ಕೊನೆಯುಸಿರೆಳೆದ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಬುದ್ಧದೇಬ್ ದಾಸ್ ಗುಪ್ತಾ

ಕೊನೆಯುಸಿರೆಳೆದ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಬುದ್ಧದೇಬ್ ದಾಸ್ ಗುಪ್ತಾ

Ms   ¦    Jun 10, 2021 03:58:25 PM (IST)
ಕೊನೆಯುಸಿರೆಳೆದ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಬುದ್ಧದೇಬ್ ದಾಸ್ ಗುಪ್ತಾ

ಕೊಲ್ಕತ್ತಾ : ಕೊನೆಯುಸಿರೆಳೆದ ರಾಷ್ಟ್ರಪ್ರಶಸ್ತಿ ವಿಜೇತ ಖ್ಯಾತ ನಿರ್ದೇಶಕ ಬುದ್ಧದೇಬ್ ದಾಸ್ ಗುಪ್ತಾ ಅವರು ನಿಧನಹೊಂದಿದ್ದಾರೆ . ಕಳೆದ ಹಲವು ತಿಂಗಳಿನಿಂದ ಬುದ್ಧದೇಬ್ ದಾಸ್ ಗುಪ್ತಾ ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ವರದಿಗಳು ತಿಳಿಸಿವೆ. 

 

ಬಾಗ ಬಹದೂರ್ , ಚರಾಚರ್ ಆ್ಯಂಡ್ ಉತ್ತರಾ ಸೇರಿದಂತೆ ಹಲವು ಚಿತ್ರಗಳನ್ನು ಅವರು ನಿರ್ದೇಶಿಸಿದ್ದರು. ಸಿನೆಮಾ ನಿರ್ದೇಶನದಲ್ಲಿ ಅವರು ತಮ್ಮದೇ ಆದ ಛಾಪು ಮೂಡಿಸಿದ್ದರು . ಕೆಲವು ದಿನಗಳಿಂದ ಕೊಲ್ಕತ್ತಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಅಸುನೀಗಿದ್ದಾರೆ.  

 

ಬುದ್ಧದೇಬ್ ದಾಸ್ ಗುಪ್ತಾ ನಿಧನಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತಾಪ ಸೂಚಿಸಿದ್ದಾರೆ . 

 

 ಪ್ರಧಾನಿ ನರೇಂದ್ರ ಮೋದಿ ಅವರ ಸಾವಿನ ಕುರಿತು ಸಂತಾಪ ವ್ಯಕ್ತಪಡಿಸಿದ್ದು, ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ, ''ಶ್ರೀ ಬುದ್ಧದೇಬ್ ದಾಸ್‌ಗುಪ್ತಾ ಅವರ ನಿಧನದಿಂದ ದುಃಖವಾಗಿದೆ. ಅವರ ವೈವಿಧ್ಯಮಯ ಕೃತಿಗಳು ಸಮಾಜದ ಎಲ್ಲಾ ವರ್ಗಗಳ ಜೊತೆಗೂಡಿವೆ. ಅವರು ಪ್ರಖ್ಯಾತ ಚಿಂತಕರಾಗಿದ್ದರು ಮತ್ತು ಕವಿ. ದುಃಖದ ಈ ಸಮಯದಲ್ಲಿ ನನ್ನ ಆಲೋಚನೆಗಳು ಅವರ ಕುಟುಂಬ ಮತ್ತು ಹಲವಾರು ಅಭಿಮಾನಿಗಳೊಂದಿಗೆ ಇವೆ ಎಂದಿದ್ದಾರೆ.