45ನೇ ವಸಂತಕ್ಕೆ ಕಾಲಿಟ್ಟ ಪುನೀತ್ ರಾಜ್ ಕುಮಾರ್

45ನೇ ವಸಂತಕ್ಕೆ ಕಾಲಿಟ್ಟ ಪುನೀತ್ ರಾಜ್ ಕುಮಾರ್

YK   ¦    Mar 17, 2020 03:56:24 PM (IST)
45ನೇ ವಸಂತಕ್ಕೆ ಕಾಲಿಟ್ಟ ಪುನೀತ್ ರಾಜ್ ಕುಮಾರ್

ಬೆಂಗಳೂರು: ನಟ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಂದು 45ನೇ ವಸಂತಕ್ಕೆ ಕಾಲಿಡುತ್ತಿದ್ದು, ಕೊರೊನಾ ಮುನ್ನೆಚ್ಚರಿಕ ಕ್ರಮವಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಎಂದು ಅಭಿಮಾನಿಗಳ ಬಳಿ ಹೇಳಿಕೊಂಡಿದ್ದಾರೆ.

ಜನ್ಮ ದಿನಕ್ಕೆ ಶುಭ ಹರಸಲು ಮನೆ ಬಳಿ ಯಾರೂ ಬರಬೇಡಿ, ಆ ದಿನ ನಾನು ಮನೆಯಲ್ಲೂ ಇರುವುದಿಲ್ಲ. ನೀವು ಮುನ್ನೆಚ್ಚರಿಕೆ ವಹಿಸಿ ಸುರಕ್ಷಿತವಾಗಿರುವುದೇ ನನಗೆ ಕೊಡುವ ಒಂದು ದೊಡ್ಡ ಉಡುಗೊರೆ ಎಂದು ಭಾವಿಸಿರುವುದಾಗಿ ಅವರು ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣದ ಮೂಲಕ ಸಂದೇಶ ರವಾನಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಅಪ್ಪುಗೆ ಗಣ್ಯರು, ಸಿನಿಮಾ ರಂಗದ ನಟ, ನಟಿಯರು ಸೇರಿದಂತೆ ಅಭಿಮಾನಿಗಳು ಶುಭಕೋರಿದ್ದಾರೆ.