ಕೊರೊನಾದಿಂದ ನಿಧನರಾದ ಕನ್ನಡ ಚಿತ್ರರಂಗದ ಹಿರಿಯ ನಟ, ಪತ್ರಕರ್ತ ಸುರೇಶ್ ಚಂದ್ರ

ಕೊರೊನಾದಿಂದ ನಿಧನರಾದ ಕನ್ನಡ ಚಿತ್ರರಂಗದ ಹಿರಿಯ ನಟ, ಪತ್ರಕರ್ತ ಸುರೇಶ್ ಚಂದ್ರ

Ms   ¦    Jun 11, 2021 05:00:50 PM (IST)
ಕೊರೊನಾದಿಂದ ನಿಧನರಾದ ಕನ್ನಡ ಚಿತ್ರರಂಗದ ಹಿರಿಯ ನಟ, ಪತ್ರಕರ್ತ ಸುರೇಶ್ ಚಂದ್ರ

ಬೆಂಗಳೂರು : ಕನ್ನಡದ 50 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ನಟ , ಪತ್ರಕರ್ತ ಸುರೇಶ್ ಚಂದ್ರ ಇಂದು ಕೊನೆಯುಸಿರೆಳೆದಿದ್ದಾರೆ. 

 69 ಸುರೇಶ್ ಚಂದ್ರ ಬೆಂಗಳೂರು ನಗರದ ಅಪೋಲೋ ಆಸ್ಪತ್ರೆಯಲ್ಲಿ ಕೆಲವು ದಿನಗಳಿಂದ ಕೊರೋನ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.  

 ಸಂಜೆವಾಣಿ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಸುರೇಶ್ ಚಂದ್ರ ಅವರು ಕಳೆದ ವರ್ಷ ನಿವೃತ್ತರಾಗಿದ್ದರು . ಸುರೇಶ್ ಚಂದ್ರ ಅವರಿಗೆ ನಾಟಕ , ಸಾಹಿತ್ಯ ಹಾಗೂ ಭಾವಗೀತೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರು ಎಂದು ಹೇಳಲಾಗಿತ್ತು.