ಒಂದೇ ದಿನದಲ್ಲಿ ಇಪ್ಪತ್ತು ಮಿಲಿಯನ್ ವೀಕ್ಷಣೆಗಾಗಿ ಟ್ರೆಂಡ್ ಆದ 777 ಚಾರ್ಲಿ ' ಚಿತ್ರದ ಟೀಸರ್

ಒಂದೇ ದಿನದಲ್ಲಿ ಇಪ್ಪತ್ತು ಮಿಲಿಯನ್ ವೀಕ್ಷಣೆಗಾಗಿ ಟ್ರೆಂಡ್ ಆದ 777 ಚಾರ್ಲಿ ' ಚಿತ್ರದ ಟೀಸರ್

Ms   ¦    Jun 08, 2021 05:56:48 PM (IST)
ಒಂದೇ ದಿನದಲ್ಲಿ ಇಪ್ಪತ್ತು ಮಿಲಿಯನ್ ವೀಕ್ಷಣೆಗಾಗಿ ಟ್ರೆಂಡ್ ಆದ 777 ಚಾರ್ಲಿ ' ಚಿತ್ರದ ಟೀಸರ್

ಬೆಂಗಳೂರು : ಬಿಡುಗಡೆಯಾಗಿ ಒಂದೇ ದಿನದಲ್ಲಿ ಇಪ್ಪತ್ತು ಮಿಲಿಯನ್ ವೀಕ್ಷಣೆಯನ್ನು ಪಡೆಯುವ ಮೂಲಕ 777 ಚಾರ್ಲಿ ' ಚಿತ್ರದ ಟೀಸರ್ ಹೊಸ ದಾಖಲೆಯನ್ನು ಬರೆದಿದೆ. 

ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹುಟ್ಟು ಹಬ್ಬದ ಪ್ರಯುಕ್ತ ಐದು ಭಾಷೆಗಳಾದ ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ಬಿಡುಗಡೆ ಮಾಡಲಾಗಿತ್ತು.

ಈ ಐದೂ ಟೀಸರ್‌ಗಳು ಒಂದೇ ದಿನದಲ್ಲಿ 20 ಮಿಲಿಯನ್ ವೀಕ್ಷಣೆ ಪಡೆದಿವೆ . ಚಿತ್ರವನ್ನು ಕಿರಣ ರಾಜ್ ನಿರ್ದೇಶನ ಮಾಡಿದ್ದು , ನಾಯಿಯೊಂದಿಗಿನ ಭಾವನಾತ್ಮಕ ಟೀಸರ್ ಬಿಡುಗಡೆ ಮಾಡಿ ಪ್ರೇಕ್ಷಕರ ಮನ ಗೆದ್ದಿದ್ದಾರೆ . ಚಿತ್ರವನ್ನು ಥಿಯೇಟರ್ ನಲ್ಲೇ ಬಿಡುಗಡೆ ಮಾಡಬೇಕು ಎಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದು , ಲಾಕ್ ಡೌನ್ ಬಳಿಕ ಚಿತ್ರ ಬಿಡುಗಡೆಯಾಗುವ ನಿರೀಕ್ಷೆಯಿದೆ .