News Kannada
Friday, February 03 2023

ಕ್ಯಾಂಪಸ್

ಉಜಿರೆ: ರಾಜ್ಯ ಮಟ್ಟದ ವೇಟ್‌ ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ಆಳ್ವಾಸ್‌ ಚಾಂಪಿಯನ್‌

Ujire: State-level weightlifting competition, Alva's champion
Photo Credit : News Kannada

ಉಜಿರೆ: ಶ್ರೀ ಧ.ಮಂ. ಕಾಲೇಜು ಮತ್ತು ಕರ್ನಾಟಕ ರಾಜ್ಯ ವೇಟ್‌ ಲಿಫ್ಟಿರ್ಸ ಅಸೋಸಿಯೇಶನ್‌ ವತಿಯಿಂದ ಮೂರು ದಿನಗಳ ಕಾಲ ನಡೆದ ಕರ್ನಾಟಕ ರಾಜ್ಯ ವೇಟ್‌ ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ ೨೦೨೨ರಲ್ಲಿ ಮೂಡುಬಿದ್ರೆಯ ಆಳ್ವಾಸ್‌ ಕಾಲೇಜ್‌ ಎಲ್ಲಾ
ವಿಭಾಗದಲ್ಲಿ ಅತೀ ಹೆಚ್ಚು ಪ್ರಶಸ್ತಿಯನ್ನು ಪಡೆದುಕೊಂಡು ಸಮಗ್ರ ಪ್ರಶಸ್ತಿ ತನ್ನದಾಗಿಸಿಕೊಂಡಿತು.

ಉಜಿರೆಯ ಶ್ರೀ.ಧ.ಮಂ. ಕಾಲೇಜು ಎರಡನೇ ಸ್ಥಾನ ಪಡೆದುಕೊಂಡಿತು. ನ. ೨೭ರಿಂದ ನ.೨೯ರ ವರೆಗೆ ನಡೆದ ಈ ಸ್ಪರ್ಧೆಯಲ್ಲಿ ಒಟ್ಟು ೩೪೦ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಸ್.‌ ಡಿ. ಎಂ . ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಪಿ. ಎನ್‌. ಉದಯಚಂದ್ರ ವಿಜೇತರಿಗೆ ಪದಕ ಹಸ್ತಾಂತರಿಸಿದರು. ಈ ಸಂದರ್ಭಲ್ಲಿ ಕಾಲೇಜಿನ ಆಡಳಿತ ಮಂಡಳಿ ಮುಖ್ಯಸ್ಥರು, ತರಬೇತುದಾರರು, ಸ್ಪರ್ಧಾಳುಗಳು ಹಾಜರಿದ್ದರು.

೧೦ ವಿವಿಧ ವಿಭಾಗದಲ್ಲಿ ಸೀನಿಯರ್‌, ಜ್ಯೂನಿಯರ್‌ ಹಾಗೂ ಮಹಿಳಾ ಮತ್ತು ಪುರುಷ ವಿಭಾಗದಲ್ಲಿ ೪೫,೪೯,೫೫,೫೯,೬೪,೭೧,೭೬,೮೧,೮೭,೮೭ಕ್ಕಿಂತ ಅಧಿಕ, ವಿಭಾಗದಲ್ಲಿ ಮಹಿಳಾ ಸ್ಪರ್ಧಾರ್ಥಿಗಳು ಹಾಗೂ ಇವುಗಳನ್ನೋಳಗೊಂಡಂತೆ ೮೯, ೯೬,೧೦೨, ೧೦೨ಕ್ಕಿಂತ ಅಧಿಕ ಕೆಜಿ ವಿಭಾಗದಲ್ಲಿ ಪುರುಷರಿಗೆ ಸ್ಪರ್ದೆಗಳನ್ನು ನಡೆಸಲಾಗಿತ್ತು. ಜೂನಿಯರ್‌ ವುಮೆನ್‌ ವಿಭಾಗದಲ್ಲಿ ಮೂಡುಬಿದ್ರೆ ಆಳ್ವಾಸ್‌ ಕಾಲೇಜಿಗೆ ೭ ಪ್ರಶಸ್ತಿಗಳು ಎಸ್‌.ಡಿ.ಎಂ. ಸ್ಪೋರ್ಟ್ಸ ಕ್ಲಬ್‌ ಗೆ ೬ ಪ್ರಶಸ್ತಿಗಳು ಡೈಸ್‌ ಬೆಂಗಳೂರಿಗೆ ೫ ಪ್ರಶಸ್ತಿ, ಡೈಸ್‌ ಬೆಳಗಾವಿಗೆ ೩ ಪ್ರಶಸ್ತಿ, ಡಿ.ಸಿ.ಸಿ. ಮಂಗಳೂರಿಗೆ ೩ ಪ್ರಶಸ್ತಿ ಸೆಂಟ್‌ ಫಿಲೋಮಿನಾಗೆ ೨ ಪ್ರಶಸ್ತಿ ಶ್ರೀಸಾಯಿ ಜಿಮ್‌ ದಾವಣಗೆರೆ ೧ ಪ್ರಶಸ್ತಿ ಲಭಿಸಿದೆ.

ಸೀನಿಯರ್‌ ವುಮೆನ್‌ ವಿಭಾಗದಲ್ಲಿ ಆಳ್ವಾಸ್‌ ಕಾಲೇಜಿಗೆ ೯ ಪ್ರಶಸ್ತಿಗಳು ಎಸ್‌.ಡಿ.ಎಂ. ಸ್ಪೋರ್ಟ್ಸ ಕ್ಲಬ್‌ ಗೆ ೯ ಪ್ರಶಸ್ತಿಗಳು, ಡಿ.ಸಿ.ಸಿ. ಮಂಗಳೂರಿಗೆ ೩ ಪ್ರಶಸ್ತಿ, ಸಂಜೀವಿನಿ ಶೆಟ್ಟಿ ಸ್ಪೋರ್ಟ್ಸ ಕ್ಲಬ್ ಗೆ ೨, ಡೈಸ್‌ ಬೆಂಗಳೂರು, ಡೈಸ್‌ ಬೆಳಗಾವಿಗೆ, ಪ್ರಶಸ್ತಿ, ಸೆಂಟ್‌ ಫಿಲೋಮಿನಾ,ಶ್ರೀ ಸಾಯಿ ಬೆಂಗಳೂರು ಹಾಗೂ ಮಂಗಳಾ ತ್ರೋವರ್ಸ ಅಕಾಡೆಮಿಗೆ ತಲಾ ೧ ಪ್ರಶಸ್ತಿ ಲಭಿಸಿದೆ.

ಯುಥ್‌ ವುಮೆನ್ ವಿಭಾಗದಲ್ಲಿ ಆಳ್ವಾಸ್‌ ಕಾಲೇಜಿಗೆ‌ ೭, ಡಿ.ಸಿ.ಸಿ. ಮಂಗಳೂರಿಗೆ ೫, ಮಂಗಳಾ ತ್ರೋವರ್ಸ ಅಕಾಡೆಮಿ ೩, ಸೆಂಟ್‌ ಫಿಲೋಮಿನಾ ಪುತ್ತೂರು, ಸುಧೀರ್‌ ಫಿಟ್ನೆಸ್‌ ಕ್ಲಬ್,ಆಳ್ವಾಸ್‌ ಏಕಲವ್ಯ ಸ್ಪೋರ್ಟ್ಸ ಕ್ಲಬ್‌ , ಎಸ್‌ ಡಿಎಂ ಕಾಲೇಜು ೨ ಪ್ರಶಸ್ತಿಯನ್ನು, ಡಿ.ವೈ.ಇ.ಎಸ್‌ ಬೆಂಗಳೂರು ಹಾಗೂ ಬೆಳಗಾವಿ,ಐರನ್‌ ಡೆನ್ ಮಂಗಳೂರು ಕಾಲೇಜುಗಳು ತಲಾ ೧ ಪ್ರಶಸ್ತಿ ಪಡೆದಿವೆ.

ಯುಥ್‌ ಮೆನ್‌ ವಿಭಾಗದಲ್ಲಿ ಎಸ್‌.ಡಿ.ಎಂ. ಸ್ಪೋರ್ಟ್ಸ ಕ್ಲಬ್‌ ಗೆ ೯, ಆಳ್ವಾಸ್‌ ಕಾಲೇಜಿಗೆ‌ ೪, ಸಂಜೀವಿನಿ ಶೇಟ್ಟಿ ಸ್ಪೋರ್ಟ್ಸ ಕ್ಲಬ್ ಗೆ ೩, ಸುಧೀರ್‌ ಫಿಟ್ನೆಸ್‌ ಕ್ಲಬ್, ಮಂಗಳಾ ತ್ರೋವರ್ಸ ಅಕಾಡೆಮಿ, ಜೈನ್‌ ಜೂನಿಯರ್‌ ಕಾಲೇಜು ಮೂಡುಬಿದ್ರೆ ತಲಾ ೨, ಎಸ್. ಐ. ಸಿ.ಎಂ ಬೆಂಗಳೂರು, ಶ್ರೀ ಸಾಯಿ ಜಿಮ್‌ ದಾವಣಗೆರೆ,ಡೈಸ್‌ ಬೆಳಗಾವಿ, ಸೆಂಟ್‌ ಫಿಲೋಮಿನಾ ಪುತ್ತೂರು ಕಾಲೇಜು, ಐರನ್‌ ಡೆನ್ ಮಂಗಳೂರು,ಡಿ.ಸಿ.ಸಿ. ಮಂಗಳೂರು ಹಾಗು ಕೆ.ವಿ.ಜಿ. ಸುಳ್ಯ ತಲಾ ೧ ಪ್ತಶಸ್ತಿ ಪಡೆದುಕೊಂಡಿವೆ.

See also  ‘Analyst-2022’: ರಾಷ್ಟ್ರೀಯ ಮಟ್ಟದ ಅಂತರ್ ಕಾಲೇಜು ಉತ್ಸವ

ಸೀನಿಯರ್‌ ಮೆನ್‌ ವಿಭಾಗದಲ್ಲಿ ಆಳ್ವಾಸ್‌ ಕಾಲೇಜಿಗೆ‌ ೧೦, ಎಸ್‌.ಡಿ.ಎಂ. ಸ್ಪೋರ್ಟ್ಸ ಕ್ಲಬ್‌ ಗೆ ೭,ಆಳ್ವಾಸ್‌ ಏಕಲವ್ಯ ಸ್ಪೋರ್ಟ್ಸ ಕ್ಲಬ್‌ ಗೆ ೫, ಸಿ.ಎಂ.ಸಿ ದಾವಣಗೆರೆ ಜಿಮ್‌ ೩, ಎಸ್‌.ಐ.ಸಿ.ಎಂ ಬೆಂಗಳೂರು, ಸುಧೀರ್‌ ಫಿಟ್ನೆಸ್‌ ಕ್ಲಬ್, ಸಂಜೀವಿನಿ ಶೆಟ್ಟಿ ಸ್ಪೋರ್ಟ್ಸ ಕ್ಲಬ್, ಡೈಸ್‌ ಬೆಂಗಳೂರು,ಸೆಂಟ್‌ ಫಿಲೋಮಿನಾ ಪುತ್ತೂರು ೧ ಪ್ರಶಸ್ತಿ ಪಡೆದಿದ್ದಾರೆ.

ಎಲ್ಲಾ ವಿಭಾಗದಲ್ಲಿ ಉತ್ಯುತ್ತಮ ಸಾಧನೆ ಮಾಡಿದ ಕೆಲವರನ್ನು ಗುರುತಿಸಲಾಗಿದ್ದು, ೪೫ ಕೆಜಿ ವಿಭಾಗದಲ್ಲಿ ಮೂಡಬಿದ್ರೆ ಆಳ್ವಾಸ್‌ ಕಾಲೇಜಿನ ಶ್ರಾವ್ಯಾ, ೪೯ ಕೆಜಿ ವಿಭಾಗದಲ್ಲಿ ಎಸ್‌.ಡಿ.ಎಂ. ಸ್ಪೋರ್ಟ್ಸ ಕ್ಲಬ್‌ನ ಜೀವಿತಾ, ೪೫ ಕೆಜಿ ವಿಭಾಗದಲ್ಲಿ ಎಸ್‌.ಡಿ.ಎಂ. ಸ್ಪೋರ್ಟ್ಸ ಕ್ಲಬ್ ನ ತುಷ್ಮಿತಾ, ೭೩ ಕೆಜಿ ವಿಭಾಗದಲ್ಲಿ ಸುಧೀರ್‌ ಫಿಟ್‌ನೆಸ್‌ ನ ಸಂಕೇತ್‌ ಎಸ್‌., ೬೭ ಕೆಜಿ ವಿಭಾಗದಲ್ಲಿ ಎಸ್‌.ಡಿ.ಎಂ. ಸ್ಪೋರ್ಟ್ಸ ಕ್ಲಬ್ ನ ತಿಪ್ಪಣ್ಣ ಎಸ್‌. ಎಲ್‌. , ೬೭ ಕೆಜಿ ವಿಭಾಗದಲ್ಲಿ ಆಳ್ವಾಸ್‌ ಏಕಲವ್ಯದ ದೇವರಾಜ್‌ ಕೆ.ಟಿ.
ಸಾಧಕರುಗಳಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು