ಇಂದಿಗೆ ಜೋಗಿ ಸಿನಿಮಾ ತೆರೆ ಕಂಡು 14 ವರ್ಷ

ಇಂದಿಗೆ ಜೋಗಿ ಸಿನಿಮಾ ತೆರೆ ಕಂಡು 14 ವರ್ಷ

YK   ¦    Aug 19, 2019 04:44:33 PM (IST)
ಇಂದಿಗೆ ಜೋಗಿ ಸಿನಿಮಾ ತೆರೆ ಕಂಡು 14 ವರ್ಷ

ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ಪ್ರದರ್ಶನವನ್ನು ಕಂಡ ಪ್ರೇಮ್ ನಿರ್ದೇಶನದ ‘ಜೋಗಿ’ ಚಿತ್ರಕ್ಕೆ ಇಂದು 14ನೇ ವರ್ಷ ತುಂಬಿದೆ. ಈ ಸಂತಸದ ವಿಚಾರವನ್ನು ಪ್ರೇಮ್ ಅವರು ಟ್ವೀಟ್ ಮಾಡಿದ್ದಾರೆ.

‘ಇಡೀ ಭಾರತೀಯ ಚಿತ್ರರಂಗವೇ ಒಂದು ಬಾರಿ ಕನ್ನಡದ ಕಡೆ ತಿರುಗಿ ನೋಡುವಂತೆ ಮಾಡಿದ ಚಿತ್ರ ಜೋಗಿ ಗೆ ಇಂದು 14ನೇ ವರ್ಷ ತುಂಬಿದೆ. ನನ್ನ ಪ್ರೀತಿಯ ಅಣ್ಣ ಹ್ಯಾಟ್ರಿಕ್ ಹೀರೋ ಶಿವಣ್ಣ, ಅಶ್ವಿನಿ ಕಂಪನಿ, ಗುರುಕಿರಣ್ ಹಾಗೂ ನನ್ನ ಇಡೀ ಚಿತ್ರ ತಂಡಕ್ಕೆ ತುಂಬು ಹೃದಯದ ಧನ್ಯಾವಾದಗಳು. ಸದಾ ಕನ್ನಡ ಸಿನಿಮಾಗಳನ್ನು ಬೆಳೆಸಿ, ಪ್ರೋತ್ಸಾಹಿಸಿ ಎಂದು ಬರೆದುಕೊಂಡಿದ್ದಾರೆ.

2005ರಲ್ಲಿ ಬಿಡುಗಡೆಗೊಂಡ ಯುಶಸ್ವಿ ಚಿತ್ರಗಳಲ್ಲಿ ಜೋಗಿ ಚಿತ್ರವೂ ಒಂದು. ಈ ಚಿತ್ರದ ಮೂಲಕ ನಿರ್ದೇಶಕ ಪ್ರೇಮ್ ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯ ನಿರ್ದೇಶಕರಲ್ಲೊ ಒಬ್ಬರಾದರು.

ಚಿತ್ರವನ್ನು ಪಿ.ಕೃಷ್ಣ ಪ್ರಸಾದ್ ಹಾಗೂ ರಾಮಪ್ರಸಾದ್ ಅವರು ನಿರ್ಮಾಣ ಮಾಡಿದ್ದರು. ಚಿತ್ರದ ನಟಿ ಜೆನ್ನಿಫರ್ ಕೊತ್ವಾಲ್ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರುಇ.

More Images