ನಿಷೇಧಾಜ್ಞೆ ವೇಳೆ ಜಾಲಿರೈಡ್ ಗೆ ಹೋದ ಶರ್ಮಿಳಾ ಮಾಂಡ್ರೆ ಕಾರು ಅಪಘಾತ

ನಿಷೇಧಾಜ್ಞೆ ವೇಳೆ ಜಾಲಿರೈಡ್ ಗೆ ಹೋದ ಶರ್ಮಿಳಾ ಮಾಂಡ್ರೆ ಕಾರು ಅಪಘಾತ

HSA   ¦    Apr 04, 2020 05:04:15 PM (IST)
ನಿಷೇಧಾಜ್ಞೆ ವೇಳೆ ಜಾಲಿರೈಡ್ ಗೆ ಹೋದ ಶರ್ಮಿಳಾ ಮಾಂಡ್ರೆ ಕಾರು ಅಪಘಾತ

ಬೆಂಗಳೂರು: ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಅದನ್ನು ಉಲ್ಲಂಘಿಸಿ ರಾತ್ರಿ ವೇಳೆ ಜಾಲಿ ರೈಡ್ ಗೆ ಹೋದ ನಟಿ ಶರ್ಮಿಳಾ ಮಾಂಡ್ರೆ ಕಾರು ಈಗ ಅಪಘಾತಕ್ಕೀಡಾಗಿದೆ.

ಶುಕ್ರವಾರ ರಾತ್ರಿ ವೇಳೆ ಈ ಘಟನೆ ನಡೆದಿದ್ದು, ವಸಂತನಗರ ಕೆಳಸೇತುವೆ ಬಳಿಯಲ್ಲಿ ಕಾರು ಅಪಘಾತಕ್ಕೀಡಾಗಿದ್ದು, ಮಾಂಡ್ರೆ ಮತ್ತು ಆಕೆಯ ಸ್ನೇಹಿತನೊಬ್ಬ ಗಾಯಗೊಂಡಿದ್ದಾನೆ. ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿಷೇಧಾಜ್ಞೆ ಉಲ್ಲಂಘಿಸಿರುವ ಮಾಂಡ್ರೆ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.