ಸುಮಾರು 450 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಆರ್ಆರ್ಆರ್ ಚಿತ್ರ ಬಿಡುಗಡೆ ದಿನಾಂಕದಲ್ಲಿ ಮತ್ತೊಮ್ಮೆ ಬದಲಾವಣೆಯಾಗಿದ್ದು, ಇದೀಗ ಮಾರ್ಚ್ 25ರಂದು ತೆರೆಗೆ ಬರಲಿದೆ.
ಈ ಕುರಿತು ಟ್ವಿಟರ್ನಲ್ಲಿ ಅಧಿಕೃತ ಮಾಹಿತಿ ಹಂಚಿಕೊಂಡ ಚಿತ್ರ ತಂಡ, ಈ ದಿನಾಂಕದಂದು ಬಿಡುಗಡೆಯಾಗುವುದು ಖಚಿತ ಎಂದು ತಿಳಿಸಿದೆ.
#RRRonMarch25th, 2022… FINALISED! 🔥🌊 #RRRMovie pic.twitter.com/hQfrB9jrjS
— RRR Movie (@RRRMovie) January 31, 2022
ಈಗಾಗಲೇ ಹಲವು ಬಾರಿ ಬಿಡುಗಡೆ ದಿನಾಂಕ ಮುಂದೂಡಿಕೆ ಮಾಡಿದ್ದ ಚಿತ್ರತಂಡ ಇದೀಗ ಮತ್ತೊಂದು ಹೊಸ ದಿನಾಂಕವನ್ನು ಅಭಿಮಾನಿಗಳ ಮುಂದಿಟ್ಟಿದೆ.ಈ ಹಿಂದೆ ಚಿತ್ರ ಬಿಡುಗಡೆ ಮಾಡಲು ಮಾರ್ಚ್ 28 ಇಲ್ಲವೇ ಏಪ್ರಿಲ್ 28ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು. ಇದರ ಬೆನ್ನಲ್ಲೇ ಮತ್ತೊಂದು ಹೊಸ ದಿನಾಂಕ ಬಹಿರಂಗ ಮಾಡಿದೆ.
ಈ ಬಿಗ್ ಬಜೆಟ್ ಚಿತ್ರದಲ್ಲಿ ರಾಮ್ ಚರಣ್ ಅಲ್ಲೂರಿ ಸೀತಾರಾಮರಾಜು ಪಾತ್ರದಲ್ಲಿ ಹಾಗೂ ಜೂ.ಎನ್ಟಿಆರ್ ಕೋಮರಂ ಭೀಮನಾಗಿ ನಟಿಸಿದ್ದಾರೆ. ನಾಯಕಿಯರಾಗಿ ಆಲಿಯಾ ಭಟ್ ಮತ್ತು ಒಲಿವಿಯಾ ಮೋರಿಸ್ ನಟಿಸಿದ್ದಾರೆ.