News Kannada
Sunday, November 27 2022

ಕ್ಯಾಂಪಸ್

ಮಂಗಳೂರು: ಮಿಲಾಗ್ರಿಸ್‌ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಚಟುವಟಿಕೆಗಳ ಉದ್ಘಾಟನೆ - 1 min read

Inauguration of National Service Scheme activities at Milagres College
Photo Credit : By Author

ಮಂಗಳೂರು: ಮಿಲಾಗ್ರಿಸ್‌ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ 2022-23ನೆ ಸಾಲಿನ  ಚಟುವಟಿಕೆಗಳ ಉದ್ಘಾಟನೆ ನವೆಂಬರ್ 10, 2022 ರಂದು  ನೆರವೇರಿತು.

ಕೆನರಾ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕಿ, ಅಲ್ಲಿನ ರಾ.ಸೇ.ಯೋ ಘಟಕದ ಯೋಜನಾಧಿಕಾರಿಗಳಾದ  ಸೀಮಾ ಪ್ರಭು ಎಸ್ ಅವರು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಎನ್ಎಸ್ಎಸ್ ನಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸನವಾಗುವುದರ ಜೊತೆಗೆ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯ ಎಂದು ತಿಳಿಸಿದರು.

ಉಪ ಪ್ರಾಂಶುಪಾಲರಾದ  ಕ್ಯಾಸ್ಟಿನ್ ರೊಡ್ರಿಗಸ್ ಎಲ್ಲರನ್ನುದ್ದೇಶಿಸಿ ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.

ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಕು. ಶ್ರಾವ್ಯ ಎನ್ ಸಹ ಯೋಜನಾಧಿಕಾರಿ ಜೋಬಿನ್ ಜೋಸೆಫ್ ಸೇರಿದಂತೆ ಎಲ್ಲ ಸಿಬ್ಬಂದಿವರ್ಗವು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ವಿದ್ಯಾರ್ಥಿ ಪ್ರತಿನಿಧಿಯಾದ ವಿವಿತ್‌ ಫರ್ನಾಂಡಿಸ್ ಸ್ವಾಗತಿಸಿದರು.ವಿದ್ಯಾರ್ಥಿ ಪ್ರತಿನಿಧಿಯಾದ ಯುತ್ತಾ ನಾಯ್ಕ ವಂದಿಸಿದರು. ಡೆನ್ಸನ್ ಡಿಸಿಲ್ವ ಕಾರ್ಯಕ್ರಮವನ್ನು ನಿರೂಪಿಸಿದರು.

See also  ಉಜಿರೆ: `ಪರಿಸರ ಪೂರಕ ಆವಿಷ್ಕಾರಕ್ಕೆ ಆದ್ಯತೆ’
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

11671
Media Release

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು