News Kannada
Saturday, December 03 2022

ಕ್ಯಾಂಪಸ್

ಮೂಡುಬಿದಿರೆ: ನೈತಿಕತೆ ಶಿಕ್ಷಣದ ಪರಿಭಾಷೆಯಾದಾಗ ಜೀವನ ಅರ್ಥಪೂರ್ಣ- ಅಜಿತ ಹನುಮಕ್ಕನವರ್

Moodbidri: Life is meaningful when morality becomes the terminology of education: Ajitha Hanumakkanavar
Photo Credit : News Kannada

ಮೂಡುಬಿದಿರೆ: ನೀವು ಹೆಚ್ಚು ಇಷ್ಟಪಡುವುದನ್ನು ನಿಮ್ಮ ವೃತ್ತಿಯಾಗಿ ಆರಿಸಿಕೊಂಡರೆ ನಿಮ್ಮ ಜೀವನ ಅದ್ಭುತವಾಗುತ್ತದೆ. ಮನುಷ್ಯನು ಜೀವನೋಪಾಯಕ್ಕಾಗಿ ಮತ್ತುಆತ್ಮ ತೃಪ್ತಿಗಾಗಿ ದುಡಿಯುತ್ತಾನೆ. ಒಂದೇ ಕೆಲಸದಿಂದಎರಡೂ ಉದ್ದೇಶಗಳನ್ನು ಪೂರೈಸಿದರೆ ಜೀವನ ಸಾರ್ಥಕವಾಗುತ್ತಾದೆ. ಮಾತು ಮತ್ತು ಬರವಣಿಗೆಗಳಿಂದ ವ್ಯಕ್ತಿತ್ವವನ್ನು ರೂಪಿಸಲು ಸಾಧ್ಯ. ಹೃದಯಕ್ಕೆ ಹತ್ತಿರವಾದುದನ್ನುಆಯ್ದು ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಶಿಕ್ಷಣವು ನಮ್ಮ ಭವಿಷ್ಯದ ಬಾಗಿಲಿಗೆ ಕೀಲಿಕೈ. ಶಿಕ್ಷಣದ ಪರಿಭಾಷೆಯಲ್ಲಿ ನೈತಿಕತೆಗೆ ಹೆಚ್ಚಿನ ಪ್ರಾಮುಖ್ಯತೆ ಸಿಗುವಂತಾಗಬೇಕು. ನಿಮ್ಮಜೀವನದಲ್ಲಿ ಒಂದು ಗುರಿಯನ್ನು ಮನಸ್ಸಿನಲ್ಲಿಟ್ಟುಕೊಂಡಾಗ ಗಮ್ಯದ ಜೊತೆಗೆ ನಡೆಯುವ ದಾರಿಯಲ್ಲೂ ನೈತಿಕತೆ ಮುಖ್ಯವಾಗುತ್ತದೆ. ನೈತಿಕ  ಮೌಲ್ಯದ ಪಾಠವು ಶಿಕ್ಷಣದ ಉದ್ದೇಶವನ್ನು ಸಾಕಾರಗೊಳಿಸುತ್ತದೆ ಎಂದು ಸುವರ್ಣಕನ್ನಡ ಸುದ್ದಿವಾಹಿನಿಯ ಪ್ರಧಾನ ಸಂಪಾದಕ ಅಜಿತ್ ಹನುಮಕ್ಕನವರ್ ಹೇಳಿದರು.

ಅವರು ಗಾಂಧಿ ಜಯಂತಿಯ ಪ್ರಯುಕ್ತ ಮೂಡುಬಿದಿರೆ ಎಕ್ಸಲೆಂಟ್ ವಿದ್ಯಾ ಸಂಸ್ಥೆಯಲ್ಲಿ ನಡೆದ “ಶಿಕ್ಷಣ ಮತ್ತು ನೈತಿಕ ಮೌಲ್ಯಗಳು”ಎನ್ನುವ ವಿಷಯದ ಕುರಿತು ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಪಾಲ್ಗೊಂಡು ವಿದ್ಯಾರ್ಥಿಗಳ ಜೊತೆತಮ್ಮಅಭಿಪ್ರಾಯವನ್ನು ಹಂಚಿಕೊಂಡರು.

ಅನ್ನಕ್ಕಾಗಿ ಆತ್ಮ ಸಂತೋಷಕ್ಕಾಗಿ ಕೆಲಸ ಮಾಡಬೇಕು ಇವೆರಡನ್ನು ಒಂದರಲ್ಲೇ ಗಳಿಸಿಕೊಳ್ಳಬೇಕು ಎಂದರು. ಹಾಗೆಯೇ ಶಿಕ್ಷಣ ಮತ್ತು ನೈತಿಕ ಮೌಲ್ಯದ ಕುರಿತು ಮಾತನಾಡಿದ ಇವರು ಸಾವಿರಾರು ಬದಲಾವಣೆಗೆ ಸಾಕ್ಷಿಯಾಗುತ್ತಿರುವ ತಲೆಮಾರು ಇಂದಿನ ತಲೆಮಾರು ಈ ಸ್ಪರ್ಧಾತ್ಮಕಜಗತ್ತಿನಲ್ಲಿ ಸ್ಪರ್ಧಾ ಮನೋಭಾವದಿಂದ ನೈತಿಕತೆ ಮಾಯವಾಗಬಾರದು. ನಮ್ಮ ಗುರಿಯನ್ನು ನೈತಿಕತೆ ಮುನ್ನಡೆಸಬೇಕು ಎನ್ನುತ್ತಾ ತಪ್ಪು ಮಾಡುವಾಗ ಕಲಿಸಿದ ಗುರು ನೆನಪಾಗ ಬೇಕು,ಆಗ ತಪ್ಪುಗಳಾಗುವುದಿಲ್ಲ ಎಂದರು. ಈ ಮಣ್ಣು ಪೂಜಿಸುವಂತದ್ದು ಭೋಗಿಸಿದವರನ್ನಲ್ಲ ತ್ಯಾಗಿಸಿದವರನ್ನು ಎಂದು ಹೇಳುತ್ತಾ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ ನೈತಿಕ ಶಿಕ್ಷಣ ಮನೆಯಿಂದಲೇ ಆರಂಭವಾಗಬೇಕು ನನ್ನದಲ್ಲದ ವಸ್ತುವನ್ನು ಮುಟ್ಟದೇಇರುವುದು ನೈತಿಕತೆ ಶಿಕ್ಷಣ ದುಡ್ಡಿನಿಂದ ತುಂಬಿದೆ ಎನ್ನುವುದು ಸುಳ್ಳು ಜ್ಞಾನಎಲ್ಲರಿಗೂ ಉಚಿತ ಅದಕ್ಕಾಗಿ ಸಾಮರ್ಥ್ಯದ ಆಧಾರದ ಮೇಲೆ ಶ್ರೇಣಿ ನೀಡುವುದು ತಪ್ಪು ಶಿಕ್ಷಣ ಸ್ಪರ್ಧೆಯಲ್ಲಅದೊಂದು ಮೌಲ್ಯ ಎನ್ನುತ್ತಾ ಸಾಮಾಜಿಕ ಜಾಲ ತಾಣಗಳನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆಯೋ ಹಾಗೆ ಪ್ರಯೋಜನಗಳಾಗುತ್ತವೆ.

ನೈತಿಕತೆಎನ್ನುವುದು ಪಠ್ಯ ಪುಸ್ತಕದಿಂದ ಹೊರತಾಗಿದೆಅದು ಅನುಭವಗಳಿಂದ ಹೊರಗಿನಕಲಿಕೆಯಿಂದ ಲಭಿಸುತ್ತದೆ.ನೈತಿಕ ಶಿಕ್ಷಣ ಎಲ್ಲಾ ಪುರುಷರಿಗೆದೊರಕಬೇಕು ಹೀಗಾದಾಗ ಸಮಾಜದಲ್ಲಿ ಸ್ತ್ರೀಯರಿಗೆ ರಕ್ಷಣೆ ಸಿಗುತ್ತದೆ. ಅನಾಚಾರಗಳು ಸಂಭವಿಸುವುದಿಲ್ಲ. ವಿದ್ಯಾರ್ಥಿಗಳು ಇದನ್ನುಅರ್ಥ ಮಾಡಿಕೊಳ್ಳಬೇಕು ಓದು ಬರವಣಿಗೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳುತ್ತಾ ನೈತಿಕತೆಯಅರಿವು ಮೂಡಿಸುವಲ್ಲಿ ಮಾಧ್ಯಮಗಳ ಪಾತ್ರವೇನು ಎಂಬ ಓರ್ವ ವಿದ್ಯಾರ್ಥಿಯ ಪ್ರಶ್ನೆಗೆ ಉತ್ತರಿಸಿದ ಇವರುಮಾಧ್ಯಮಗಳು ಜನರನ್ನುಎಚ್ಚರಿಸುವ ಕೆಲಸವನ್ನು ಮಾಡುತ್ತಿವೆ ಸಮಾಜದ ಒಳಿತಿಗಾಗಿ ದುಡಿಯುತ್ತಿವೆಎಂದು ಹೇಳಿದರು.

ನೀವು ಪಡೆಯುವ ಅಂಕ ಉದ್ಯೋಗಕ್ಕೆ ಮೊದಲ ಬಾಗಿಲು ಅಷ್ಟೇ.ನಿಮ್ಮ ಪ್ರತಿಭೆ ಮತ್ತು ಕೌಶಲಗಳು ನಿಮ್ಮನ್ನುಎತ್ತರದ ಸ್ಥಾನಕ್ಕೆ ಕೊಂಡೊಯ್ಯುತ್ತದೆ.ಅದಕ್ಕೆನೈತಿಕತೆ ಬಹಳ ಅಗತ್ಯವಾಗಿದೆ. ಜೀವನದಲ್ಲಿ ನಿಮ್ಮ ಚಾರಿತ್ರ್ಯವನ್ನು ಪರೀಕ್ಷೆಗೊಡ್ಡುವ ಅನೇಕ ಸಂದರ್ಭಗಳು ಎದುರಾದಾಗ ನಿಮ್ಮ ನೈತಿಕತೆಯೇ ನಿಮ್ಮನ್ನು ದಡ ಸೇರಿಸುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

See also  ಸ್ಪಷ್ಟ ಮತ್ತು ಸತ್ಯತೆಯ ಸುದ್ದಿಗಳು ಜನರನ್ನು ಆಕರ್ಷಿಸುತ್ತದೆ : ಶ್ರೀನಿವಾಸ ಪೆಜತ್ತಾಯ

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಎಕ್ಸಲೆಂಟ್‌ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷಯುವ ರಾಜ್‌ಜೈನ್ ಮಾತನಾಡಿ, ನೈತಿಕತೆ ನಿಮ್ಮಲ್ಲಿ ಈಗಾಗಲೇ ಅಂತರ್ಗತವಾಗಿದೆ. ಅದನ್ನು ಉದ್ದೀಪನಗೊಳಿಸಲು ಇಂಥಹ ಕಾರ್ಯಕ್ರಮಗಳು ನಡೆಯಬೇಕಿವೆ. ವಿದ್ಯಾರ್ಥಿಗಳಲ್ಲಿ ಇರುವಆತಂಕವನ್ನು ಹೋಗಲಾಡಿಸಲು ನೈತಿಕ ಶಿಕ್ಷಣದ ಪಾಠ ಅಜಿತ್ ಹನುಮಕ್ಕನವರ್‌ ಅಂಥವರ ಮಾರ್ಗದರ್ಶನದಿಂದ ಸಾಧ್ಯ. ನಮ್ಮ ಆಲೋಚನೆಗಳು ಸುಪ್ತ ಮನಸ್ಸಿನಲ್ಲಿ ದಾಖಲಾಗಿ ನಮ್ಮ ಭವಿಷ್ಯವನ್ನುರೂಪಿಸುತ್ತವೆ. ಹಾಗಾಗಿ ಸದಾ ಒಳ್ಳೆಯ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು. ನೈತಿಕ ಶಿಕ್ಷಣ ಹುಟ್ಟಿನಿಂದ ಜೀವನದ ಕೊನೆಯ ಹಂತದವರೆಗೂ ಕಲಿಯಲು ಇರುವಂಥದ್ದು. ಹಿರಿಯರ ಮಾರ್ಗದರ್ಶನದಿಂದ ವ್ಯಕ್ತಿತ್ವವನ್ನು ರೂಪಿಸಿಕೊಂಡು, ಕೊನೆಯ ಉಸಿರಿನವರೆಗೆ ಮೌಲ್ಯಯುತ ಜೀವನವನ್ನು ನಡೆಸುವಂತಾಗಬೇಕು ಎಂದರು.

ಉಪನ್ಯಾಸದ ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಸಂಸ್ಥೆಯ ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯವರನ್ನು ಗೌರವಿಸುವ ಕಾರ್ಯಕ್ರಮವನ್ನು ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ನಡೆಸಿಕೊಟ್ಟರು.ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಶಿವಪ್ರಸಾದ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರದೀಪ್‌ಕುಮಾರ್ ಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕ ಹರೀಶ್ ಮರವಂತೆ ಮುಖ್ಯ ಅತಿಥಿಯನ್ನು ಪರಿಚಯಿಸಿದರು. ಉಪನ್ಯಾಸಕಿ ಯಶಸ್ವಿನಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು