ಮೇಲ್ಕಂಡ ಪದವಿಗಳಿಗೆ ಅನ್‌ಲೈನ್‌ನಲ್ಲಿ ಅರ್ಜಿ ಭರ್ತಿ ಮಾಡಿ ನಂತರ ಶುಲ್ಕ ಪಾವತಿಸಿ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಂಡ ತಾವು ಮೊದಲ ವರ್ಷ ಪ್ರವೇಶಾತಿ ಪಡೆದಿದ್ದ ಕೇಂದ್ರ ಕಛೇರಿ ಅಥವಾ ಪ್ರಾದೇಶಿಕ ಕೇಂದ್ರಕ್ಕೆ ನಿಗದಿ ಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಸಿದ್ದಪಾಠಗಳನ್ನು ಪಡೆಯಬಹುದು ಎಂದು ಪ್ರಾದೇಶಿಕ ನಿರ್ದೇಶಕರಾದ ಡಾ. ಲೋಕೇಶ. ಆರ್ ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ವಿಶೇಷ ಸೂಚನೆ: ಬಿ.ಪಿ.ಎಲ್. ಕಾರ್ಡ್ಅನ್ನು ಹೊಂದಿರುವ ಮಹಿಳಾ ವಿದ್ಯಾರ್ಥಿಗಳಿಗೆ (15%), ಡಿಫೆನ್ಸ್ ಹಾಗೂ ಮಾಜಿ ಸೈನಿಕ ವಿದ್ಯಾರ್ಥಿಗಳಿಗೆ (15%), ಆಟೋ/ಕ್ಯಾಬ್ ಚಾಲಕರು ಮತ್ತು ಅವರ ಮಕ್ಕಳಿಗೆ (30%) ಬೋಧನಾ ಶುಲ್ಕದಲ್ಲಿ ರಿಯಾಯಿತಿ ನೀಡಲಾಗುವುದು.
ಹೆಚ್ಚಿನ ವಿವರಗಳಿಗಾಗಿ ಪ್ರಾದೇಶಿಕ ನಿರ್ದೇಶಕರು, ಕರಾಮುವಿ ತುಮಕೂರು ಪ್ರಾದೇಶಿಕ ಕೇಂದ್ರ, ಸಿಎ-07, ಟೂಡಾ ಲೇಔಟ್, ರಾಜೀವ್‌ಗಾಂಧಿ ನಗರ, ಮೆಳೆಕೋಟೆ, ತುಮಕೂರು-572105 ದೂರವಾಣಿ ಸಂಖ್ಯೆ- 0816-2955580, 9844506629, 9886112434, 7349474339 ಅನ್ನು ಸಂಪರ್ಕಿಸಬಹುದಾಗಿದೆ.