ಹಿರಿಯ ರಂಗ ಕಲಾವಿದೆ ಶೋಭಾ ರಂಜೋಳಕರ್ ನಿಧನ

ಹಿರಿಯ ರಂಗ ಕಲಾವಿದೆ ಶೋಭಾ ರಂಜೋಳಕರ್ ನಿಧನ

Jayashree Aryapu   ¦    May 16, 2021 04:59:52 PM (IST)
ಹಿರಿಯ ರಂಗ ಕಲಾವಿದೆ ಶೋಭಾ ರಂಜೋಳಕರ್ ನಿಧನ

ಕಲಬುರ್ಗಿ: ಹಿರಿಯ ರಂಗಕಲಾವಿದೆ, ರಂಗ ನಿರ್ದೇಶಕಿ ಹಾಗೂ ಚಿತ್ರನಟಿ ಶೋಭಾ ರಂಜೋಳಕರ್ (67) ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು.

ಮೂಲತಃ ತೆಲಂಗಾಣದ ಕೋಡಂಗಲ್ ನವರಾದ ಶೋಭಾ ಅವರನ್ನು ಸೇಡಂನ ರಂಜೋಳದ ಎಂಜಿನಿಯರ್ ‌ಭೀಮರಾವ ಕುಲಕರ್ಣಿ ಅವರಿಗೆ ಮದುವೆ ಮಾಡಿಕೊಡಲಾಗಿತ್ತು. ಅಂದಿನಿಂದ ತಮ್ಮ ಮನೆತನದ ಹೆಸರನ್ನು ರಂಜೋಳಕರ ಎಂದು ಕರೆಸಿಕೊಂಡರು.

ರಂಗಮಾಧ್ಯಮ ‌ಕಲಾತಂಡ ಹಾಗೂ ‌ಸಂಗಮೇಶ್ವರ ಮಹಿಳಾ ಮಂಡಳದ ಮೂಲಕ ನಾಟಕಗಳನ್ನು ‌ನಿರ್ಮಿಸಿ ಅಭಿನಯಿಸಿದ್ದಾರೆ. ಕಳೆದ ವರ್ಷ ನಗರದ ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಎಲ್ಲ 35 ಪಾತ್ರಗಳಲ್ಲಿ ಮಹಿಳೆಯರೇ ಇದ್ದ 'ಯುದ್ಧ ಭಾರತ' ನಾಟಕವನ್ನು ಪ್ರದರ್ಶಿಸಿದ್ದರು.

ಡಾ.ಚಂದ್ರಶೇಖರ ‌ಕಂಬಾರರೊಂದಿಗೆ ‌ʼಬೆಳದಿಂಗಳಾಗಿ ಬಾʼ ಸೇರಿದಂತೆ ಮಹಾದಾಸೋಹಿ ಶರಣಬಸವೇಶ್ವರ, ಗೌತಮ್ ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.