News Karnataka Kannada
Saturday, April 20 2024
Cricket
ಕ್ಯಾಂಪಸ್

ಮಂಗಳೂರು: ವಿವಿ ಸಂಧ್ಯಾ ಕಾಲೇಜು- ರಾಜ್ಯಮಟ್ಟದ ಮ್ಯಾನೇಜ್ಮೆಂಟ್ ಹಾಗೂ ಸಾಂಸ್ಕೃತಿಕ ಫೆಸ್ಟ್

University Sandhya College - State-level Management and Cultural Fest
Photo Credit : News Kannada

ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಎಂಬಿಎ (ಐಬಿ) ವಿಭಾಗವು ಅದರ ಹಳೆ ವಿದ್ಯಾರ್ಥಿ ಸಂಘ ‘ಅಂಬಾ’ ದ ಸಹಯೋಗದೊಂದಿಗೆ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ‘ಇಕ್ವಿನಾಕ್ಸ್ 2K23- ಚಕ್ರವ್ಯೂಹ’ಎಂಬ ರಾಜ್ಯ ಮಟ್ಟದ ಮ್ಯಾನೇಜ್ಮೆಂಟ್ ಮತ್ತು ಸಾಂಸ್ಕೃತಿಕ ಹಬ್ಬವನ್ನು ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಮೇ 27ರಂದು ಆಯೋಜಿಸಿದೆ.

ಕಾರ್ಯಕ್ರಮವನ್ನು ಹೇರಂಬ ಕೈಗಾರಿಕೋದ್ಯಮದ ನಿರ್ದೇಶಕ ಸದಾಶಿವ ಶೆಟ್ಟಿ ಕನ್ಯಾನ ಇವರು ಉದ್ಘಾಟಿಸಲಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥ ಡಾ. ಪುಟ್ಟಣ್ಣ. ಕೆ ಮುಖ್ಯ ಅತಿಥಿಯಾಗಿರಲಿದ್ದಾರೆ. ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಡಾ. ಲಕ್ಷ್ಮೀದೇವಿ.ಎಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಎಂಬಿಎ (ಐಬಿ) ವಿಭಾಗದ ಸಂಯೋಜಕ
ಡಾ.ಜಗದೀಶ್.ಬಿ ಉಪಸ್ಥಿತರಿರಲಿದ್ದಾರೆ. ಕಶ್ಯಪ್ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಪ್ರದೀಪ್ ಕುಮಾರ್  ಹಾಗೂ‌ ಆಥರ್ ಸಂಸ್ಥೆಯ ವ್ಯವಸ್ಥಾಪಕ ಕಾರ್ತಿಕ್ ಹೆಗ್ಡೆ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮ್ಯಾನೇಜ್ಮೆಂಟ್ ಫೆಸ್ಟ್ ನಲ್ಲಿ ಉತ್ತಮ ನಿರ್ವಹಣಾ ತಂಡ, ನಿಧಿ ಶೋಧ, ಮಹಿಳಾ ಉದ್ಯಮಶೀಲತೆ ಮೊದಲಾದ ಸ್ಪರ್ಧೆಗಳನ್ನು ಹಾಗೂ ಪದವಿ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಫೆಸ್ಟ್‌ನಲ್ಲಿ ಹತ್ತಕ್ಕೂ ಹೆಚ್ಚು ಕಾಲೇಜುಗಳ ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗಗಳು ಭಾಗವಹಿಸಲಿವೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ರಾಜೇಶ್ ಕುಮಾರ್ – 8762054920

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು