News Kannada
Sunday, December 04 2022

ಲೇಖನ

ನಾಡಹಬ್ಬ ದಸರಾ ಮಹೋತ್ಸವ- ನಮಗೊಂದು ಬದುಕು ಕಲ್ಪಿಸಿ…!

Photo Credit : News Kannada

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಚಿಕ್ಕ ಮಕ್ಕಳಿಗೆ ಮನರಂಜನೆಗೆ ಹಾಗೂ ಎಲ್ಲಾ ಮಕ್ಕಳ ಕಣ್ಸೆಳೆಯುವ ವಿವಿಧ ರೀತಿಯ ಆಟಿಕೆಗಳು, ಬಗೆಬಗೆಯ ಮುಖವಾಡಗಳು (ಮಾಸ್ಕ್), ಬಲೂನ್ ಮುಂತಾದವುದನ್ನು ಗುಲ್ಬರ್ಗಾ ರಾಜ್ಯದ ಮೂಲ ನಿವಾಸಿ ಗಿರಿಜಪತಿ ಅವರು ಕಳೆದ ೧೫ ವರ್ಷ (೨೦೦೭) ದಿಂದ ಸತತವಾಗಿ ಮಾರುತ್ತಾ ಬಂದಿದ್ದಾರೆ.

ಇವರು ನಗರದಲ್ಲಿರುವ ಖ್ಯಾತ ಸ್ಥಳ ದೊಡ್ಡಕೆರೆ ಮೈದಾನದ ಎದುರಿನಲ್ಲಿ ಚಿಕ್ಕ ಗುಡಿಸಲು ಹಾಕಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಎಷ್ಟೇ ಕೊರೆವ ಚಳಿ ಇರಲೀ, ರಭಸವಾದ ಗಾಳಿ ಬೀಸಲೀ, ರಣ ಮಳೆಯೇ ಬಿದ್ದರೂ ಅವರ ಕುಟುಂಬ ಅಲ್ಲೇ ವಾಸಿಸುತ್ತಿದ್ದಾರೆ. ಕರೋನಾ ಮಹಾಮಾರಿ ಸಂದರ್ಭದಲ್ಲಿ ಜೀವನ ನೆಡೆಸಲು ತೀರಾ ಕಷ್ಟವಾಗಿತ್ತು. ನಾವು ಉಪವಾಸವಿದ್ದರೂ ಮನೆಯವರು, ಮೊಮ್ಮಕ್ಕಳು ಹಸಿವಿನಿಂದ ಮಲಗಬಾರದೆಂಬ ಕಾರಣದಿಂದ ಕೂಲಿ ಕೆಲಸ ಮಾಡಿ, ಮನೆ ಮನೆಗೆ ಹೋಗಿ ಜೀತದ ಕೆಲಸ ಮಾಡಿ ಬಂದ ಅಷ್ಟೋ ಇಷ್ಟೋ ಹಣದಲ್ಲಿ ಎಲ್ಲರನ್ನು ಸಾಕಬೇಕಾದ ಪರಿಸ್ಥಿತಿ ಒದಗಿತ್ತು. ಆದರೆ ಮೈಸೂರಿನಲ್ಲಿ ದಸರಾ ಹಬ್ಬ ಬಂದರೆ ಅವರಿಗೆಲ್ಲೋ ಒಂದು ಮನಸಿನ ಕಡೆ ಸ್ಡಲ್ಪ ಹಣಗಳಿಸಿ ಮನೆಯವರನ್ನು ಸಾಕಬಹುದು ಎಂಬ ನಂಬಿಕೆ ಅವರದ್ದು.

ಸರ್ಕಾರದಿಂದ ಇವತ್ತಿನವರೆಗೂ ಯಾವುದೇ ರೀತಿಯ ಮೂಲ ಸೌಲಭ್ಯ ಹಾಗೂ ಸೌಕರ್ಯಗಳು ದೊರೆತಿಲ್ಲ. ಪ್ರಾಯಶಃ ಸರ್ಕಾರ ಬಡ ಜನರಿಗೆ ನೀಡಿರುವ ಯೋಜನೆಯಡಿ ನಮ್ಮಂತವರನ್ನು ಗುರುತಿಸಿ ಪುಟ್ಟ ಮನೆಯನ್ನಾದರೂ ನಿರ್ಮಿಸಿಕೊಟ್ಟರೆ ತುಂಬಾ ಉಪಯುಕ್ತವಾಗುತ್ತದೆ. ಹಾಗೆಯೇ ಸರ್ಕಾರಿ ಬ್ಯಾಂಕ್‌ಗಳಿಂದ ೫ಲಕ್ಷ ರೂ. ಸಾಲವನ್ನು ನೀಡಿದರೆ ಮಳಿಗೆಯನ್ನು ಹಾಕಿಕೊಂಡು ವ್ಯಾಪಾರ ಮಾಡುತ್ತೇವೆ ಅಥವಾ ಹೇಗೂ ಗಂಡು ಮಕ್ಕಳ ಬಳಿ ವಾಹನ ಚಾಲನೆಯ ಅಧಿಕಾರ ಪತ್ರವಿದೆ, ವಾಹನ ಖರೀದಿ ಮಾಡಿ ಬಾಡಿಗೆಗೆ ಓಡಿಸಿದರೆ ವರ್ಷಕ್ಕೆ ೨ರಿಂದ ೨.೫ವರೆಗೆ ಹಣಗಳಿಸಿ ಸಾಲ ತೀರಿಸಿ ಹೇಗೋ ಜೀವನ ಸಾಗಿಸುತ್ತಾರೆ.

ಈ ದಸರಾ ಸಮಯದಲ್ಲಿ ಅರಮನೆಯ ಸುತ್ತ ಮುತ್ತ ಬೆಳಿಗ್ಗೆ ೯ರಿಂದ ರಾತ್ರಿ ೧೧ರವರೆಗೆ ಕೆಲಸ ಮಾಡುತ್ತೇವೆ. ಬೆಲೂನ್ – ೧೦೦ರಿಂದ ೨೦೦ರೂ. ವರೆಗೆ, ಮಾಸ್ಕ್ – ೫೦ರಿಂದ ೧೦೦ರೂ. ವರೆಗೆ, ತುತ್ತೂರಿ, ಡಮರು, ಪ್ಲಾಸ್ಟಿಕ್ ಬಂದುಕು, ಕತ್ತಿ ಮುಂತಾದವುಗಳು ೫೦ರಿಂದ ೨೫೦ರವರೆಗೆ ಮಾರುತ್ತಿದ್ದಾರೆ. ಮಾರಾಟವಾದರೆ ಕೇವಲ ಅರ್ಧ ಮೊತ್ತ ಮಾತ್ರ ದೊರೆಯುತ್ತದೆ. ಉಳಿದ ಹಣದಲ್ಲಿ ಪಾಲಿಕೆಗೆ, ಪೋಲೀಸರಿಗೆ ನೀಡಿ, ಖಚ್ಚಾ ಪದಾರ್ಥಕ್ಕೆ ಬಳಕೆಯಾಗುತ್ತದೆ. ಇಂದಿನ ವರ್ಷದಿಂದ ಸರ್ಕಾರ ಕರ್ಕಶವಾದ ಪೀಪಿಯನ್ನು ಶಬ್ಧ ಮಾಲಿನ್ಯ ಹಾಗೂ ರಾತ್ರಿ ವೇಳೆಯಲ್ಲಿ ಹುಡುಗರು ಪೀಪಿ ಊದಿ ತೊಂದರೆ ಮಾಡುತ್ತಿದ್ದದ್ದನ್ನು ತಪ್ಪಿಸಿದ್ದು ಪ್ರಶಂಸನೀಯ.

“ಮೈಸೂರು ಎಂದ ತಕ್ಷಣ ನೆನೆಪಿಗೆ ಬರುವುದು ಚಾಮುಂಡಿಬೆಟ್ಟ, ಅರಮನೆ, ದೀಪಾಲಂಕಾರ, ಸಾಂಸೃತಿಕ ಕಲೆಗಳು ಹಾಗೂ ಕಣ್ಸೆಳೆಯುವ ಜಂಬೂ ಸವಾರಿ ನೋಡುವುದೇ ಚೆಂದ. ಇಲ್ಲಿವರೆಗೆ ನಗರದ ಜನತೆಯಾಗಲೀ ಅಥವಾ ಜಿಲ್ಲಾಡಳಿತವಾಗಲೀ ಯಾವುದೇ ರೀತಿಯ ತೊಂದರೆ ಮಾಡಿಲ್ಲ. ವ್ಯಾಪಾರ ಸಾಧಾರಣ ಸ್ಥಿತಿಯಲ್ಲಿದೆ. ಪ್ರತಿ ವರ್ಷ ಚಾಮುಂಡೇಶ್ವರಿ ತಾಯಿ ಕಾಪಾಡುತ್ತಾ ಬಂದಿದ್ದಾಳೆ, ಈ ವರ್ಷವೂ ಕಾಪಾಡುತ್ತಾಳೆ ವಿಶ್ವಾಸದೊಂದಿಗೆ ವ್ಯಾಪಾರ ಮಾಡುತ್ತಿದ್ದೇವೆ.”

See also  ಮಂಗಳೂರು: ಗ್ರಂಥಾಲಯಗಳ ಪರಿವರ್ತನೆ ಮತ್ತು ಎನ್ಇಪಿ 2020 ಕುರಿತು ರಾಷ್ಟ್ರೀಯ ಕಾರ್ಯಾಗಾರ

-ಲಿಖಿತಾ.ಕೆ.ಬಿ, ಮೈಸೂರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12792
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು