ಮುಂಬೈ: ರಸ್ತೆಯಲ್ಲಿ ಕಸ ಬಿಸಾಡಿದ ವ್ಯಕ್ತಿಯನ್ನು ಬಾಲಿವುಡ್ ನಟಿ ಅನುಷ್ಕ ಶರ್ಮಾ ಪ್ರಶ್ನಿಸಿದ ವಿಡಿಯೊ ಇದೀಗ ವೈರಲ್ ಆಗಿದೆ.
ಐಷಾರಾಮಿ ಕಾರಿನಲ್ಲಿ ಹೋಗುತ್ತ ವ್ಯಕ್ತಿಯೊಬ್ಬ ತನ್ನ ಕೈಯಲಿದ್ದ ಕಸವನ್ನು ರಸ್ತೆಗೆ ಬಿಸಾಡಿದ್ದಾನೆ. ಇದನ್ನು ಗಮನಿಸಿದ ಅನುಷ್ಕಾ ತಮ್ಮ ಕಾರಿನ ಗಾಜು ಇಳಿಸಿ ರಸ್ತೆಯ ಮೇಲೇಕೆ ಕಸ ಬಿಸಾಡುತ್ತಿದ್ದೀರಿ ಎಂದು ಖಾರವಾಗಿ ಆ ವ್ಯಕ್ತಿಯನ್ನು ಪ್ರಶ್ನಿಸಿದ್ದಾರೆ. ‘ರಸ್ತೆಯಲ್ಲಿ ಬೇಕಾಬಿಟ್ಟಿಯಾಗಿ ಪ್ಲಾಸ್ಟಿಕ್ ಎಸೆಯುವಂತಿಲ್ಲ. ದಯವಿಟ್ಟು ಕಾಳಜಿ ವಹಿಸಿ’ ಎಂದು ಸ್ವಚ್ಛತೆಯ ಪಾಠ ಮಾಡಿದ್ದಾರೆ.
ಈ ಸ್ವಚ್ಛತಾ ಪಾಠದ ಸನ್ನಿವೇಶವನ್ನು ಅನುಷ್ಕಾರ ಪತಿ ಹಾಗೂ ಕ್ರಿಕೆಟ್ ತಂಡದ ನಾಯಕರಾಗಿರುವ ವಿರಾಟ್ ಕೊಹ್ಲಿ ವಿಡಿಯೊ ಮಾಡಿ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.