ಮಂಗಳೂರು: ಮಂಗಳೂರಿನ ಮಿಲಾಗ್ರಿಸ್ ಕಾಲೇಜಿನಲ್ಲಿ ಹಿಂದಿ ವಿಭಾಗ ಹಾಗೂ IQAC ವತಿಯಿಂದ ಸೆಪ್ಟೆಂಬರ್ 20, 2023ರಂದು ‘ ಹಿಂದಿ ದಿವಸ’ ಅನ್ನು ಆಯೋಜಿಸಲಾಯಿತು.
ಮಂಗಳೂರು, ಸಂತ ಅಲೋಶಿಯಸ್ ಕಾಲೇಜಿನ, ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ ಮುಕುಂದ್ ಪ್ರಭು ಅವರು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಹಿಂದಿ ಭಾಷೆಗೆ ಸಂಬಂಧಿಸಿದ ಎಲ್ಲ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಫಾ| ಮೈಕಲ್ ಸಾಂತುಮಾಯೋರ್ ಅಧ್ಯಕ್ಷೀಯ ಭಾಷಣವನ್ನಾಡಿದರು.
ಕಾಲೇಜಿನ ಹಿಂದಿ ಪ್ರಾಧ್ಯಾಪಕಿಯಾದ ಶ್ರಾವ್ಯ ಎನ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾಗಿರುವ ಕು. ಮುಸ್ಕಾನ್ ಗುಪ್ತ ಸ್ವಾಗತಿಸಿದರು. ಆಶೆಲ್ ಡಿ ಸೋಜಾ ಹಿಂದಿ ದಿವಸದ ಬಗ್ಗೆ ಮಾಹಿತಿ ನೀಡಿದರು. ಪಾವಿ ಲಾಮ ವಂದಿಸಿದರು. ಮೊಹಮ್ಮದ್ ಜಸೀಮ್ ಜಲೀಲ್ ಕಾರ್ಯಕ್ರಮವನ್ನು ನಿರೂಪಿಸಿದರು.