ಧಾರವಾಡ : ವಿದ್ಯಾಕಾಶಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಮತ್ತೊಂದು ಗರಿ ಮುಡಿಗೇರಿದೆ. ರಾಜ್ಯದ 19 ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಕಾಶಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಪ್ರಥಮ ಸ್ಥಾನದಲ್ಲಿದ್ದು, ವಿಶ್ವ ಬ್ಯಾಂಕಿಂಗ್‌ನಲ್ಲಿ 1,000 ದಿಂದ 1,200 ನೇ ಹಂತದ ಬ್ಯಾಂಕಿಂಗ್ ಪಡೆದಿರುವುದು ಹೆಮ್ಮೆಯ ವಿಷಯ ಎಂದು ಕುಲಪತಿ ಪ್ರೊ.ಕೆ.ಬಿ.ಗುಡಸಿ ಸಂತಸ ವ್ಯಕ್ತಪಡಿಸಿದ್ದಾರೆ.
ಲಂಡನ್ ಮೂಲದ ದಿ ಟೈಮ್ಸ್ ಹೈಯರ್ ಎಜ್ಯುಕೇಶನ್ ಮ್ಯಾಗಝಿನ್ (ಟಿಎಚ್) ಪ್ರಸಕ್ತ ಸಾಲಿನ ವಿಶ್ವದ ಉನ್ನತ (ಟಾಪ್) ವಿಶ್ವವಿದ್ಯಾಲಯಗಳ ಪಟ್ಟಿ ಬಿಡುಗಡೆ ಮಾಡಿದೆ. ವಿಶ್ವದ 108 ರಾಷ್ಟ್ರಗಳ ವಿಶ್ವವಿದ್ಯಾಲಯಗಳಿಗೆ ಬ್ಯಾಂಕಿಂಗ್ ನೀಡಲಾಗಿದೆ.
ಬೋಧನೆ, ಸಂಶೋಧನಾ ಪರಿಸರ, ಸಂಶೋಧನಾ ಗುಣಮಟ್ಟ, ಕೈಗಾರಿಕೆ ಮತ್ತು ಅಂತರರಾಷ್ಟ್ರೀಯ ದೃಷ್ಟಿಕೋನ ವಿಷಯ ಸೇರಿದಂತೆ 18 ಸೂಚ್ಯಂಕಗಳನ್ನು ಒಳಗೊಂಡ ಜಾಗತಿಕ ವಿಶ್ವವಿದ್ಯಾಲಯಗಳ 3.0 ಸಂಶೋಧನಾ ಪದ್ಧತಿಯಲ್ಲಿ ವಿಶ್ವದ 2,673ಕ್ಕಿಂತ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಸರ್ವೆ ಮಾಡಲಾಗಿತ್ತು. ಕರ್ನಾಟಕದಲ್ಲಿ 3 ವಿಶ್ವವಿದ್ಯಾಲಯಗಳು ಮಾತ್ರ ಅರ್ಜಿ ಸಲ್ಲಿಕೆಗೆ ಮಾನ್ಯತೆ ಪಡೆದಿದ್ದವು. ಅದರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಮಾನ್ಯತೆ ಸಿಕ್ಕಿರುವುದು ಹೆಮ್ಮೆಯ ವಿಷಯವಾಗಿದೆ.