News Kannada
Saturday, October 01 2022

ಕ್ಯಾಂಪಸ್

ಶಿವಮೊಗ್ಗ: ಕಮಲಾ ನೆಹರು ಮಹಿಳಾ ಕಾಲೇಜಿನಲ್ಲಿ ಎನ್ಎಸ್ಎಸ್ ಸಮಾರೋಪ - 1 min read

NSS concludes at Kamala Nehru Women's College
Photo Credit : By Author

ಶಿವಮೊಗ್ಗ: ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳಲು ಪದವಿಯಲ್ಲಿ ಗಳಿಸಿದ ಅಂಕಗಳೊಂದಿಗೆ ಜೀವನಪಾಠವನ್ನೂ ಯುವ ಸಮೂಹ ಕಲಿತುಕೊಳ್ಳಬೇಕು ಎಂದು ನಗರದ ಅಕ್ಷರ ಕಾಲೇಜ್ ಆಫ್ ಕಾಮರ್ಸ್ ಮತ್ತು ಬ್ಯುಸಿನೆಸ್ ಮ್ಯಾನೆಜ್ ಮೆಂಟ್‌ನ ಪ್ರಾಚಾರ್ಯರಾದ ಪ್ರೊ.ಗಿರೀಶ್ ಎಚ್.ಟಿ. ತಿಳಿಸಿದರು.

ಅವರು ಇಲ್ಲಿನ ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನಲ್ಲಿ ರಾಷ್ಟ್ರೀಯ  ಸೇವಾ ಯೋಜನೆಯು ಆಂತರಿಕ ಗುಣಮಟ್ಟ ಭರವಸೆ ಕೋಶದ ಸಹಯೋಗದಲ್ಲಿ ಆಯೋಜಿಸಿದ್ದ 2021-22ನೇ ಸಾಲಿನ ಎನ್.ಎಸ್.ಎಸ್.ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.

ಎನ್.ಎಸ್.ಎಸ್.ವಿದ್ಯಾರ್ಥಿಗಳು ಸಮಾಜದಲ್ಲಿ ಉಳಿದ ವಿದ್ಯಾರ್ಥಿಗಳಿಗಿಂತ ಭಿನ್ನವಾಗಿ ಕಾಣುತ್ತಾರೆ. ಅದಕ್ಕೆ ಕಾರಣಎನ್.ಎಸ್.ಎಸ್. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಶಿಸ್ತು ಮತ್ತು ಸಹಬಾಳ್ವೆಯ ಗುಣಗಳು ಎಂದು ಅವರು ರಾ.ಸೇ.ಯೋ.ಮಹತ್ವವನ್ನು ವಿವರಿಸಿದರು.

ಸಮಾಜದಲ್ಲಿ ವ್ಯಕ್ತಿಯ ನಡವಳಿಕೆಯನ್ನು ಗುರುತಿಸಿಕೊಳ್ಳಲ್ಲು ರಾಷ್ಟ್ರೀಯ  ಸೇವಾ ಯೋಜನೆ ಸಹಕಾರಿ ಎಂದ ಅವರು ಸ್ವಯಂಸೇವಕರು ತಮ್ಮ ಜೀವನದಲ್ಲಿ ಹಣಕ್ಕಿಂತ ಹೆಚ್ಚಾಗಿ ಸಮಾಜ ಸೇವೆಗೆ ಮಹತ್ವ ನೀಡುತ್ತಾರೆ. ಅಂಕ ಪಟ್ಟಿ ಕೇವಲ ವಿದ್ಯಾರ್ಹತೆಗೆ ಮಾತ್ರ ಸೀಮಿತವಾಗಿರುತ್ತದೆ. ಆದರೆ ಜೀವನ ಪಾಠ ಎಲ್ಲದಕ್ಕೂ ಸಹಕಾರಿಯಾಗಿರುತ್ತದೆ ಎಂದು ಅವರು ಹೇಳಿದರು.

ಎನ್.ಎಸ್.ಎಸ್.ನಿಂದ ವಿವಿಧ ಭಾಷೆ, ಸಂಸ್ಕೃತಿ, ಸಂಪ್ರದಾಯಗಳನ್ನು ಕಲಿಯಲು ಅವಕಾಶವಿದ್ದು ಪ್ರತಿಯೋರ್ವ ವಿದ್ಯಾರ್ಥಿಯೂ ಅದರ ಪ್ರಯೋಜನ ಪಡೆಯಬೇಕು ಎಂದು ಸಲಹೆ ನೀಡಿದರು.

ಪ್ರಾಚಾರ್ಯ ಡಾ.ನಾಗಭೂಷಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಎನ್.ಎಸ್.ಎಸ್.ಕಾರ್ಯಕ್ರಮಾಧಿಕಾರಿಗಳಾದ ಡಾ.ಬಾಲಕೃಷ್ಣ ಹೆಗಡೆ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಉಪನ್ಯಾಸಕರಾದ ಡಾ.ಆರ್.ಎಂ.ಜಗದೀಶ, ಡಾ.ಓಂಕಾರಪ್ಪ ಎ.ಪಿ., ಶ್ರೀಮತಿ ದೀಪಿಕಾ ವಿ.ಮೊದಲಾದವರು ಉಪಸ್ಥಿತರಿದ್ದರು. ಕು.ದಿವ್ಯಾ ಎಂ., ಸ್ವಾಗತಿಸಿದರು. ಪವಿತ್ರಾ ಎ. ವಂದಿಸಿದರು. ಸಹನಾ ಟಿ., ಸತ್ಯವತಿ ಬಿ. ಕಾರ್ಯಕ್ರಮ ನಿರ್ವಹಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

See also  ಮಂಗಳೂರು: ಸ್ಮಾರ್ಟ್ಇಂಡಿಯಾ ಹ್ಯಾಕಥಾನ್ 2022- ಸಹ್ಯಾದ್ರಿ ಕಾಲೇಜ್‌ ನೋಡಲ್‌ ಕೇಂದ್ರವಾಗಿ ಆಯ್ಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

1616
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು