ತುಮಕೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ೨೦೧೮-೧೯, ೨೦೧೯-೨೦, ೨೦೨೦-೨೧ ಮತ್ತು ೨೦೨೧-೨೨ ಜುಲೈ ಆವೃತ್ತಿ ಸಾಲಿನಲ್ಲಿ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಸಕ್ತ ೨೦೨೨-೨೩ನೇ (ಜುಲೈ ಆವೃತ್ತಿ) ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ವರ್ಷದ ಬಿ.ಎ/ಬಿ.ಕಾಂ/ಬಿ.ಬಿ.ಎ/ಬಿ.ಸಿ.ಎ/ಬಿ.ಎಸ್ಸಿ ಹಾಗೂ ತೃತೀಯ ವರ್ಷದ ಬಿ.ಎ/ಬಿ.ಕಾಂ ಮತ್ತು ಅಂತಿಮ ವರ್ಷದ ಎಂ.ಎ/ಎಂ.ಸಿ.ಜೆ/ಎಂ.ಕಾಂ/ಎಂ.ಎಸ್ಸಿ/ಎಂ.ಬಿ.ಎ ಪದವಿಗಳ ನವೀಕರಣಕ್ಕಾಗಿ ಬೋಧನಾ ಶುಲ್ಕ ಪಾವತಿಸಲು ಅಧಿಸೂಚನೆ ಹೊರಡಿಸಲಾಗಿದೆ.
ಈ ಮೇಲ್ಕಂಡ ಕೋರ್ಸ್ಗಳ ಶುಲ್ಕ ಪಾವತಿಸಲು ೨೦೦ರೂ ದಂಡ ಶುಲ್ಕದೊಂದಿಗೆ ೧೫/೧೨/೨೦೨೨ ಹಾಗೂ ೪೦೦ರೂ ದಂಡ ಶುಲ್ಕದೊಂದಿಗೆ ೨೬/೧೨/೨೦೨೨ ಕಡೆಯ ಕಡೆಯ ದಿನಾಂಕವಾಗಿರುತ್ತದೆ. ವಿದ್ಯಾರ್ಥಿಗಳು ಕರಾಮುವಿಯ ಅಧಿಕೃತ ವೆಬ್ಸೈಟ್ www.ksoumysuru.ac.in or http://ksouportal. com/ views /StudentHome.aspx ಮೂಲಕ ಈ ಮೇಲ್ಕಂಡ ಪದವಿಗಳಿಗೆ ಅನ್ಲೈನ್ನಲ್ಲಿ ಅರ್ಜಿ ಭರ್ತಿ ಮಾಡಿ ನಂತರ ಶುಲ್ಕ ಪಾವತಿಸಿ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಂಡ ತಾವು ಮೊದಲ ಪ್ರವೇಶಾತಿ ಪಡೆದಿದ್ದ ಕೇಂದ್ರ ಕಛೇರಿ ಅಥವಾ ಪ್ರಾದೇಶಿಕ ಕೇಂದ್ರಕ್ಕೆ ನಿಗದಿ ಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಸಿದ್ದಪಾಠಗಳನ್ನು ಪಡೆಯಬಹುದು ಎಂದು ಪ್ರಾದೇಶಿಕ ನಿರ್ದೇಶಕರಾದ ಡಾ. ಲೋಕೇಶ. ಆರ್ ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ವಿವರಗಳಿಗಾಗಿ ಪ್ರಾದೇಶಿಕ ನಿರ್ದೇಶಕರು, ಕರಾಮುವಿ ತುಮಕೂರು ಪ್ರಾದೇಶಿಕ ಕೇಂದ್ರ, ಟೂಡಾ ಲೇಔಟ್, ರಾಜೀವ್ಗಾಂಧಿ ನಗರ, ಮೆಳೆಕೋಟೆ, ಗಂಗಸಂದ್ರ ಮುಖ್ಯ ರಸ್ತೆ,ತುಮಕೂರು- 572105 ದೂರವಾಣಿ ಸಂಖ್ಯೆ- 0816-2955580, 9844506629, 9886112434,
7349474339 ಅನ್ನು ಸಂಪರ್ಕಿಸಬಹುದಾಗಿದೆ.