ಖ್ಯಾತ ಸಿನಿ ಪತ್ರಕರ್ತ ರಾಜೀವ್ ಮಸಂದ್ ಗೆ ಕೊರೋನ

ಖ್ಯಾತ ಸಿನಿ ಪತ್ರಕರ್ತ ರಾಜೀವ್ ಮಸಂದ್ ಗೆ ಕೊರೋನ

Jayashree Aryapu   ¦    May 03, 2021 04:57:55 PM (IST)
ಖ್ಯಾತ ಸಿನಿ ಪತ್ರಕರ್ತ ರಾಜೀವ್ ಮಸಂದ್ ಗೆ ಕೊರೋನ

ಮುಂಬೈ: ಖ್ಯಾತ ಸಿನಿಮಾ ಪತ್ರಕರ್ತ ಮತ್ತು ವಿಮರ್ಶಕ ರಾಜೀವ್ ಮಸಂದ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ರಾಜೀವ್ ಮಸಂದ್ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಮುಂಬೈನ ಕೋಕಿಲಾಬೆನ್ ಧೀರುಭಾಯ್ ಅಂಬಾನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಾವು ಬದುಕಿನ ನಡುವೆ ಹೋರಾಡುತ್ತಿರುವ ರಾಜೀವ್ ಶೀಘ್ರ ಚೇತರಿಸಿಕೊಳ್ಳಲಿ ಎಂದು ಸಿನಿ ಗಣ್ಯರು ಹಾರೈಸುತ್ತಿದ್ದಾರೆ. ಸದ್ಯ ವೆಂಟಿಲೇಟರ್ ಮೂಲಕ ಉಸಿರಾಡುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಅನೇಕ ವರ್ಷಗಳಿಂದ ಸಿನಿಮಾ ಪತ್ರಕರ್ತರಾಗಿ ಕೆಲಸ ಮಾಡುತ್ತಿರುವ ರಾಜೀವ್ ಮಸಂದ್ ಸಾಕಷ್ಟು ಸಿನಿಮಾಗಳ ವಿಮರ್ಶೆ ಮಾಡಿದ್ದಾರೆ.