News Kannada
Thursday, September 28 2023
ಕ್ಯಾಂಪಸ್

ಬೆಥನಿ ಎಜುಕೇಶನಲ್ ಸೊಸೈಟಿಯ ಅಮೃತ ಮಹೋತ್ಸವ

Platinum Jubilee Celebration of The Bethany Educational Society ® Mangalore
Photo Credit : News Kannada

ಬೆಥನಿ ಎಜುಕೇಷನಲ್‌ಸೊಸೈಟಿ(ರಿ) BES)ಪರಿವರ್ತನೀಯ ಶಿಕ್ಷಣದಲ್ಲಿ ದಾರಿ ದೀಪವಾಗಿದ್ದು, ತನ್ನ ಮಹತ್ವದ ಮೈಲುಗಲ್ಲೊಂದನ್ನು ತಲುಪಿದೆ. ತನ್ನಅಮೃತ ಮಹೋತ್ಸವದ ಸಮಾರೋಪ ಆಚರಣೆಯನ್ನು೨೦೨೩ರ ಸೆಪ್ಟೆಂಬರ್ ೧೮ ರಂದು ಸೋಮವಾರದಂದು ಆಚರಿಸಿಕೊಳ್ಳಲು ಸಜ್ಜಾಗಿದೆ. ಬೆಥನಿ ಎಜ್ಯುಕೇಷನಲ್ ಸೊಸೈಟಿಯನ್ನು೪ನೇ ಸೆಪ್ಟೆಂಬರ್ ೧೯೪೮ರಂದು ಬೆಥನಿ ಸಂಸ್ಥಾಪಕರಾದ ದೇವರ ಸೇವಕ ರೇಮಂಡ್ ಫ್ರಾನ್ಸಿಸ್ ಕಾಮಿಲಸ್ ಮಸ್ಕರೇನ್ಹಸ್‌ರವರ ಆಶ್ರಯದಡಿ ಮದರ್ ಪೇತ್ರಾ ಅವರನ್ನು ಮೊದಲ ಅಧ್ಯಕ್ಷರನ್ನಾಗಿಸಿ ನೋಂದಾಯಿಸಲಾಯಿತು.

ಸೊಸೈಟಿಗಳ ನೋಂದಣಿಕಾಯಿದೆ, ೧೮೬೦ರ ಅಡಿಯಲ್ಲಿ‘ಬೆಥನಿ ಎಜುಕೇಷನಲ್‌ಸೊಸೈಟಿ(ರಿ) ಮಂಗಳೂರು ಎಂದು ನಾಮಕರಣ ಮಾಡಲಾಯಿತು. ದಾರ್ಶನಿಕ ನಾಯಕ ಮತ್ತು ದೇವರ ಸೇವಕ ರೇಮಂಡ್ ಫ್ರಾನ್ಸಿಸ್‌ ಕ್ಯಾಮಿಲಸ್ ಮಸ್ಕರೇನ್ಹಸ್‌ ಅವರ ಆಶ್ರಯದಲ್ಲಿ, ಅದರ ಮೊದಲ ಅಧ್ಯಕ್ಷರಾದ ಮದರ್‌ ಪೇತ್ರಾ ಬಿಎಸ್‌ಅವರ ಮಾರ್ಗದರ್ಶನ ಹಾಗೂ ಮೊದಲ ಕೌನ್ಸಿಲ್‌ ಆಫ್ ಮ್ಯಾನೇಜ್‌ಮೆಂಟ್‌ನೊಂದಿಗೆ, ಬಿಇಎಸ್ ಶಿಕ್ಷಣ ಸಂಸ್ಥೆಯು ಸಾಮಾಜಿಕ ಪ್ರಗತಿಯನ್ನುರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಸವಾಲಿನ ಸಮಯದಲ್ಲಿ ಮೂಡಿದ ಭರವಸೆಯ ಬೆಳಕು: ೧೯೨೧ರಲ್ಲಿ, ದೇವರ ಸೇವಕರೆಂದು ಗುರುತಿಸಲ್ಪಟ್ಟಿರುವ, ಬೆಥನಿ ಕನ್ಯಾಮಠದ ಮತ್ತು ಬೆಥನಿ ಎಜುಕೇಷನಲ್‌ ಸೊಸೈಟಿಯ ಸ್ಥಾಪಕ ಆರ್.ಎಫ್.ಸಿ.ಮಸ್ಕರೇನ್ಹಸ್‌ ಅವರು ಆ ಕಾಲದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಕಂಡು ಬಂದ ಬಡತನ, ಅನಕ್ಷರತೆ, ಅಜ್ಞಾನ, ಲಿಂಗ ಅಸಮಾನತೆ ಮತ್ತು ಗ್ರಾಮೀಣ ಬಡ ಜನರ ಪರಿಪೂರ್ಣ ವ್ಯಕ್ತಿತ್ವದ ವಿಕಾಸತೆಗೆ ಇರುವ ಅವಕಾಶಗಳ ಕೊರತೆ ಅವರ ಮನಸ್ಸನ್ನು ಬಡಿದೆಬ್ಬಿಸಿತು. ಈ ಸಂದರ್ಭದಲ್ಲಿ ತಮ್ಮ ಬದುಕನ್ನು ಮಾನವೀಯ ಸೇವೆಯ ಮೂಲಕ ದೇವರಿಗೆ ಸಮರ್ಪಿಸಲು ಬದ್ಧರಾದ ನಾಲ್ವರು ಉದಾತ್ತ ಮತ್ತು ದಿಟ್ಟ ಮಹಿಳಾ ಶಿಕ್ಷಕಿಯರಾದ ಭಗಿನಿಮಾರ್ಥಾಬಿಎಸ್, ಭಗಿನಿಕ್ಲೇರಾಬಿಎಸ್, ಭಗಿನಿಲೂರ್ಡ್ಸ್ಬಿಎಸ್‌ ಮತ್ತು ಭಗಿನಿಗರ್ಟ್ರೂಡ್ ಬಿಎಸ್‌ ಅವರು ಸಂಸ್ಥಾಪಕರ ಗುರಿ, ಧ್ಯೇಯ ಮತ್ತು ದೃಷ್ಟಿಕೋನಕ್ಕೆ ಸ್ಪಂದಿಸಿ ಅದನ್ನು ಪರಿಪೂರ್ಣಗೊಳಿಸಲು ಮುಂದಾದರು. ಈ ನಾಲ್ವರು ಶಿಕ್ಷಕಿಯರು ಬೆಥನಿ ಕನ್ಯಾಮಠ ಮತ್ತು ಬೆಥನಿ ಎಜುಕೇಷನಲ್‌ಸೊಸೈಟಿಯ ಸ್ಥಾಪಕ ಸದಸ್ಯರಾದರು. ಸಮಾಜದ ಸಮಗ್ರ ಅಭಿವೃದ್ಧಿಯಾಗಬೇಕಾದರೆ ಹೆಣ್ಣು ಮಕ್ಕಳು ಮತ್ತು ಮಹಿಳೆಯರನ್ನು ಸಬಲೀಕರಣಗೊಳಿಸಬೇಕು. ಅದರಲ್ಲಿ ಮಹಿಳೆಯರ ಪಾತ್ರ ನಿರ್ಣಾಯಕ ಎಂಬ ಸತ್ಯವನ್ನು ಅವರು ಅರ್ಥ ಮಾಡಿಕೊಂಡರು.

ಪರಿವರ್ತನಾತ್ಮಕ ಶಿಕ್ಷಣದ ಗುರಿ: ಬೆಥನಿ ಎಜುಕೇಷನಲ್‌ ಸೊಸೈಟಿಯ ಮೂಲ ಉದ್ದೇಶವು ಪರಿವರ್ತನಾತ್ಮಕ  ಶಿಕ್ಷಣವನ್ನು ನೀಡುವುದಾಗಿದೆ. “ಎಲ್ಲರಿಗೂ; ಅದರಲ್ಲೂ ವಿಶೇಷವಾಗಿ ಹಿಂದುಳಿದವರು ಮತ್ತು ಹೆಣ್ಣು ಮಕ್ಕಳಿಗೆ ಪರಿಪೂರ್ಣ ಜೀವನಕ್ಕಾಗಿ ಪರಿವರ್ತನಾತ್ಮಕ ಶಿಕ್ಷಣ” ಎಂಬ ದೃಢವಾದ ಸಿದ್ಧಾಂತವು ಅದರ ಬೆಳವಣಿಗೆಯ ಹಿಂದಿನ ಪ್ರೇರಕ ಶಕ್ತಿಯಾಗಿದೆ.

ಅಮೃತ ಮಹೋತ್ಸವ ಆಚರಣೆ: ಮಂಗಳೂರಿನ ಬೆಂದೂರ್‌ನಲ್ಲಿರುವ ಸೈಂಟ್ ಸೆಬಾಸ್ಟಿಯನ್ ಚರ್ಚ್ನಲ್ಲಿ ಮಧ್ಯಾಹ್ನ೩:೩೦ಕ್ಕೆ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಪೀಟರ್ ಪೌಲ್ ಸಲ್ಡಾನ್ಹಾ ಅವರ ಅಧ್ಯಕ್ಷತೆಯಲ್ಲಿ ಬಿಇಎಸ್‌ನ ಅಮೃತ ಮಹೋತ್ಸವ ಆಚರಣೆಯ ಸಮಾರೋಪ ಸಮಾರಂಭವು ಕೃತಜ್ಞತಾ ಬಲಿಪೂಜೆಯೊಂದಿಗೆ ಆರಂಭಗೊಳ್ಳಲಿದೆ. ಇತರ ಧರ್ಮಾಧ್ಯಕ್ಷರುಗಳು, ಧರ್ಮಗುರುಗಳು, ಧಾರ್ಮಿಕಭಗಿನಿಯರು, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು, ಪೋಷಕರು ಮತ್ತು ಹಿತೈಷಿಗಳು ಸೇರಿದಂತೆಗಣ್ಯ ಅತಿಥಿಗಳು ಈ ಪವಿತ್ರ ಬಲಿಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

See also  ಕಾಸರಗೋಡು: ಸಿಪಿಐಎಂ ಮುಖಂಡ ಪಿ. ರಾಘವನ್ ನಿಧನ

ಮಂಗಳೂರಿನ ಬೆಂದೂರಿನಲ್ಲಿರುವ ಸೈಂಟ್ ಸೆಬಾಸ್ಟಿಯನ್ ಪ್ಲಾಟಿನಂಜುಬಿಲಿ ಸಭಾಂಗಣದಲ್ಲಿ ಸಂಜೆ ೫:೩೦ಕ್ಕೆ ನಿಗದಿಯಾಗಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಂಗಳೂರು ಮಹಾಧರ್ಮಪ್ರಾಂತ್ಯದ ಮಹಾಧರ್ಮಾಧ್ಯಕ್ಷರಾದ ಅತಿವಂದನೀಯ ಡಾ|ಪೀಟರ್‌ಮಚಾದೋ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಗೌರವಾನ್ವಿತ ಅತಿಥಿಗಳಾಗಿ ಕರ್ನಾಟಕ ವಿಧಾನ ಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್, ಮಂಗಳೂರು ನಗರ, ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕರಾದ ವೇದವ್ಯಾಸಕಾಮತ್‌ ಮತ್ತು ದಕ್ಷಿಣಕನ್ನಡ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ದಯಾನಂದ ಆರ್ ನಾಯ್ಕ್ರವರು ಉಪಸ್ಥಿತರಿರುವರು.

ವಿವಿಧಬಿ ಇಎಸ್ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಈ ಅಮೃತ ಮಹೋತ್ಸವದಲ್ಲಿ ಬಿಇಎಸ್ ಧ್ಯೇಯೋದ್ದೇಶಗಳಾದ ನ್ಯಾಯ, ಸ್ವಾತಂತ್ರ‍್ಯ, ಸಮಾನತೆ, ಭ್ರಾತೃತ್ವ, ಶಾಂತಿ ಮತ್ತುಸೌಹಾರ್ದತೆ, ಪರಿಸರದ ಕಾಳಜಿ ಮತ್ತು ಉತ್ಕೃಷ್ಟತೆ ಹಾಗೂ ಸ್ವಾವಲಂಬನೆಗಾಗಿ ಶಿಕ್ಷಣದ ಬದ್ಧತೆಯ ವಿಷಯಗಳ ಬಗ್ಗೆ ಒತ್ತು ನೀಡುವ ವಿವಿಧ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಲಿದ್ದಾರೆ.

ಸಹಭಾಗಿಗಳನ್ನು ಗೌರವಿಸುವುದು: ಕಳೆದ ಏಳೂವರೆ ದಶಕಗಳಲ್ಲಿ ಬಿಇಎಸ್‌ನ ಸರ್ವ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತು ಸಹಕರಿಸಿ, ಪ್ರೋತ್ಸಾಹಿಸಿದ ಎಲ್ಲಾ ಸಹಯೋಗಿಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಈ ಆಚರಣೆಯು ಒಂದು ಸುಸಂದರ್ಭವಾಗಿದೆ.

ನಾಯಕತ್ವ ಮತ್ತು ಮೌಲ್ಯಗಳು: ಬೆಥನಿ ಎಜುಕೇಷನಲ್‌ ಸೊಸೈಟಿಯ ಆಡಳಿತವು ಬೆಥನಿ ಸಭೆಯ ಮಹಾಮಾತೆ ಅವರ ನಾಯಕತ್ವ ಮತ್ತು ಅಧ್ಯಕ್ಷತೆಯಲ್ಲಿ ಹಾಗೂ ಬೆಥನಿ ಸಭೆಯ ಆಡಳಿತ ಮಂಡಳಿಯ ಸಹಕಾರದೊಂದಿಗೆ ನಡೆಯುತ್ತಿದೆ. ಪ್ರಸ್ತುತ, ಭಗಿನಿರೋಸ್‌ಸೆಲಿನ್‌ ಬಿಎಸ್‌ ಅವರು ಬಿಇಎಸ್‌ ಅಧ್ಯಕ್ಷರಾಗಿ, ಭಗಿನಿಶಾಂತಿಪ್ರಿಯಾಬಿಎಸ್‌ ಉಪಾಧ್ಯಕ್ಷರಾಗಿ ಮತ್ತು ಭಗಿನಿಸಂಧ್ಯಾ ಬಿಎಸ್ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬೆಥನಿ ಎಜುಕೇಷನಲ್‌ಸೊಸೈಟಿಯ ಆಡಳಿತ ಮಂಡಳಿಯು ಜನರಲ್ ಕೌನ್ಸಿಲರ್‌ ಗಳು ಸೇರಿದಂತೆ ಒಟ್ಟು೧೦ ಸದಸ್ಯರನ್ನು ಒಳಗೊಂಡಿದೆ.

ಭಾರತದಾದ್ಯಂತ ಧನಾತ್ಮಕ ಪ್ರಭಾವ: ಬೆಥನಿ ಎಜುಕೇಷನಲ್‌ ಸೊಸೈಟಿಯು ತನ್ನ ಹೆಜ್ಜೆಗುರುತನ್ನು ಭಾರತದಾದ್ಯಂತ ವಿಸ್ತರಿಸಿದೆ. ಪರಿವರ್ತನೀಯ ಶಿಕ್ಷಣವನ್ನು ಪಸರಿಸುವುದು ಮತ್ತು ಬೆಥನಿ ಎಜುಕೇಶನಲ್ ಸೊಸೈಟಿಯ ಮೂಲ ಮೌಲ್ಯಗಳಾದ ದೈವಾನುಭವ; ಅನುಕಂಪದಿಂದ ಕೂಡಿದ ಪ್ರೀತಿ ಎಲ್ಲರಿಗಾಗಿ ವಿಶೇಷವಾಗಿ ದೀನದಲಿತರಿಗಾಗಿ; ಸಂಘಟನೆ ಸಹಭಾಗಿತ್ವ ಮತ್ತು ಸಂಘಸ್ಫೂರ್ತಿ; ಪ್ರತಿಯೊಬ್ಬರ ಸಾಮರ್ಥ್ಯಗಳನ್ನು ಉತ್ಕೃಷ್ಟಗೊಳಿಸಿ ಮಾನವೀಯ ಸಮಾಜವನ್ನು ನಿರ್ಮಿಸುವುದು;ಸತ್ಯ, ಪ್ರೀತಿ, ನ್ಯಾಯ ಮತ್ತು ಶಾಂತಿ; ಸರಳ ಜೀವನ ಮತ್ತು ದುಡಿಮೆಯ ಘನತೆ; ಜೀವ, ನಿಸರ್ಗ, ಸಂಸ್ಕೃತಿ ಮತ್ತು ಧರ್ಮಗಳ ಬಗ್ಗೆ ಗೌರವ ಹಾಗೂ ರಾಷ್ಟ್ರ ಪ್ರೇಮ ಇವೆಲ್ಲವುಗಳನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವುದು ಇದರ ಪ್ರಮುಖ ಆದ್ಯತೆಯಾಗಿದೆ.

ಬೆಥನಿ ಎಜುಕೇಷನಲ್‌ಸೊಸೈಟಿಯಿಂದ ನಡೆಸಲ್ಪಡುವ ಪ್ರೌಢಶಾಲಾ ವಿದ್ಯಾಥಿ೯ಗಳಿಗೆ ಸಂಸ್ಥೆಯಿಂದ ರಚಿಸಲ್ಪಟ್ಟ ಬೆಥನಿ ಚಾಂಪಿಯನ್ಸ್ ಎಂಬ ಸಂಘದ ಮೂಲಕ ನಾಗರಿಕ ಮತ್ತು ರಾಜಕೀಯ ನಾಯಕತ್ವದ ಸಾಧಕರಾಗಿ ಹಾಗೂ ಸಾಮಾಜಿಕ ಪ್ರಗತಿಯೊಂದಿಗೆ ಯುವ ಜನರಿಗೆ ಮಾರ್ಗದರ್ಶಕರಾಗಿ ಹೊರಹೊಮ್ಮಿಸಲುಪ್ರಯತ್ನಿಸಲಾಗುತ್ತಿದೆ.

ಸಂಸ್ಥೆಯ ಬೆಳವಣಿಗೆ: ಪ್ರಸ್ತುತ, ಬೆಥನಿ ಎಜುಕೇಷನಲ್‌ಸೊಸೈಟಿಯು ಪ್ರಾಥಮಿಕ, ಮಾಧ್ಯಮಿಕ, ಪದವಿ ಪೂವ೯ ಕಾಲೇಜುಗಳು ಮತ್ತು ಎರಡು ಪದವಿ ಕಾಲೇಜುಗಳನ್ನು ಒಳಗೊಂಡು ಒಟ್ಟು೧೩೫ ಸಂಸ್ಥೆಗಳನ್ನು ನಿರ್ವಹಿಸುತ್ತಿದೆ. ಇದು ೩೩ ವಿದ್ಯಾರ್ಥಿ ನಿಲಯಗಳು ಮತ್ತು ಹಲವಾರು ಅನೌಪಚಾರಿಕ ಶಿಕ್ಷಣ ಕೇಂದ್ರಗಳು, ಶಿಕ್ಷಕರ ತರಬೇತಿ ಕಾಲೇಜು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವೃತ್ತಿಪರ ಶಿಕ್ಷಣ ಕೇಂದ್ರಗಳನ್ನು ಒಳಗೊಂಡಿದೆ. ಈ ಸಂಸ್ಥೆಗಳು ಭಾರತದ ೨೬ ರಾಜ್ಯಗಳು ಮತ್ತು೫೩ ಧರ್ಮಪ್ರಾಂತ್ಯಗಳಲ್ಲಿ ಹರಡಿಕೊಂಡಿವೆ. ವೈವಿಧ್ಯಮಯ ಶೈಕ್ಷಣಿಕ ಕೊಡುಗೆಗಳ ಮೂಲಕ ೮೨,೦೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾದಾನವನ್ನು ನೀಡುತ್ತಾ ಉಜ್ವಲ ಭವಿಷ್ಯವನ್ನು ರೂಪಿಸಲು ಈ ಸಂಸ್ಥೆಯು ಸಮರ್ಪಿತವಾಗಿದೆ.

See also  ಲೋಕಸಭೆ ಚುನಾವಣೆಗೆ ರಣತಂತ್ರ ರೂಪಿಸಲು ಆ.2ರಂದು ಸಭೆ: ಡಿ.ಕೆ. ಶಿವಕುಮಾರ್‌

ಈ ಸಂಸ್ಥೆಯ ಮೂಲ ಶಕ್ತಿಯು ಸಹಭಾಗಿತ್ವ ಎಂಬ ತತ್ವದಲ್ಲಿ ಅಡಗಿದೆ. ನಮ್ಮ ಹೆಚ್ಚಿನ ಸಂಖ್ಯೆಯ ಬೆಥನಿ ಸಹೋದರಿಯರು ಧರ್ಮಪ್ರಾಂತ್ಯದ ಇತರ ಆಡಳಿತ ಮಂಡಳಿಗಳೊಂದಿಗೆ ಜೊತೆಗೂಡಿ ೬೫ ಶಾಲೆಗಳು ಮತ್ತುಅನೇಕ ವಿದ್ಯಾರ್ಥಿ ನಿಲಯಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲಿ ಮೌಲ್ಯಾಧಾರಿತ ಮತ್ತು ಗುಣಾತ್ಮಕ ಶಿಕ್ಷಣವನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಸಾಮಾಜಿಕ ವಿಮೋಚನೆಯಗುರಿ: ಬೆಥನಿ ಭಗಿನಿಯರು ಬೆಥನಿ ಸಾಮಾಜಿಕ ಸೇವಾ ಕೇಂದ್ರಗಳ ಮೂಲಕ ಮಹಿಳೆಯರು, ಯುವಕರು, ಮಕ್ಕಳು, ವಲಸಿಗರು ಮತ್ತು ಸಮಾಜದ ಕೆಳಸ್ತರದಲ್ಲಿರುವವರ ಆಶೋತ್ತರಗಳಿಗೆ ಸ್ಪಂದಿಸುತ್ತಾ ಬಂದಿರುತ್ತಾರೆ. ಅವರ ಸಾಮಾಜಿಕ ವಿಮೋಚನೆಯಧ್ಯೇಯವು ಉನ್ನತಆದ್ಯತೆಯಾಗಿ, ಹಲವಾರು ಯೋಜನೆಗಳ ಮೂಲಕ ಸ್ವಾವಲಂಬನೆ, ಕೌಶಲ್ಯ ಆಧಾರಿತ ಶಿಕ್ಷಣ ಮತ್ತುಆರ್ಥಿಕ ಸದೃಢತೆ ಹಾಗೂ ಸುಸ್ಥಿರ ಜೀವನೋಪಾಯವನ್ನುಉತ್ತೇಜಿಸುತ್ತಿದೆ.

ರಾಷ್ಟ್ರೀಯ ಮತ್ತುಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹಿಳೆಯರ ಸಶಕ್ತೀಕರಣಕ್ಕೆ ಯತ್ನ: ಭಾರತದಾದ್ಯಂತ ೫೬ ಸಾಮಾಜಿಕ ಸೇವಾ ಕೇಂದ್ರಗಳೊಂದಿಗೆ, ಬೆಥನಿ ಸಭೆಯು೨೬ ರಾಜ್ಯಗಳ ೯೩೭ ಪಟ್ಟಣ ಮತ್ತುಹಲವಾರು ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಗೆ ಸೇರಿದ ೪,೨೦,೦೦೦ ಮಹಿಳೆಯರು, ಯುವಕರು ಮತ್ತು ಮಕ್ಕಳ ಜೀವನವನ್ನು ಸಬಲೀಕರಣಗೊಳಿಸಲು ಹೆಜ್ಜೆಇಟ್ಟಿದೆ. ಅಚಲವಾದ ಬದ್ಧತೆಯೊಂದಿಗೆ ಮಹಿಳೆಯರ ಸಬಲೀಕರಣದಲ್ಲಿ ೧೯೨೧ರಿಂದ ಸಂಸ್ಥೆಯು ಮುಂಚೂಣಿಯಲ್ಲಿದೆ. ಬೆಥನಿ ಸಭೆಯ ಸಹೋದರಿಯರು ವಾಯುವ್ಯ ಆಫ್ರಿಕಾ, ತಾಂಜಾನಿಯಾ ಮತ್ತು ನೇಪಾಳದಲ್ಲಿ ಶೈಕ್ಷಣಿಕ, ಸಾಮಾಜಿಕ ಮತ್ತು ವೈದ್ಯಕೀಯ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಅಮೃತ ಮಹೋತ್ಸವದ ಅಂಗವಾಗಿ ೭೫ ಹೆಣ್ಣುಮಕ್ಕಳಿಗೆ ತಮ್ಮಜೀವನವನ್ನುರೂಪಿಸುವಂತಹ ವೃತ್ತಿಪರ ಶಿಕ್ಷಣ ಪಡೆಯಲು ಸಹಾಯಧನ ನೀಡಿ ಸಹಕರಿಸುವ ವಿಶಿಷ್ಟ ಯೋಜನೆಯನ್ನು ಕೈಗೊಳ್ಳಲಾಗಿದೆ. ಮಾತ್ರವಲ್ಲದೆ ಪ್ರತೀವಷ೯ ೧೦೦೦ಬಡ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುವುದರ ಮೂಲಕ ಅವರ ಶೈಕ್ಷಣಿಕ ಪ್ರಗತಿಗಾಗಿ ಶ್ರಮಿಸುತ್ತಿದೆ.

ಬೆಥನಿ ಎಜುಕೇಷನಲ್‌ ಸೊಸೈಟಿ(ರಿ) ಮಂಗಳೂರು ತನ್ನಅಮೃತ ಮಹೋತ್ಸವದ ಸಂಭ್ರಮಾಚರಣೆಯ ಸುಸಂದರ್ಭದಲ್ಲಿ, ತನ್ನ ಪರಿವರ್ತನಾತ್ಮಕ ಶಿಕ್ಷಣದ ಪರಂಪರೆಯನ್ನು ಮತ್ತು ಸಾಮಾಜಿಕ ಸಾಮರಸ್ಯ, ಶಾಂತಿ ಮತ್ತುಏಕೀಕೃತ ಮಾನವ ಸಮುದಾಯದ ಉತ್ತೇಜನಕ್ಕೆ ಮತ್ತು ಲಕ್ಷಾಂತರ ಮಕ್ಕಳ ಮೂಲಭೂತ ಗುಣಮಟ್ಟದ ಶಿಕ್ಷಣಕ್ಕೆ ಅದರಲ್ಲೂ ವಿಶೇಷವಾಗಿ ಮಾನವ ಹಕ್ಕುಗಳಿಂದ ವಂಚಿತವಾಗಿರುವ ಗ್ರಾಮೀಣ ಪ್ರದೇಶಗಳ ಮಕ್ಕಳ ಶಿಕ್ಷಣದ ಬದ್ಧತೆಗಾಗಿ ಭಗವಂತನಕೃಪೆಯನ್ನು ಕೋರುತ್ತಾ, ಈ ಸಂಸ್ಥೆಯು ವಿಶ್ವದಾದ್ಯಂತ ಪಸರಿಸಿ ಶಿಕ್ಷಣ ಮತ್ತು ಸಮಾಜ ಸೇವೆಯ ಕೈಂಕಯ೯ವನ್ನು ಮಾಡುತ್ತಾ ಸಮಾಜದಜನರಿಗೆ ಭರವಸೆಯ ಬೆಳಕಾಗಲಿ ಎಂಬುವುದೇ ನಮ್ಮೆಲ್ಲರ ಸದಾಶಯ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು