ನಟ ಹೃತಿಕ್ ರೋಷನ್ ಗೆ ಮುಂಬೈ ಪೊಲೀಸರಿಂದ ನೋಟಿಸ್ ಜಾರಿ

ನಟ ಹೃತಿಕ್ ರೋಷನ್ ಗೆ ಮುಂಬೈ ಪೊಲೀಸರಿಂದ ನೋಟಿಸ್ ಜಾರಿ

MS   ¦    Feb 26, 2021 03:14:23 PM (IST)
ನಟ ಹೃತಿಕ್ ರೋಷನ್ ಗೆ ಮುಂಬೈ ಪೊಲೀಸರಿಂದ ನೋಟಿಸ್ ಜಾರಿ

ಮುಂಬೈ : ನಟಿ ಕಂಗನಾ ಹಾಗೂ ಹೃತಿಕ್ ರೋಷನ್ ನಡುವೆ ಹಲವು ದಿನಗಳಿಂದ ಭಾಗವಾದ ಹಾಗೂ ಮನಸ್ತಾಪಗಳು ಬಹಿರಂಗವಾಗಿ ನಡೆದಿದ್ದು, ನಟಿ ಕಂಗನಾ ರಣಾವತ್‌ ವಿರುದ್ಧ ಹೃತಿಕ್ ರೋಷನ್ ದೂರು ನೀಡಿದ್ದರು ಎನ್ನಲಾಗಿದೆ.

ಈ ವಿಷಯವಾಗಿ ಹೃತಿಕ್ ರೋಷನ್ ಸ್ಪಷ್ಟನೆ ನೀಡಿದ್ದು ತಮ್ಮ ಇಮೇಲ್ ಹ್ಯಾಕ್ ಆಗಿರುವುದಾಗಿ ಆರೋಪಿಸಿದ್ದರು. ಈ ಎಲ್ಲದರ ವಿಷಯವಾಗಿ ಹೇಳಿಕೆ ದಾಖಲಿಸಿಕೊಂಡ ಮುಂಬೈ ಅಪರಾಧ ಗುಪ್ತದಳ ಇಲಾಖೆ ಹೃತಿಕ್ ರೋಷನ್ ಗೆ ನೋಟಿಸ್ ಜಾರಿ ಮಾಡಿದೆ ಹಾಗೂ ಫೆಬ್ರವರಿ 27 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ ಎಂದು ವರದಿಗಳು ತಿಳಿಸುತ್ತವೆ.

ಈ ಎಲ್ಲದರ ಮಧ್ಯೆ, ಕಂಗನಾ ರಣಾವತ್ ತಮ್ಮ ಅಶ್ಲೀಲ ಚಿತ್ರಗಳನ್ನು ಹೃತಿಕ್ ರೋಷನ್ ಗೆ ಕಳುಹಿಸಿದ್ದರು ಎಂದು ಕೂಡ ಆರೋಪಿಸಲಾಗಿತ್ತು.