ವಿಜಯ್ಪ್ರಸಾದ್ ನಿರ್ದೇಶನದ ಹಾಗೂ ಜಗ್ಗೇಶ್ ಅಭಿನಯದ ‘ನೀರ್ದೋಸೆ’ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಟ್ರೇಲರ್ ನೋಡಿದವರೆಲ್ಲ ಸಿನಿಮಾ ನೋಡಬೇಕೆನ್ನುವ ಭಾರೀ ಕುತೂಹಲದಲ್ಲಿದ್ದಾರೆ.
ಈ ಸಿನಿಮಾದಲ್ಲಿ ರಮ್ಯ ಅರ್ಧದಿಂದ ಹೊರಬಂದಿದ್ದು, ಆ ಜಾಗದಲ್ಲಿ ಹರಿಪ್ರಿಯಾ ನಟಿಸಿದ್ದಾರೆ. ಡೈರೆಕ್ಟರ್ ವಿಜಯಪ್ರಸಾದ್. ಫ್ರೆಶ್ ಆದ ಬಿಸಿ ಬಿಸಿ ಗರಿಗರಿ ‘ನೀರ್ದೋಸೆ’ ಟ್ರೇಲರ್ ರಿಲೀಸ್ ಆಗಿದೆ. ಅಳೆದು, ತೂಗಿ, ಸುರಿದು ನೀರ್ದೋಸೆ ನೀರ್ ನೀರಾಗಿ ಹಂಗಂಗೇ ತೊಳೆದುಕೊಂಡು ಹೋಗ್ಬಿಡುತ್ತೇನೋ ಅಂತ ಮಾತಾಡಿಕೊಳ್ತಿದ್ದ ಮಂದಿಗೆ ನಿರ್ದೇಶಕ ವಿಜಯಪ್ರಸಾದ್ ಸಖತ್ ಚೋಕ್ ಕೊಟ್ಟಿದ್ದಾರೆ. ಇಷ್ಟು ದಿನ ಕಾದಿದ್ದೂ ಸಾರ್ಥಕ ಆಯ್ತು ಅಂತ ಅನಿಸುವ ರೇಂಜ್ಗೆ ಇದೆ ‘ನೀರ್ದೋಸೆ’ ಟ್ರೇಲರ್. ಜಗ್ಗೇಶ್, ದತ್ತಣ್ಣ, ಹರಿಪ್ರಿಯಾ, ಸುಮನ್ ರಂಗನಾಥ್ ಪ್ರಮುಖ ಪಾತ್ರಗಳಲ್ಲಿ ನಟಿಸಿರೋ ‘ನೀರ್ದೋಸೆ’ಗೆ ಜೆ.ಅನೂಪ್ ಸಿಳೀನ್ ಸಂಗೀತ ನೀಡಿದ್ದಾರೆ.