News Kannada
Saturday, January 28 2023

ಕ್ಯಾಂಪಸ್

ಉಜಿರೆ: ಆತ್ಮಶೋಧನೆ ನಿರಂತರವಾಗಿರಬೇಕು- ಡಾ.ಔದ್ರಾಮ

Ujire: Introspection should be continuous: Dr. Audram
Photo Credit : News Kannada

ಉಜಿರೆ: ವಿದ್ಯಾರ್ಥಿಗಳು ಭವಿಷ್ಯದಲ್ಲಿ ಏನಾಗಬೇಕು ಎಂಬುದರಕುರಿತು ನಿತ್ಯವೂ ಆತ್ಮಶೋಧನೆ ಮಾಡಿಕೊಳ್ಳಬೇಕು, ಬೇರೆಯವರಜೀವನದ ಆಗುಹೋಗಳ ಬದಲಾಗಿ ನಮ್ಮ ಜೀವನವನ್ನು ವಿಮರ್ಶಿಸಿಕೊಳ್ಳಬೇಕೆಂದು ಧಾರವಾಡ ನೀರಾವರಿ ನಿಗಮದ ಮುಖ್ಯ ಆಡಳಿತಾಧಿಕಾರಿಯಾದ ಡಾ.ಔದ್ರಾಮ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಉಜಿರೆ ಶ್ರೀ.ಧ. ಮಂ.ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದನಡೆಯುವ‘ಎಸ್.ಡಿ.ಎಂ. ನೆನಪಿನಂಗಳ’ – ಹಿರಿಯ ವಿದ್ಯಾರ್ಥಿಗಳ ಸಂವಾದ ಸರಣಿಯಎರಡನೆಯಕಾರ್ಯಕ್ರಮದಲ್ಲಿಅವರು ಮಾತನಾಡಿದರು.

ಉತ್ತಮ ಪರಿಸರ, ಒಳ್ಳೆಯ ಸೌಲಭ್ಯ, ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವಈ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದವರೇ ಭಾಗ್ಯವಂತರು ಎಂದು ನೆನೆದರು.ಜೀವನದಲ್ಲಿ ಸರಸ್ವತಿಯನ್ನು ನಂಬಿ ಹೆಜ್ಜೆ ಹಾಕಬೇಕು, ಗುರಿ ಸಾಧನೆಯೆಡೆಗೆಇಡುವ ಪ್ರತಿ ಹೆಜ್ಜೆಯಲ್ಲಿಯೂ ಪ್ರಾಮಾಣಿಕ ಪ್ರಯತ್ನ ನಮ್ಮದಾಗಬೇಕುಎಂದರು. ವಿದ್ಯಾರ್ಥಿಜೀವನದುದ್ದಕ್ಕೂ ಮಾರ್ಗದರ್ಶಕರಂತೆ ನಮ್ಮತಂದೆತಾಯರಿರತ್ತಾರೆ, ಅವರಿಂದ ಪ್ರತಿ ಹಂತದಲ್ಲಿಯೂ ಕಲಿಯುವ ಮನೋಭಾವ ನಮ್ಮದಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಜೀವನದಲ್ಲಿಅಸಾಧ್ಯಎನ್ನುವುದುಯಾವುದೂಇಲ್ಲ, ಸಮಯದ ನಿರ್ವಹಣೆಯನ್ನುಕಲಿಯುವುದು ಬಹಳ ಮುಖ್ಯಎಂದರು. ವಿದ್ಯಾರ್ಥಿಯಾಗಿದ್ದಾಗಎಂಜಾಯ್‌ಎನ್ನುವ ಪದವನ್ನು ಕೇವಲ ಖುಷಿ, ಸಂತೋಷಕ್ಕೆ ಮೀಸಲಿಡಬೇಕೆ ಹೊರತು ಸುಖದ ಜೀವನಕ್ಕಲ್ಲಎಂದರು. ಸ್ಪರ್ಧಾತ್ಮಕ ಪರೀಕ್ಷೆ ಪರೀಕ್ಷೆಯಕುರಿತಾದ ಮಾಹಿತಿಗಳನ್ನೂ ಹಂಚಿಕೊಂಡು, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಹಾಗೂ ವಕೀಲರಾದ ವಿ.ಕೆ ಧನಂಜಯ್‌ರಾವ್‌ಮಾತನಾಡಿ, ಸಂಘದ ವತಿಯಿಂದ ನೀಡುವ ವಿದ್ಯಾರ್ಥಿ ಪ್ರೋತ್ಸಾಹ ನಿಧಿಯಕುರಿತು ಮಾಹಿತಿ ಹಂಚಿಕೊಂಡರು.ಭವಿಷ್ಯದಲ್ಲಿನೀವು ಈ ಕೆಲಸದ ಭಾಗವಾಗಬೇಕುಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ಈ ಬಾರಿ ವಿದ್ಯಾರ್ಥಿ ಪ್ರೋತ್ಸಾಹ ನಿಧಿಯನ್ನುಡಾ.ಔದ್ರಾಮದ್ವೀತಿಯ ಬಿ.ಎ ವಿದ್ಯಾರ್ಥಿ ಖಾಸೀಂಗೆ ಹಸ್ತಾಂತರಿಸಿದರು. ಉಜಿರೆ ಉದ್ಯಮಿ ಮತ್ತು ಅತಿಥಿಗಳ ಸಹೋದರರೂಆದಅಬೂಬಕ್ಕರ್‌ಡಾ.ಔದ್ರಾಮರನ್ನು ಪರಿಚಯಿಸಿದರು. ಕಾರ್ಯಕ್ರಮವನ್ನು ಡಾ.ಶ್ರೀಧರ್ ಭಟ್ ನಿರೂಪಿಸಿ, ಹಳೆವಿದ್ಯಾರ್ಥಿ ಸಂಘದಉಪಾಧ್ಯಕ್ಷಗುರುನಾಥ್ ಪ್ರಭು ಸ್ವಾಗತಿಸಿದರು.ಎಸ್.ಡಿ.ಎಂ.ಕಾಲೇಜಿನ ಪ್ರಾಂಶುಪಾಲ ಡಾ.ಎಜಯಕುಮಾರ್ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಸಂಯೋಜಕ ಶೈಲೇಶ್ ಮತ್ತಿತರರು ಹಾಜರಿದ್ದರು.

See also  ಬೆಳ್ತಂಗಡಿ: ಉಜಿರೆ ವ್ಯಾಪ್ತಿ ಸಹಕಾರಿ ಸಂಘಗಳ‌ ಕೊಡುಗೆಯಿಂದ ಅಭಿವೃದ್ಧಿ ಹೊಂದುತ್ತಿದೆ- ಶಾಸಕ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12790
NewsKannada

Read More Articles
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು