ಕಿರುತೆರೆ ನಟಿ ಪ್ರೇಕ್ಷಾ ಮೆಹ್ತಾ ಆತ್ಮಹತ್ಯೆ

ಕಿರುತೆರೆ ನಟಿ ಪ್ರೇಕ್ಷಾ ಮೆಹ್ತಾ ಆತ್ಮಹತ್ಯೆ

HSA   ¦    May 27, 2020 12:46:12 PM (IST)
ಕಿರುತೆರೆ ನಟಿ ಪ್ರೇಕ್ಷಾ ಮೆಹ್ತಾ ಆತ್ಮಹತ್ಯೆ

ನವದೆಹಲಿ: ಕಿರುತೆರೆ ನಟಿ ಪ್ರೇಕ್ಷಾ ಮೆಹ್ತಾ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕರಣ್ ಕುಂದ್ರಾ, ಅರ್ಜುನ್ ಬಿಜ್ಲಾನಿ, ಸುರಭಿ ಚಂದನ, ದಿವ್ಯಾ ಅಗರ್ವಾಲ್ ಮತ್ತಿತರರು ಆಕೆಯ ಸಾವಿಗೆ ಶೋಕ ವ್ಯಕ್ತಪಡಿಸಿರುವರು.

ಲಾಕ್ ಡೌನ್ ನಿಂದಾಗಿ ಮುಂಬಯಿಯಿಂದ ಮರಳಿದ್ದ 25ರ ಹರೆಯದ ಪ್ರೇಕ್ಷಾ ಅವರು ಇಂದೋರ್ ನಲ್ಲಿ ನಿನ್ನೆ ಆತ್ಮಹತ್ಯೆ ಮಾಡಿಕೊಂಡಿರುವರು.

ತನ್ನ ವೃತ್ತಿ ಹಾಗೂ ಸಂಬಂಧದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದೇನೆ. ಕನಸುಗಳು ಸಾಯುತ್ತಿರುವುದು ತುಂಬಾ ಕೆಟ್ಟದು ಎಂದು ಅವರು ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವರು.