ಅತಿವೇಗದ ಕಂಬಳ ಓಟಗಾರ ಶ್ರೀನಿವಾಸ ಗೌಡ ಜೀವನಾಧರಿತ ಸಿನಿಮಾ!

ಅತಿವೇಗದ ಕಂಬಳ ಓಟಗಾರ ಶ್ರೀನಿವಾಸ ಗೌಡ ಜೀವನಾಧರಿತ ಸಿನಿಮಾ!

HSA   ¦    Feb 19, 2020 10:11:51 AM (IST)
ಅತಿವೇಗದ ಕಂಬಳ ಓಟಗಾರ ಶ್ರೀನಿವಾಸ ಗೌಡ ಜೀವನಾಧರಿತ ಸಿನಿಮಾ!

ಬೆಂಗಳೂರು: ಕಂಬಳದಲ್ಲಿ ಈಗಾಗಲೇ ಉಸೈನ್ ಬೋಲ್ಟ್ ದಾಖಲೆ ಮುರಿಯುವಂತಹ ಸಾಧನೆ ಮಾಡಿರುವಂತಹ ಕಂಬಳ ಓಟಗಾರ ಶ್ರೀನಿವಾಸ ಗೌಡ ಜೀವನಾಧಿತ ಕಥೆಯ ಕಂಬಳ ಚಿತ್ರವನ್ನು ಮಾಡಲು ತಯಾರಿ ನಡೆದಿದೆ.

ಕರಾವಳಿಯ ಉದ್ಯಮಿ ಲೋಕೇಶ್ ಶೆಟ್ಟಿ ಅವರು ಕಂಬಳ ಎಂಬ ಹೆಸರನ್ನು ಈಗಾಗಲೇ ಫಿಲ್ಮ್ ಚೇಂಬರ್ ನಲ್ಲಿ ನೋಂದಾಯಿಸಿದ್ದಾರೆ. ನಿಖಿಲ್ ಮಂಜು ಅವರು ಸಿನಿಮಾ ನಿರ್ದೇಶಿಸಲಿದ್ದಾರೆ ಎಂದು ಬೆಂಗಳೂರಿನಲ್ಲಿ ಹಲವಾರು ಹೋಟೆಲ್ ಗಳ ಮಾಲಕರಾಗಿರುವ ಲೋಕೇಶ್ ಶೆಟ್ಟಿ ತಿಳಿಸಿದರು.

ಫಿಲ್ಮ್ ಚೇಂಬರ್ ಗೆ 10500 ರೂಪಾಯಿ ಕಟ್ಟಿ ಕಂಬಳ ಹೆಸರನ್ನು ಅವರು ನೋಂದಾಯಿಸಿರುವರು. ಕಂಬಳದಲ್ಲಿ ಶ್ರೀನಿವಾಸ ಗೌಡ ಮಾಡಿರುವ ಸಾಧನೆಯು ಈಗಾಗಲೇ ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಟ್ಟಿದೆ.