ಜೇಮ್ಸ್ ಬಾಂಡ್ ಖ್ಯಾತಿಯ ನಟಿಗೆ ಕೊರೋನಾ ಸೋಂಕು

ಜೇಮ್ಸ್ ಬಾಂಡ್ ಖ್ಯಾತಿಯ ನಟಿಗೆ ಕೊರೋನಾ ಸೋಂಕು

HSA   ¦    Mar 16, 2020 01:41:27 PM (IST)
ಜೇಮ್ಸ್ ಬಾಂಡ್ ಖ್ಯಾತಿಯ ನಟಿಗೆ ಕೊರೋನಾ ಸೋಂಕು

ಲಾಸ್ ಏಂಜಲೀಸ್: ಉಕ್ರೈನ್ ಮೂಲದ ನಟಿ ಹಾಗೂ ರೂಪದರ್ಶಿ ಒಲ್ಗಾ ಕೂರಿಲೆಂಕೊ ಅವರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

2008ರಲ್ಲಿ ಜೇಮ್ಸ್ ಬಾಂಡ್ ಸಿನಿಮಾದಲ್ಲಿ ನಟಿಸಿದ್ದ ಒಲ್ಗಾ ಅವರು 2013ರಲ್ಲಿ ಬಿಡುಗಡೆಯಾದ ಒಬ್ಲಿವಿಯೊನ್ ಸಿನಿಮಾದಲ್ಲೂ ನಟಿಸಿದ್ದರು. ತನಗೆ ಕೊರೋನಾ ಸೋಂಕು ಇದೆ ಎಂದು ಅವರು ಭಾನುವಾರ ತನ್ನ ಇನ್ ಸ್ಟಾ ಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

40ರ ಹರೆಯದ ಒಲ್ಗಾ ಅವರು ಕಳೆದ ಒಂದು ವಾರದಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಅವರ ರಕ್ತ ಪರೀಕ್ಷೆಯಲ್ಲಿ ಕೊರೋನಾ ಪಾಸಿಟಿವ್ ಎಂದು ಪತ್ತೆಯಾಗಿದೆ.

ತನ್ನ ಮನೆಯಲ್ಲೇ ಈಗ ನಾನು ಪ್ರತ್ಯೇಕವಾಗಿದ್ದೇನೆ. ಕಳೆದ ಒಂದು ವಾರದಿಂದ ಜ್ವರ ಮತ್ತು ಬಳಲಿಕೆ ಕಾಡುತ್ತಿದೆ. ನಿಮ್ಮ ಕಾಳಜಿ ವಹಿಸಿ ಮತ್ತು ಇದನ್ನು ಗಂಭೀರವಾಗಿ ಪರಿಗಣಿಸಿ ಎಂದು ಅವರು ಹೇಳಿದ್ದಾರೆ.