ಮಂಗಳೂರು: ನಿಟ್ಟೆ ವಿಶ್ವವಿದ್ಯಾನಿಲಯದ ಪಾನೀರು ಕ್ಯಾಂಪಸ್ ನಲ್ಲಿ ವೈಜ್ಞಾನಿಕ ತ್ಯಾಜ್ಯ ನಿರ್ವಹಣಾ ಘಟಕವನ್ನು ದ. ಕ. ಜಿಲ್ಲಾಧಿಕಾರಿಡಾ. ರಾಜೇಂದ್ರ ಕೆ. ವಿ. ಉದ್ಘಾಟಿಸಿದರು.
ನೂತನವಾಗಿ ನಿರ್ಮಾಣಗೊಂಡ ಈ ಘಟಕವು ನಿಟ್ಟೆ ವಿ. ವಿ. ಮತ್ತು ಮಂಗಳ ರಿಸೋರ್ಸ್ ಮ್ಯಾನೇಜ್ಮೆಂಟ್ ಪ್ರೈವೇಟ್ ಲಿ. ಮಂಗಳೂರು ಇದರ ಸಹಯೋಗದೊಂದಿಗೆ ಮುನ್ನಡೆಯಲಿದೆ.
ಜಿಲ್ಲಾಧಿಕಾರಿಡಾ. ರಾಜೇಂದ್ರ ಕೆ. ವಿ. ಮಾತನಾಡಿ, ‘ತ್ಯಾಜ್ಯ ನಿರ್ವಹಣೆ ಸಂಕೀರ್ಣ ವಿಚಾರ. ಮೇಲ್ನೋಟಕ್ಕೆ ಲಾಭದಾಯಕವೆಂದು ಕಂಡರೂ ನಿರಂತರ ಪರಿಶ್ರಮವಿದೆ. ನಿಟ್ಟೆ ವಿವಿಯಲ್ಲಿ ಅಳವಡಿಸಿರುವ ವೈಜ್ಞಾನಿಕ ವಿಧಾನ ನಿಜಕ್ಕೂ ಮಾದರಿ ಆಗಲಿದೆ. ಭವಿಷ್ಯದಲ್ಲಿ ಪಾಲಿಕೆ ಕೂಡ ಇಲ್ಲಿನ ವಿಧಾನವನ್ನು ಅಳವಡಿಸುವ ನಿಟ್ಟಿನಲ್ಲಿ ಚಿಂತಿಸಬಹುದು’ ಎಂದರು.
‘ಸ್ವಚ್ಛ ಮಂಗಳೂರು ಸ್ವಯಂ ಸೇವಕರಿಂದ ನಡೆಯುತ್ತಿರುವ ಮಂಗಳ ಸಂಪನ್ಮೂಲ ನಿರ್ವಹಣಾ ಸಂಸ್ಥೆಯ ಯೋಜನೆಗಳು ಬಹಳ ಪರಿಣಾಮಕಾರಿಯಾಗಿದೆ. ಕಡಿಮೆ ವೆಚ್ಚದಲ್ಲಿ ತ್ಯಾಜ್ಯ ನಿರ್ವಹಣೆಯೊಂದಿಗೆ ಉದ್ಯೋಗ ಸೃಷ್ಟಿ ಆಗಲಿದೆ’ ಎಂದು ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ಏಕಗಮ್ಯಾನಂದಜಿ ಹೇಳಿದರು.
ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್. ವಿನಯ್ ಹೆಗ್ಡೆ ಮಾತನಾಡಿ, ‘ನಮ್ಮ ವಿಶ್ವವಿದ್ಯಾನಿಲಯದಲ್ಲಿ ಆರಂಭಿಸಿರುವ ಈ ತ್ಯಾಜ್ಯ ನಿರ್ವಹಣಾ ಘಟಕವು ದೇಶದ ಎಲ್ಲಾ ವಿವಿಗಳಿಗೆ ಮಾದರಿಯಿಯಾಗಲಿದೆ’, ಎಂದು ಹೇಳಿದರು.
ನಿಟ್ಟೆ ವಿವಿಯ ಕುಲಪತಿಡಾ. ಸತೀಶ್‌ಕುಮಾರ್ ಭಂಡಾರಿ, ಕುಲಸಚಿವಡಾ. ಹರ್ಷ ಹಾಲಹಳ್ಳಿ ಉಪಸ್ಥಿತರಿದ್ದರು.
ವಿಧಾನಪರಿಷತ್ತಿನ ಮಾಜಿ ಸದಸ್ಯಕ್ಯಾ. ಗಣೇಶ್‌ಕಾರ್ಣಿಕ್ ಸ್ವಾಗತಿಸಿದರು. ಸ್ಮಿತಾ ಶೆಣೈಕಾರ್ಯಕ್ರಮ ನಿರೂಪಿಸಿದರು. ಮಂಗಳ ರಿಸೋರ್ಸ್ ಮ್ಯಾನೇಜ್ಮೆಂಟ್ ಆಡಳಿತ ನಿರ್ದೇಶಕ ದಿಲ್ ರಾಜ್ ಆಳ್ವ ವಂದಿಸಿದರು.