News Kannada
Thursday, March 23 2023

ಮೈಸೂರು

ಎಸ್ ಡಿ ಎಂಐ ಎಂ ಡಿ ವಿದ್ಯಾಸಂಸ್ಥೆಗೆ ಪೋರ್ಚುಗಲ್ ವಿದ್ಯಾರ್ಥಿಗಳ ಭೇಟಿ

Student Exchange Program – Porto Business School from Portugal at SDMIMD
Photo Credit : News Kannada

ಮೈಸೂರು, ಮಾ.7: ಮಾರ್ಚ್ 2023 ರಲ್ಲಿ ಪೋರ್ಚುಗಲ್ ನಿಂದ ಆಗಮಿಸಿರುವ ಪೋರ್ಟೊ ಬಿಸಿನೆಸ್ ಶಾಲೆಯ ಹನ್ನೊಂದು ವಿದ್ಯಾರ್ಥಿಗಳಿಗೆ ಮತ್ತು ಇಬ್ಬರು ಪ್ರಾಧ್ಯಾಪಕರುಗಳಿಗೆ ಮೈಸೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್ಸ್ಟಿಟ್ಯೂಟ್ ಫಾರ್ ಮ್ಯಾನೇಜ್ಮೆಂಟ್ ಡೆವಲಪ್ಮೆಂಟ್ ಸಂಸ್ಥೆಯು ಆತಿಥೇಯವಾಗಿದೆ. ಎಸ್ ಡಿ ಎಮ್ ಐ ಎಮ್ ಡಿ ಸಂಸ್ಥೆಯು ಪೋರ್ಟೊ ಶಾಲೆಯೊಂದಿಗೆ ಹೊಂದಿರುವ ವಿದ್ಯಾರ್ಥಿ ವಿನಿಮಯ ಒಪ್ಪಂದದ ಅಡಿಯಲ್ಲಿ ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಪೋರ್ಟೊ ವಿಶ್ಯವಿದ್ಯಾನಿಲಯದ ಡಾ. ಪೆಡ್ರೊ ವಿಯೆರಾ ಅವರ ನೇತೃತ್ವದಲ್ಲಿ ಒಂದು ವಾರದ ಈ ಕಾರ್ಯಕ್ರಮಕ್ಕೆ ಆಗಮಿಸಿರುವ ವಿದ್ಯಾರ್ಥಿಗಳು ಅನೇಕ ಶೈಕ್ಷಣಿಕ ಅವಧಿಗಳು, ಕಾರ್ಪೊರೇಟ್ ಗಳಿಗೆ ಭೇಟಿ, ಸಾಮಾಜಿಕ ಯೋಜನೆಗಳು ಸೇರಿದಂತೆ ಯೋಗಾಭ್ಯಾಸದ ಅವಧಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಖ್ಯಾತ 17 ಅಂತರರಾಷ್ಟ್ರೀಯ ಸಂಸ್ಥೆಗಳು / ವಿಶ್ವವಿದ್ಯಾನಿಲಯಗಳೊಂದಿಗೆ ಎಸ್ ಡಿ ಎಮ್ ಐ ಎಮ್ ಡಿ ಸಂಸ್ಥೆಯು ವಿನಿಮಯವನ್ನು ಹೊಂದಿರುವ ವಿಷಯವನ್ನು ಇಲ್ಲಿ ಸ್ಮರಿಸಬಹುದು. ಇದರ ಭಾಗವಾಗಿ ಈ ವರ್ಷ ಎಸ್ ಡಿ ಎಮ್ ಐ ಎಮ್ ಡಿ ಸಂಸ್ಥೆಯ 31 ವಿದ್ಯಾರ್ಥಿಗಳು ಒಂದು ತ್ರೈಮಾಸಿಕ ವಿದ್ಯಾಭ್ಯಾಸವನ್ನು ಬೇರೆ ಬೇರೆ ಕಡೆ ಮಾಡುತ್ತಿದ್ದಾರೆ.

ಈ ವಿನಿಮಯದ ಅಡಿಯಲ್ಲಿ ಎಸ್ ಡಿ ಎಮ್ ಐ ಎಮ್ ಡಿ ಸಂಸ್ಥೆಗೆ ಇ ಎ ಇ ಬಿಸಿನೆಸ್ ಶಾಲೆ, ಸ್ಪೇನ್ ವಿದ್ಯಾರ್ಥಿಗಳು ಜುಲೈ 18-29, 2022 ರ ನಡುವೆ, ಹೀಲ್ಬ್ರಾನ್ ವಿಶ್ಯವಿದ್ಯಾನಿಲಯ, ಜರ್ಮನಿಯ ವಿದ್ಯಾರ್ಥಿಗಳು ಫೆಬ್ರವರಿ 20-28, 2023 ರ ನಡುವೆ ಸಂಸ್ಥೆಗೆ ಆಗಮಿಸಿದ್ದರು. ಇದರ ಜೊತೆಗೆ ಬಿಸಿನೆಸ್ ಅನಾಲಿಟಿಕ್ಸ್ ಇನ್ಸ್ಟಿಟ್ಯೂಟ್, ಫ್ರಾನ್ಸ್ ನವರು ಹತ್ತು ದಿನಗಳ ಚಳಿಗಾಲದ ಶಾಲೆಯನ್ನು ಫೆಬ್ರವರಿ 1-10, 2023 ರ ನಡುವೆ ಎಸ್ ಡಿ ಎಮ್ ಐ ಎಮ್ ಡಿ ಸಂಸ್ಥೆಯಲ್ಲಿ ಆಯೋಜಿಸಿದ್ದರು.

ಚಟುವಟಿಕೆಯಿಂದ ಕೂಡಿದ ಅಂತರರಾಷ್ಟ್ರೀಯ ವಿನಿಮಯ ಕಾರ್ಯಕ್ರಮವನ್ನು ಹೊಂದಿರುವ ದೇಶದ ಕೆಲವು ಮ್ಯಾನೇಜ್ಮೆಂಟ್ ಸಂಸ್ಥೆಗಳ ಪೈಕಿ ಎಸ್ ಡಿ ಎಮ್ ಐ ಎಮ್ ಡಿ ಸಂಸ್ಥೆಯೂ ಒಂದು.

See also  ಮೈಸೂರಿನಲ್ಲಿ ಶಕ್ತಿ ಪ್ರದರ್ಶಿಸಿದ ಸಿದ್ದು-ಡಿಕೆಶಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು