ಹೈದರಾಬಾದ್: ತೆಲುಗು ಚಿತ್ರರಂಗದ ಹಿರಿಯ ನಟಿ ಅನ್ನಪೂರ್ಣ ಅವರ ಮಗಳು ಕೀರ್ತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂದು ಬೆಳಿಗ್ಗೆ ಬಂಜಾರಾ ಹಿಲ್ಸ್ನ ಕೃಷ್ಣಾ ಅಪಾರ್ಟ್ಮೆಂಟ್ನಲ್ಲಿ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕೀರ್ತಿ ಮೃತದೇಹ ಪತ್ತೆಯಾಗಿದೆ.
ಮಗಳ ಅನಾರೋಗ್ಯದ ಕಾರಣದಿಂದಲೇ ಆತ್ಮಹತ್ಯಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ. ಬೆಂಗಳೂರಿನ ಸಾಯಿಕೃಷ್ಣ ಎಂಬುವರೊಂದಿಗೆ ವಿವಾಹವಾಗಿದ್ದ ಕೀರ್ತಿ ಅವರಿಗೆ ಮಗಳಿದ್ದಳು. ಮಗಳಿಗೆ 4 ವರ್ಷವಾದರೂ ಮಾತು ಬಾರದ ಕಾರಣ ಇವರು ಮನನೊಂದು ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಪೊಲೀಸರು ಕೀರ್ತಿ ಅವರ ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದಾರೆ. ತನಿಖೆ ನಡೆಯುತ್ತಿದೆ.