News Kannada
Tuesday, December 06 2022

ಕ್ಯಾಂಪಸ್

ನಮ್ಮ ಆಧುನಿಕ ಶಿಕ್ಷಣದಲ್ಲಿ ವಸ್ತು ಸಂಗ್ರಹಾಲಯದ ಪಾತ್ರ

Photo Credit : By Author

ಶಿಕ್ಷಣವು ಇಂದು ಮಾನವನ ಜೀವನದಲ್ಲಿ ಒಂದು ಪ್ರಮುಖ ಪಾತ್ರ ವಹಿಸಿದೆ. ಆತನ ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಣವು ದಾರಿದೀಪವಾಗಿದೆ. ಶಿಕ್ಷಣದಿಂದಲೇ ಮಾನವನ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ನಾವು ಈಗಾಗಲೇ ತಿಳಿದುಕೊಂಡಿದ್ದೇವೆ. ಆದರೆ, ಇಂದಿನ ಆಧುನಿಕ ಯುಗದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಎನ್ನುವಂತಹದ್ದು ಮುಂದುವರಿದು ಶಿಕ್ಷಣ ಕ್ಷೇತ್ರದ ಮೇಲೆಯೂ ಅಪಾರವಾದ ಪರಿಣಾಮವನ್ನು ಬೀರಿದೆ. ಇದರಿಂದಾಗಿ ನಾವು ಪುಸ್ತಕದಿಂದ ಕೇವಲ ಓದಿ ತಿಳಿದುಕೊಳ್ಳುವ ವಿಷಯಗಳನ್ನು ದೃಶ್ಯಮಾಧ್ಯಮಗಳ ಮೂಲಕ ನೋಡಿ ತಿಳಿದುಕೊಳ್ಳುವಂತಹ ಸಾಮರ್ಥ್ಯವನ್ನು ಪಡೆದುಕೊಂಡಿದ್ದೇವೆ.

“ದೇಶ ಸುತ್ತಿ ನೋಡು, ಕೋಶ ಓದಿ ನೋಡು” ಎನ್ನುವ ಗಾದೆಯಂತೆ, ನೈಜ ಅನುಭವವನ್ನು ಪಡೆಯಲು ಕಲಿಕಾ ವಿಷಯಗಳಿಗೆ ಸಂಬಂಧಿಸಿದ ಸ್ಥಳಗಳಿಗೆ ಭೇಟಿ ನೀಡುವ ಮೂಲಕ ನಮ್ಮ ಜ್ಞಾನವನ್ನು ಹೆಚ್ಚಿನ ಮಟ್ಟದಲ್ಲಿ ಅಭಿವೃದ್ಧಿ ಪಡಿಸಿಕೊಳ್ಳಬಹುದು. ಇದಕ್ಕೆ ಸಂಬಂಧಿಸಿದಂತೆ ನನ್ನ ಸ್ವತಃ ಒಂದು ಅನುಭವವೆಂದರೆ… ನಾನು ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ನಮ್ಮ ಜೀವಶಾಸ್ತç ಉಪನ್ಯಾಸಕಿಯಾದ ಶ್ರೀಮತಿ ವಾರಿಜಾ ರವರು ನಮಗೆ ಮಾನವನ ದೇಹದ ಅಂಗಗಳ ಬಗ್ಗೆ ಬೋಧಿಸುತ್ತಿದ್ದ ಸಂದರ್ಭದಲ್ಲಿ ಅದೇ ವಿಷಯದ ಕುರಿತು ಮತ್ತಷ್ಟು ಜ್ಞಾನವನ್ನು ನೀಡಲು ನಿಟ್ಟೆ ವೈದ್ಯಕೀಯ ಕಾಲೇಜು ಮೂಡಬಿದ್ರೆಯಲ್ಲಿರುವ ಪ್ರಯೋಗಾಲಯಕ್ಕೆ ನಮ್ಮನ್ನು ಕರೆದುಕೊಂಡು ಹೋಗಿ ಅಲ್ಲಿ ಮಾನವನ ದೇಹದ ಒಳಅಂಗಗಳು ಹಾಗೂ ಅವುಗಳ ಕ್ರಿಯೆಯ ಕುರಿತು ಮಾಹಿತಿಯನ್ನು ನೀಡಿದರು. ಇದರಿಂದಾಗಿ ಶಿಕ್ಷಣದಲ್ಲಿ ಉಪನ್ಯಾಸ ವಿಧಾನಕ್ಕೂ, ನೈಜ್ಯವಾಗಿ ನೋಡಿ ಕಲಿಯುವುದಕ್ಕೂ ಎಷ್ಟು ವ್ಯತ್ಯಾಸವಿದೆ ಎಂದು ನಾವು ತಿಳಿದುಕೊಂಡೆವು.

ಹಾಗಾಗಿ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿಯೂ ಸಹ ವಿದ್ಯಾರ್ಥಿಗಳಿಗೆ ನೈಜ ಅನುಭವವನ್ನು ನೀಡುವ ಮೂಲಕ ಶಿಕ್ಷಣವನ್ನು ನೀಡಿದರೆ ಅವರ ಜ್ಞಾನವನ್ನು ಉನ್ನತೀಕರಿಸಬಹುದಾಗಿದೆ. ಶಿಕ್ಷಕರು ಕಲಿಕಾ ವಿಷಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳನ್ನು ತಾರಾಲಯಗಳು, ಪ್ರಯೋಗಾಲಯಗಳು, ಪ್ರಾಣಿ-ಸಂಗ್ರಹಾಲಯಗಳು, ಪಕ್ಷಿಧಾಮಗಳು ಮತ್ತು ಐತಿಹಾಸಿಕ ಸ್ಥಳಗಳಿಗೆ ಕರೆದುಕೊಂಡು ಹೋಗುವ ಮೂಲಕ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಬಹುದು.

ಇವುಗಳಲ್ಲದೆ ಪ್ರಾಚೀನ ವಸ್ತುಗಳು, ನಾಣ್ಯಗಳು ಯುದ್ಧೋಪಕರಣಗಳು, ಸಲಕರಣೆಗಳು, ಯಂತ್ರಗಳು ಇತ್ಯಾದಿಗಳನ್ನು ನಾವು ನಮ್ಮ ಹತ್ತಿರದ ವಸ್ತು ಸಂಗ್ರಹಾಲಯಗಳಿಗೆ ಭೇಟಿ ನೀಡುವ ಮೂಲಕ ತಿಳಿದುಕೊಳ್ಳಬಹುದು.

ವಸ್ತುಸಂಗ್ರಹಾಲಯವು ಅಪರೂಪವಾಗಿ ಕಾಣಸಿಗುವ ವಸ್ತುಗಳ ಸಂಗ್ರಹವಾಗಿದ್ದು ಇಲ್ಲಿ ಐತಿಹಾಸಿಕ, ವೈಜ್ಞಾನಿಕ, ಕಲೆ, ಸಾಹಿತ್ಯಕ್ಕೆ ಸಂಬಂಧಿಸಿದಂತಹ ಉಪಕರಣಗಳನ್ನು ಸಂಗ್ರಹಿಸಿ ಅವುಗಳನ್ನು ಜನರಿಗೆ ಪ್ರದರ್ಶಿಸಲು ಇರುವಂತಹ ಸ್ಥಳವಾಗಿದೆ.

ನಮ್ಮ ಆಧುನಿಕ ಶಿಕ್ಷಣದಲ್ಲಿ ವಸ್ತು ಸಂಗ್ರಹಾಲಯದ ಮಹತ್ವ:
ಶಿಕ್ಷಣ ಕ್ಷೇತ್ರದಲ್ಲಿ ವಸ್ತು ಸಂಗ್ರಹಾಲಯವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಶಿಕ್ಷಕರು ವಿದ್ಯಾರ್ಥಿಗಳನ್ನು ವಸ್ತು ಸಂಗ್ರಹಾಲಯಕ್ಕೆ ಕರೆದುಕೊAಡು ಹೋಗಿ ಪಾಠ ವಿಷಯಕ್ಕೆ ಸಂಬಂಧಿಸಿದಂತಹ ವಸ್ತುಗಳನ್ನು ವೀಕ್ಷಿಸಲು ಅವಕಾಶವನ್ನು ಕಲ್ಪಿಸುವುದರಿಂದ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟವನ್ನು ಉನ್ನತೀಕರಣಗೊಳಿಸುವುದರ ಜೊತೆಗೆ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಮೂಡಿಸಬಹುದು ಹಾಗೂ ಅವರು ನೋಡಿದಂತಹ ವಸ್ತು ವಿಷಯಗಳ ಕುರಿತು ಅನುಭವಗಳನ್ನು ಕೇಳಿದಾಗ ಅವರೆಷ್ಟು ಜ್ಞಾನ ಸಂಪಾದಿಸಿಕೊAಡಿದ್ದಾರೆAದು ತಿಳಿದುಕೊಳ್ಳಬಹುದು. ವಸ್ತು ಸಂಗ್ರಹಾಲಯವು ಹಲವಾರು ಮಾದರಿ ವಸ್ತುಗಳನ್ನು ಸಂಗ್ರಹಿಸುವ ಮೂಲಕ ಮುಂದಿನ ತಲೆಮಾರಿನ ಯುವಜನತೆಗೆ ಆ ವಸ್ತುಗಳ ಮಹತ್ವದ ಕುರಿತು ಅರಿವನ್ನು ಮೂಡಿಸುತ್ತದೆ.

ನಾನು ಮ್ಯೂಸಿಯಂ ಗೆ ಭೇಟಿ ನೀಡಿದ ಕ್ಷಣ:
ಸಂತ ಅಲೋಶಿಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಥಮ ವರ್ಷದ ಬಿ.ಇಡಿ ಕಲಿಯುತ್ತಿದ್ದ ಸಂದರ್ಭದಲ್ಲಿ ನಾನು ನನ್ನ ಸಹಪಾಠಿಗಳೊಂದಿಗೆ ಅಲೋಶಿಸ್ ಮ್ಯೂಸಿಯಂಗೆ ಭೇಟಿ ನೀಡಿದಾಗ ಅಲ್ಲಿದ್ದಂತಹ ತುಳುನಾಡಿನ ಸಂಸ್ಕೃತಿಯ ನಾಗರಾಧನೆ, ಪ್ರಾಚೀನ ದೇವರ ವಿಗ್ರಹಗಳು, ಲೋಹದ ವಸ್ತುಗಳು, ಸಂಗೀತೋಪಕರಣಗಳು, ರಾಜರುಗಳು ಬಳಸುತ್ತಿದ್ದ ಯುದ್ಧೋಪಕರಣಗಳು, ಕೃಷಿಯಲ್ಲಿ ಬಳಸುತ್ತಿದ್ದ ಉಪಕರಣಗಳು ಹಾಗೂ ಪುಸ್ತಕಗಳು ಮಾತ್ರವಲ್ಲದೆ, ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಪ್ರಾಣಿಗಳ ಅಸ್ಥಿಪಂಜರÀ ಹಾಗೂ ಕಪ್ಪೆಯಂತಹ ಜೀವಿಗಳ ಮಾದರಿಯನ್ನು ಮತ್ತು ಮಂಗಳೂರಿಗೆ ಬಂದ ಮೊದಲ ಕಾರನ್ನು ಕೂಡ ಅಲ್ಲಿ ಗಮನಿಸಿದೆನು.

See also  ಮಂಗಳೂರು ವಿವಿ : ಸ್ನಾತಕೋತ್ತರ ಪದವಿಗೆ ಅರ್ಜಿ ಸಲ್ಲಿಸಲು ಕಡೆಯ ದಿನ ವಿಸ್ತರಣೆ

ಇದನ್ನೆಲ್ಲ ಗಮನಿಸಿದ ನಂತರ, ನಾನು ಒಬ್ಬ ಶಿಕ್ಷಕಿಯಾಗಿ, ವಿದ್ಯಾರ್ಥಿಗಳಿಗೆ ಕೇವಲ ಬೋಧಿಸುವುದರಿಂದ ಅವರ ಜ್ಞಾನ ಅಭಿವೃದ್ಧಿಪಡಿಸುವ ಬದಲಾಗಿ ನೈಜ ಅನುಭವವನ್ನು ನೀಡುವ ಮೂಲಕ ಅವರ ಜ್ಞಾನದ ಮಟ್ಟವನ್ನು ಉನ್ನತಿಕರಿಸಬಹುದೆಂದು ಮನವರಿಕೆ ಮಾಡಿಕೊಂಡನು.

ಈ ನಿಟ್ಟಿನಲ್ಲಿ ನಾವು ಆಧುನಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಹೊಸ ಹೊಸ ವಿಧಾನಗಳ ರೀತಿಯಲ್ಲಿ ಬೋಧನೆಯನ್ನು ಮಾಡಿದಾಗ ಮಾತ್ರ ವಿದ್ಯಾರ್ಥಿಗಳ ಜ್ಞಾನವನ್ನು ಬೆಳೆಸುವ ಕೆಲಸ ಮಾಡಬಹುದು. ಹಾಗೆ ಕಂಪ್ಯೂಟರ್, ಮೊಬೈಲ್ ಇತ್ಯಾದಿಗಳಿಂದಲೂ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಬಹುದಾದರೂ ಅವುಗಳಿಂದಾಗುವ ಕೆಡುಕುಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸುವುದು ಅನಿವಾರ್ಯ. ಆದರೆ ನಾವೇ ವಿದ್ಯಾರ್ಥಿಗಳನ್ನು ಇತರ ಪ್ರಮುಖ ಸ್ಥಳಗಳಿಗೆ ಕರೆದುಕೊಂಡು ಹೋಗುವ ಮೂಲಕ ನೈಜ ಅನುಭವವನನ್ನಾಧರಿಸಿದ ಜ್ಞಾನವನ್ನು ನೀಡಬಹುದು ಎಂಬುದು ನನ್ನ ಆಶಯ.

ಈ ವಿಷಯದ ಕುರಿತು ವಿಡಿಯೋವನ್ನು ಮಾಡಲಾಗಿದೆ. ಅದನ್ನು ವೀಕ್ಷಿಸಲು ಈ ಕೆಳಗಿನ ಲಿಂಕನ್ನು ಬಳಸಿ.

Kindly give a YouTube Preview Here

Link: https://youtu.be/kHfiMsW7tJY

Embed Code:
<iframe width="560" height="315" src="https://www.youtube.com/embed/kHfiMsW7tJY"
title="YouTube video player" frameborder="0" allow="accelerometer; autoplay; clipboard-write;
encrypted-media; gyroscope; picture-in-picture" allowfullscreen></iframe>

– ಸಿಂಚನ ಎನ್ ಆರ್, ಪುತ್ತೂರು

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12792
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು