ಬೆಂಗಳೂರು: ನಟ ಸುದೀಪ್ ಅಭಿನಯದ ಫೈಲ್ವಾನ್ ಚಿತ್ರ ಪೈರಸಿ ಸಂಬಂಧ ಕೆ.ಪಿ.ಅಗ್ರಹಾರ ಪೊಲೀಸರು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ.
ನೇತಾಜಿ ನಗರದ ನಿವಾಸಿ ಪ್ರವೀಣ್ (32) ಎಂದು ಗುರುತಿಸಲಾಗಿದೆ. ಈತ ಸಿನಿಮಾವನ್ನು ಪೈರಸಿ ಮಾಡಿ 10ರೂಪಾಯಿಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.
ವಿಚಾರಣೆ ವೇಳೆ ತಮಿಳು ರಾಕರ್ಸ್ ವೆಬ್ ಸೈಟ್ ನಿಂದ ಸಿನಿಮಾವನ್ನು ಆರೋಪಿ ಪೈರಸಿ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಚಿತ್ರ ಪೈರಸಿ ಸಂಬಂಧ ಸಿನಿಮಾ ನಿರ್ಮಾಪಕಿ ಸ್ವಪ್ನಕೃಷ್ಣ ಅವರು ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದರು.