News Kannada
Saturday, February 24 2024
ಮನರಂಜನೆ

ಹಿಂದು ಸಂಪ್ರದಾಯದಂತೆ ಚಿರಂಜೀವಿ ಕೈ ಹಿಡಿದ ಮೇಘನಾ ರಾಜ್

Photo Credit :

ಹಿಂದು ಸಂಪ್ರದಾಯದಂತೆ ಚಿರಂಜೀವಿ ಕೈ ಹಿಡಿದ ಮೇಘನಾ ರಾಜ್

ಸೌಭಾಗ್ಯವತಿ ಮೇಘನಾ ರಾಜ್ ಅವರು ತಮ್ಮ ಇನಿಯ ಜಿರಂಜೀವಿ ಸರ್ಜಾ ಅವರ ಕೈ ಹಿಡಿದು ಸಪ್ತಪದಿ ತುಳಿದಿದ್ದಾರೆ. ಲವ್ ಬರ್ಡ್ಸ್ ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಅವರು ಪಕ್ಕಾ ಹಿಂದು ಸಂಪ್ರದಾಯದಂತೆ ಇಂದು (ಮೇ 2) ಮದುವೆಯಾಗಿದ್ದಾರೆ.

ಬೆಳಗ್ಗೆ 10.30 ರಿಂದ 11 ಗಂಟೆಯವರೆಗೆ ಇದ್ದ ಶುಭ ಮುಹೂರ್ತದಲ್ಲಿ ಈ ಜೋಡಿ ಮದುವೆಯಾಗಿದ್ದು, ಮಿಥುನ ಲಗ್ನದಲ್ಲಿ ಚಿರು ಅವರು ಮೇಘನಾ ಅವರ ಕತ್ತಿಗೆ ಮಾಂಗಲ್ಯಧಾರಣೆ ಮಾಡಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದ ಮೂರನೇ ಗೇಟ್ ವೈಟ್ ಪೆಟಲ್ಸ್ ನಲ್ಲಿ ವಿವಾಹ ಮಹೋತ್ಸವ ಜರುಗಿದ್ದು, ಪದ್ಮಾವತಿ-ವೆಂಕಟೇಶ್ವರ ಥೀಮ್ ನಲ್ಲಿ ಮದುವೆ ಮಂಟಪವನ್ನು ಶೃಂಗರಿಸಲಾಗಿತ್ತು.

ಕ್ರೀಮ್ ಬಣ್ಣದ ರೇಷ್ಮೆ ಸೀರೆಯಲ್ಲಿ ಮದುಮಗಳು ಮೇಘನಾ ಅವರು ಮಿರಮಿರ ಮಿಂಚಿದರೆ, ರೇಷ್ಮೆ ಪಂಚೆ, ಶರ್ಟ್, ಶಾಲು ಧರಿಸಿದ್ದ ಚಿರು ಸರ್ಜಾ ಅವರು ಲಕಲಕ ಹೊಳೆಯುತ್ತಿದ್ದರು.

ಹಿಂದೂ ಸಂಪ್ರದಾಯದಲ್ಲಿ ಜರುಗಿದ ಈ ವಿವಾಹ ಮಹೋತ್ಸವದಲ್ಲಿ ನಟ ಶ್ರೀನಾಥ್ ದಂಪತಿ, ಟಿ.ಎಸ್.ನಾಗಾಭರಣ ದಂಪತಿ, ಪನ್ನಗ ಭರಣ, ನಟ ಅರ್ಜುನ್ ಸರ್ಜಾ ದಂಪತಿ, ಡಾ.ರಾಜ್ ಕುಮಾರ್ ಅವರ ಪುತ್ರಿ ಲಕ್ಷ್ಮಿ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿ, ನೂತನ ವಧು-ವರರಿಗೆ ಶುಭ ಹಾರೈಸಿದರು.

ಕಳೆದ ಭಾನುವಾರ ಕ್ರಿಶ್ಚಿಯನ್ ಶೈಲಿಯಲ್ಲಿ ಸರಳವಾಗಿ ಮದುವೆಯಾಗಿದ್ದ ಈ ಜೋಡಿಯ ಮದುವೆ ಸಂಭ್ರಮದಲ್ಲಿ ಚಿತ್ರರಂಗದ ಗಣ್ಯರು ಭಾಗಿಯಾಗಿರಲಿಲ್ಲ. ಆದ್ದರಿಂದ ಇಂದು ಸಂಜೆ 7 ಗಂಟೆಗೆ ಅದ್ಧೂರಿ ಸಮಾರಂಭ ಇಟ್ಟುಕೊಂಡಿದ್ದು, ಆರತಕ್ಷತೆ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ತಾರೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಸಂಭವವಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
189

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು