ಗಿರಿಗಿಟ್ ಚಿತ್ರದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಪ್ರಕರಣ ಸುಖಾಂತ್ಯ

ಗಿರಿಗಿಟ್ ಚಿತ್ರದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಪ್ರಕರಣ ಸುಖಾಂತ್ಯ

YK   ¦    Sep 17, 2019 04:47:15 PM (IST)
ಗಿರಿಗಿಟ್ ಚಿತ್ರದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಪ್ರಕರಣ ಸುಖಾಂತ್ಯ

ಮಂಗಳೂರು: ಯಶಸ್ವಿಯಾಗಿ ಪ್ರದಶರ್ನಗೊಳುತ್ತಿದ್ದ ಗಿರಿಗಿಟ್ ತುಳು ಸಿನಿಮಾದ ವಿರುದ್ಧ ಮಂಗಳೂರು ವಕೀಲರ ಸಂಘವು ಕೋರ್ಟ್ ಮೆಟ್ಟಿಲೇರಿದ್ದ ಪ್ರಕರಣವು ಇಂದು ಸುಖಾಂತ್ಯಗೊಂಡಿದೆ.

 ಸಿನಿಮಾದಲ್ಲಿ ವಕೀಲರ ಘನತೆಗೆ ಧಕ್ಕೆ ತರುವ ಸಂಭಾಷಣೆಯು ಚಿತ್ರತಂಡ ತೆಗೆಯುವುದಾಗಿ ಸಮ್ಮತಿ ಸೂಚಿಸಿದ ಹಿನ್ನೆಲೆ ತುಳು ಸಿನಿಮಾ ರಂಗಕ್ಕೆ ಪೋತ್ಸಾಹ ನೀಡುವುದಾಗಿ ವಕೀಲರ ಸಂಘ ತಿಳಿಸಿದೆ.

ಇಂದು ಸುದ್ದಿಗೋಷ್ಠಿಯಲ್ಲಿ ಸಿನಿಮಾ ಚಿತ್ರತಂಡ ಹಾಗೂ ವಕೀಲರ ಸಂಘ ಮಾತನಾಡಿ, ಮಾತುಕತೆಯಲ್ಲೇ ಬಗೆಹರಿದ ಹಿನ್ನೆಲೆ ಸೆ.16ಕ್ಕೆ ನ್ಯಾಯಾಲಯಕ್ಕೆ ಪತ್ರವನ್ನೂ ನೀಡಿದ್ದೇವೆ.

ಆಕಸ್ಮಿಕವಾಗಿ ನಡೆದ ಘಟನೆಗೆ ಪರಿಹಾರ ಸಿಕ್ಕಿದೆ. ವವಕೀಲರ  ಭಾವನೆಗೆ ಸ್ಪಂದಿಸಿದ ಚಿತ್ರತಂಡ ಚಿತ್ರದಲ್ಲಿರುವ ಸಂಭಾಷಣೆಗೆ ತಕ್ಷಣವೇ ಮ್ಯೂಟ್ ಹಾಗೂ ದೃಶ್ಯಗಳನ್ನು ಕಟ್ ಮಾಡುವುದಾಗಿ ಚಿತ್ರತಂಡ ಭರವಸೆ ನೀಡಿದೆ ಎಂದರು.