ಮಂಗಳೂರು: ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್ಟಿ) ಪ್ರಾಯೋಜಕತ್ವದಲ್ಲಿ ಕೊಲ್ಹಾಪುರದ ಶಿವಾಜಿ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಏಳು ದಿನಗಳ ರಾಷ್ಟ್ರಮಟ್ಟದ ತರಬೇತಿ ಕಾರ್ಯಕ್ರಮ ನಡೆಯುತ್ತಿದ್ದು, ಇದು ನವೆಂಬರ್ 20 ರವರೆಗೆ (ಭಾನುವಾರ) ನಡೆಯಲಿದೆ.
ಇದನ್ನು ಡಿ.ಎಸ್.ಟಿ-ಪಿಯುಆರ್ ಎಸ್ ಇ ಇನ್ಸ್ಟ್ರುಮೆಂಟೇಶನ್ ಸೆಂಟರ್, ಮಂಗಳೂರು ವಿಶ್ವವಿದ್ಯಾನಿಲಯದ ಸಿಎಆರ್ ಟಿ ಎಂ.ಎಚ್.ಆರ್.ಡಿ-ಆರ್ ಯು ಆರ್ ಎಸ್- ಎನ್.ಎಂ.ಆರ್ ಇನ್ಸ್ಟ್ರುಮೆಂಟ್ ಸೆಂಟರ್ ಜಂಟಿಯಾಗಿ ಡಿ.ಎಸ್.ಟಿ-ಎಸ್.ಟಿ.ಯು.ಟಿ.ಐ. ಯೋಜನೆಯಡಿ ಆಯೋಜಿಸುತ್ತಿವೆ. ಕರ್ನಾಟಕ ವಿಶ್ವವಿದ್ಯಾಲಯ (ಧಾರವಾಡ)ದ ಉಪಕುಲಪತಿ ಪ್ರೊ.ಕೆ.ಬಿ.ಗುಡಸಿ ತಮ್ಮ ಉದ್ಘಾಟನಾ ಭಾಷಣದಲ್ಲಿ ಉಪಕರಣಗಳನ್ನು ನಿರ್ವಹಿಸುವ, ಫಲಿತಾಂಶಗಳನ್ನು ಪಡೆಯುವ ಮತ್ತು ಅದರ ವಿಶ್ಲೇಷಣೆಯ ಸರಿಯಾದ ಕಾರ್ಯವಿಧಾನದ ಮಹತ್ವವನ್ನು ಒತ್ತಿ ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಮಾತನಾಡಿ, ಮಂಗಳೂರು ವಿಶ್ವವಿದ್ಯಾನಿಲಯದ ಸಂಶೋಧನಾ ಕೇಂದ್ರಗಳು ಉತ್ತಮ ಸಂಶೋಧನಾ ಫಲಿತಾಂಶಗಳನ್ನು ತರಲು ಅನೇಕ ಅಂತಾರಾಷ್ಟ್ರೀಯ ಸಂಶೋಧನಾ ಕೇಂದ್ರಗಳೊಂದಿಗೆ ಸಹಯೋಗದ ಸಂಶೋಧನೆಗಳನ್ನು ಸ್ಥಾಪಿಸುವಲ್ಲಿ ನಿರತವಾಗಿವೆ ಎಂದು ಅಭಿಪ್ರಾಯಪಟ್ಟರು. ಶಿವಾಜಿ ವಿಶ್ವವಿದ್ಯಾಲಯದ ಪ್ರೊ.ರಾಜೇಂದ್ರ ಜಿ.ಸೋಂಕಾವಡೆ ಸಂಪನ್ಮೂಲ ವ್ಯಕ್ತಿಯಾಗಿದ್ದರು.
ಡಿ.ಎಸ್.ಟಿ.-ಪಿಯುಆರ್ ಎಸ್ ಇ ಇನ್ಸ್ಟ್ರುಮೆಂಟೇಶನ್ ಸೆಂಟರ್ ಸಂಯೋಜಕಿ ಪ್ರೊ.ಬಿ.ವಿಶಾಲಾಕ್ಷಿ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿ, ಡಿಎಸ್ಟಿ-ಎಸ್.ಟಿ.ಯು.ಟಿ.ಐ ಯೋಜನೆಯ ವೈಶಿಷ್ಟ್ಯಗಳನ್ನು ವಿವರಿಸಿದರು. ಉಪಸಂಯೋಜನಾಧಿಕಾರಿ ಪ್ರೊ.ಬೋಜ ಪೂಜಾರಿ ವಂದಿಸಿದರು.
ಕಾರ್ಯಕ್ರಮದಲ್ಲಿ ಸಿಎಆರ್ ಆರ್ ಟಿ ಸಂಯೋಜಕ ಪ್ರೊ.ಕರುಣಾಕರ ಎನ್., ಲವಿನಾ ಗ್ಲಾಡಿಸ್ ಸೆರಾವೊ ಗೋಷ್ಠಿಯನ್ನು ಸಂಯೋಜಿಸಿದರು. ಈ ವಾರದ ಕಾರ್ಯಕ್ರಮದಲ್ಲಿ, ದೇಶಾದ್ಯಂತದ 40 ಸಂಶೋಧಕರು ಸಂಶೋಧನೆಯಲ್ಲಿ ಅತ್ಯಾಧುನಿಕ ಉಪಕರಣಗಳ ಬಳಕೆಯ ಬಗ್ಗೆ ತರಬೇತಿ ಪಡೆಯಲಿದ್ದಾರೆ.