News Kannada
Thursday, June 01 2023
ಕ್ಯಾಂಪಸ್

ಉಜಿರೆ: ಎಸ್. ಡಿ. ಎಂ ನ ನವೀಕೃತ ಡೀನ್ ಚೇಂಬರ್ ಗೆ ಚಾಲನೆ

S. D. Launch to the renovated Dean Chamber of M
Photo Credit : News Kannada

ಉಜಿರೆ: ಎಸ್. ಡಿ .ಎಂ. ಸ್ನಾತ್ತಕೋತ್ತರ ಕೇಂದ್ರದ ನವೀಕೃತ ಡೀನ್ ಚೇಂಬರನ್ನು ಎಸ್. ಡಿ. ಎಮ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಿ . ಹರ್ಷೇಂದ್ರ ಕುಮಾರ್ ಉದ್ಘಾಟಿಸಿದರು.

ಕಳೆದ ಎರಡು ತಿಂಗಳುಗಳಿಂದ ಡೀನ್ ಚೇಂಬರಿಗೆ ಹೊಸ ಕಾಯಕಲ್ಪ ನೀಡುವ ಕಾಮಗಾರಿ ಚಾಲ್ತಿಯಲ್ಲಿತ್ತು .ಕಾಮಗಾರಿ ಪೂರ್ಣಗೊಂಡು ಸುಸಜ್ಜಿತ ವಿನ್ಯಾಸದೊಂದಿಗೆ ಮರುರೂಪುಗೊಂಡ ಡೀನ್ ಚೇಂಬರ್ ಗೆ ಡಿ.ಹರ್ಷೇಂದ್ರ ಕುಮಾರ್ ಬುಧವಾರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸ್ನಾತ್ತಕೋತ್ತರ ಕೇಂದ್ರದ ಡೀನ್ ಡಾ. ವಿಶ್ವನಾಥ .ಪಿ ಅವರಿಗೆ ಹೂಗುಚ್ಛ ನೀಡಿ ಶುಭ ಹಾರೈಸಿದರು . ಸ್ನಾತಕೋತ್ತರ ಕೇಂದ್ರದ ಬೆಳವಣಿಗೆಗೆ ಸಂಬಂಧಿಸಿದ ಮಹತ್ವದ ನಿರ್ಣಯಗಳ ನೆಲೆಯಾಗಿ ಡೀನ್ ಚೇಂಬರ್ ಹೆಗ್ಗುರುತು ಮೂಡಿಸಲಿ ಎಂದು ಆಶಿಸಿದರು. ಡೀನ್ ಚೇಂಬರ್ ಕಡೆಗೆ ಸಮಸ್ಯೆಗಳನ್ನು ನಿವೇದಿಸಿ ಕೊಂಡು  ಬರುವವರಿಗೆ ಪರಿಹಾರ ಸಿಗಲಿ, ಈ ಮೂಲಕ ಉನ್ನತ ಶಿಕ್ಷಣ ದ ಗುಣಮಟ್ಟ ಹೆಚ್ಚಿಸುವ ಕೊಡುಗೆಗಳನ್ನು ನೀಡಲಿ ಎಂದು ಹೇಳಿದರು.

ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ , ಕಾಲೇಜಿನ ಪ್ರಾಂಶುಪಾಲ ಡಾ. ಕುಮಾರ್ ಹೆಗ್ಡೆ ಬಿ. ಎ ,ಸ್ನಾತ್ತಕೋತ್ತರ ಕೇಂದ್ರದ ಡೀನ್ ಡಾ. ವಿಶ್ವನಾಥ್ ಪಿ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ಭಟ್ ನಿರೂಪಿಸಿದರು.

See also  ಉಜಿರೆ: ಶಿಕ್ಷಣವನ್ನೇ ಉಸಿರಾಗಿಸಿ, ಗುಣಮಟ್ಟದ ಶಿಕ್ಷಣಕ್ಕೆ ಒತ್ತುಕೊಟ್ಟ ವಜ್ರಕುಮಾರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು